ಮಂಗಳೂರು : ಸಿದ್ದರಾಮಯ್ಯ ಸರ್ಕಾರದ ದೆಸೆಯಿಂದರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿನಿರ್ಮಾಣವಾಗಿದೆ ಎಂದು ಶೋಭಾ ಕರಂದ್ಲಾಜೆ ರಾಜ್ಯಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳೂರು ಚಲೋ ಬೈಕ್ ಜಾಥಾಕ್ಕೆ ಹೊರಟ ಬಿಜೆಪಿಕಾರ್ಯಕರ್ತರನ್ನು ಬಂಧಿಸುವ ಅಗತ್ಯೆವೇನಿತ್ತು ಎಂದು ಪ್ರಶ್ನಿಸಿದ ಶೋಭಾ ಕಾರ್ಯಕರ್ತರೇನು ಶಸ್ತ್ರಾಸ್ತ್ರವೇನು ಹೊಂದಿರಲಿಲ್ಲ ಎಂದರು. ಒಂದು ಬೈಕ್ ಜಾಥಾಕ್ಕೆ ಸಿಎಂಹೆದರಿದ್ದಾರೆ. ಇದೇ ಉದ್ದೇಶದಿಂದ Rallyಗೆ ನಿರಾಕರಣೆಮಾಡಿದ್ದಾರೆ ಎಂದು ಟೀಕಿಸಿದರು.
ಗೌರಿ ಲಂಕೇಶ್ ಅವರ ಹತ್ಯೆಗೈದ ದುಷ್ಕರ್ಮಿಗಳ ಬಂಧನಮಾಡುವ ಬದಲು ಅಮಾಯಕರನ್ನು ಬಂಧಿಸುತ್ತಿದ್ದಾರೆ. ಹತ್ಯೆ ಮಾಡಿದ ಆರೋಪಿಗಳನ್ನು ಬಂಧಿಸುವ ಸಾಮರ್ಥ್ಯಸರ್ಕಾರಕ್ಕಿಲ್ಲ ಎಂದು ಶೋಭಾ ಛೇಡಿಸಿದ್ದಾರೆ.
ಚುನಾವಣೆ ಘೋಷಣೆ ಆಗುವವರೆಗೂ ನಮ್ಮ ಹೋರಾಟನಿರಂತರ. ಇನ್ನು ಆರು ತಿಂಗಳಲ್ಲಿ ಯಡ್ಡಿಯೂರಪ್ಪಸರ್ಕಾರ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯನವರ ಸರ್ಕಾರದಂತಹ ಭ್ರಷ್ಟ ಸರ್ಕಾರ ಮತ್ತೊಂದಿಲ್ಲ ಎಂದು ಶೋಭಾ ಹರಿಹಾಯ್ದರು.
ಸಂಘ ಪರಿವಾರದ ಕಾರ್ಯಕರ್ತರನ್ನು ಹತ್ಯೆಮಾಡುತ್ತಿರುವ ಪಿಎಫ್ ಐ, ಕೆಎಫ್ ಡಿ, ಎಸ್ ಡಿಪಿಐನಿಷೇಧಿಸಬೇಕು. ಹಾಗೆಯೇ ಸಚಿವ ರಮಾನಾಥ ರೈಸಂಪುಟದಿಂದ ಕೈಬಿಡಬೇಕು ಎಂದ ಅವರು ಹಿಂದೂಹೋರಾಟಗಾರರ ಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆಎಂದು ಶೋಭಾ ಗುಡುಗಿದರು.