ಕುಮಟಾ : ಉತ್ತರಕನ್ನಡ ಜಿಲ್ಲೆಗೆ ಪ್ರವಾಸಕ್ಕೆ ಬಂದು ಕುಮಟಾ ತಾಲೂಕಿನ ಬಾಡ ಬೀಚ್ ನಲ್ಲಿ ಸಮುದ್ರಕ್ಕಿಳಿದಾಗ ಅಲೆಯಹೊಡೆತಕ್ಕೆ ಸಿಕ್ಕು ಮೃತಪಟ್ಟಿದ್ದ ದಾವಣಗೆರೆ ಮೂಲದ ವಿದ್ಯಾರ್ಥಿಯ ಮೃತದೇಹ ಬುಧವಾರ ಕುಮಟಾ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಅಗಸ್ಟ್ 16 ರಂದು ವಿದ್ಯಾರ್ಥಿಗಳೊಂದಿಗೆ ಪ್ರವಾಸಕ್ಕೆ ಬಂದಿದ್ದ ರೇಣುಕಾಪ್ರಸಾದ ಮತ್ತು ಮೇಘ.ಎಂ, ಎಂಬಿಬ್ಬರು ಸಮುದ್ರಕ್ಕಿಳಿದಾಗ ಸುಳಿಗೆ ಸಿಕ್ಕು ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದರು.ಎರಡುದಿನಗಳ ತೀವೃ ಶೋಧನೆಯ ನಂತರ ಬುಧವಾರ ಮಧ್ಯಾಹ್ನ ಯುವಕನ ಮೃತದೇಹ ಪತ್ತೆಯಾಗಿದೆ.
ಸ್ಥಳೀಯರು ಹಾಗೂ ಪೊಲೀಸರು ತೀವೃ ಹುಡುಕಾಟದ ನಂತರ ವಿದ್ಯಾರ್ಥಿನಿ ಮೇಘಾಳ ಶವ ಘಟನೆ ನಡೆದ ದಿನವೇ ಪತ್ತೆಯಾಗಿತ್ತು. ಆದರೆ ರೇಣುಕಾ ಪ್ರಸಾದನ ಶವ ಪತ್ತೆಯಾಗಿರಲಿಲ್ಲ. ಇಂದು ಆತನಶವ ಪತ್ತೆಯಾಗಿದೆ.
ದಾವಣಗೆರೆ ಮೂಲದ ವಿದ್ಯಾರ್ಥಿಗಳಾಗಿದ್ದ ಇವರು ಉತ್ತರಕನ್ನಡದ ಪ್ರವಾಸಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿತ್ತು. ಇದೀಗ ಕುಟುಂಬಕ್ಕೆಶವ ಹಸ್ತಾಂತರ ಪ್ರಕ್ರಿಯೆಗಳು ನಡೆಯುತ್ತಿದೆ ಎನ್ನಲಾಗಿದೆ.