ಶಿರಸಿ : ತಾಲೂಕಿನ ಕೋಟೆ ಕೆರೆಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿದ್ದು 60 ವರ್ಷದ ವ್ಯಕ್ತಿ ಕೋಟೆಕೆರೆಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಮೃತಪಟ್ಟ ವ್ಯಕ್ತಿ ಸಾರಾಯಿ ಮತ್ತಿನಲ್ಲಿದ್ದ ಎನ್ನುವ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಲಿದೆ. ಆ ಬಗ್ಗೆ ತನಿಖೆಯ ನಂತರದಲ್ಲಿ ಮಾಹಿತಿ ಲಭಿಸಲಿದೆ.
ಶಿರಸಿ ತಾಲೂಕಿನ ಆರೆಕೊಪ್ಪದ ಶಂಕ್ರಪ್ಪ ಯಲ್ಲಪ್ಪ ನಾಗೋಹಿ ಮೃತಪಟ್ಟ ವೃದ್ಧ. ಈತ ಆರೆಕೊಪ್ಪದವನಾಗಿದ್ದರೂ ಸಹ ಮೃತಪಟ್ಟ ವ್ಯಕ್ತಿ ಕೋಟೆಕೆರೆ ಸಮೀಪದಲ್ಲಿಯೇ ತಿರುಗಾಡುತ್ತಿದ್ದ ಎನ್ನಲಾಗಿದೆ. ಕೆರೆಯಲ್ಲಿ ಬರುವ ತೆಂಗಿನ ಕಾಯಿ ಹೆಕ್ಕುವ ಕೆಲಸದಲ್ಲಿ ನಿರತರಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ತಡ ರಾತ್ರಿಯ ವೇಳೆಗೆ ಘಟನೆ ನಡೆದಿರಬಹುದೆಂದು ಪೊಲೀಸರು ಊಹಿಸಿದ್ದು, ಬೆಳಿಗ್ಗೆ ಕೆರೆಯಲ್ಲಿ ದೇಹ ತೇಲಿಬಂದ ನಂತರ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಕುರಿತು ಶಿರಸಿ ಮಾರುಕಟ್ಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಾವು ಹೇಗೆ ಸಂಭವಿಸಿರಬಹುದು ಎನ್ನುವುದರ ಬಗ್ಗೆ ಪೊಲೀಸ್ ತನಿಖೆಯ ನಂತರದಲ್ಲಿ ಸಂಪೂರ್ಣ ಮಾಹಿತಿ ತಿಳಿದು ಬರಬೇಕಿದೆ.