ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ನ ಪ್ರಕಾರ ಇಂದು 53 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ. ಇಂದು ಕಾರವಾರದಲ್ಲಯ ಒಂದು ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ. ಒಟ್ಟೂ ಸಾವಿನ ಸಂಖ್ಯೆ 752 ಕ್ಕೆ ಏರಿದೆ.
ಹೆಲ್ತ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 16, ಅಂಕೋಲಾದಲ್ಲಿ 9, ಕುಮಟಾದಲ್ಲಿ 12, ಹೊನ್ನಾವರ 7, ಭಟ್ಕಳದಲ್ಲಿ 1, ಶಿರಸಿಯಲ್ಲಿ 5, ಸಿದ್ದಾಪುರದಲ್ಲಿ 0, ಯಲ್ಲಾಪುರದಲ್ಲಿ 3, ಮುಂಡಗೋಡ 0, ಹಳಿಯಾಳದಲ್ಲಿ 0, ಮತ್ತು ಜೋಯಿಡಾದಲ್ಲಿ 0 ಒಟ್ಟೂ 53 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 456 ಆಗಿದ್ದು, ಅವರಲ್ಲಿ 100 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 356 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.
ಕಾರವಾರ 15, ಅಂಕೋಲಾ 2, ಕುಮಟಾ 15, ಹೊನ್ನಾವರ 2, ಭಟ್ಕಳ 0, ಶಿರಸಿ 9, ಸಿದ್ದಾಪುರ 2, ಯಲ್ಲಾಪುರ 1, ಮುಂಡಗೋಡ 10, ಹಳಿಯಾಳ 0, ಜೋಯ್ಡಾ 0 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 56 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.
ಕರೋನಾ ಹೆಲ್ತ್ ಬುಲೆಟಿನ್ ಪ್ರಕಾರ ಇಂದು ಕಾರವಾರದಲ್ಲಿ ಅತಿ ಹೆಚ್ಚು 16 ಕುಮಟಾದಲ್ಲಿ ಎರಡನೇ ಸ್ಥಾನ ಅಂದರೆ 12 ಜನರಲ್ಲಿ ಕರೋನಾ ಕಾಣಿಸಿಕೊಂಡಿದೆ.
ಇದು ನಮ್ಮ ಕಳಕಳಿ…
ಕೊರೋನಾ ಬಗ್ಗೆ ಜನತೆ ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಳ್ಳುವ ಅಗತ್ಯತೆ ಇದ್ದು, ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಾವೂ ನಿಮ್ಮಲ್ಲಿ ವಿನಂತಿಸುತ್ತೇವೆ.