ಭಟ್ಕಳ: ಪುರಸಭೆ ವ್ಯಾಪ್ತಿಯಲ್ಲಿ ವಿವಿದೆಡೆ ಶುಕ್ರವಾರ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಒಟ್ಟು 2000ಸಾವಿರ ವ್ಯಾಕ್ಷಿನ ಡೋಸ್‌ಗಳು ಲಭ್ಯವಿದ್ದು ಲಸಿಕಾ ಮಹಾ ಅಭಿಯಾನ ನಡೆಯಲಿದೆ. ಕೋವಿಡ್ ಪಾಸಿಟಿವಿಟಿ ದರ ಈಗಾಗಲೆ ಹೆಚ್ಚುತ್ತಿದೆ. ಪಕ್ಕದ ಜಿಲ್ಲೆಯಲ್ಲಿ ವಾರಾಂತ್ಯದ ಲಾಕ್‌ಡೌನ್ ಆರಂಭವಾಗಿದೆ. 3ನೇ ಅಲೆಯ ಆತಂಕ ಎದುರಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.ಕೋವಿಡ್‌ನಿಂದ ಮುಕ್ತಿ ಹೊಂದಲು ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಪಡೆಯುವುದೊಂದೆ ಪರಿಹಾರ. ತಾಲೂಕಿನಲ್ಲಿ ಲಸಿಕೆಯ ಅಭಾವವನ್ನು ಮನಗಂಡ ಜಿಲ್ಲಾ ವ್ಯಾಕ್ಷಿನೇಶನ್ ಅಧಿಕಾರಿ ಡಾ. ರಮೇಶ ರಾವ್ ನಮ್ಮ ಆಗ್ರಹದ ಮೇರೆಗೆ ಭಟ್ಕಳ ತಾಲೂಕಿಗೆ ಒಟ್ಟು 3500 ಲಸಿಕೆಯನ್ನು ಒದಗಿಸಿದ್ದಾರೆ.

RELATED ARTICLES  ಸುಳ್ಯ ತಾಲೂಕು ಭಾರತೀಯ ಗೋ ಪರಿವಾರ ರಚನೆ ಹಾಗೂ ಅಭಯಾಕ್ಷರ ಚಾಲನೆ

ಭಟ್ಕಳದಲ್ಲಿ ಎಲ್ಲೆಲ್ಲಿ?

ಪುರಸಭೆ ವ್ಯಾಪ್ತಿಯಲ್ಲಿ 2000 ವ್ಯಾಕ್ಷಿನ್ ನೀಡಿದರೆ ತಾಲೂಕಿನ ಗ್ರಾಮೀಣ ಭಾಗಗಳಲ್ಲೂ 1500 ವ್ಯಾಕ್ಷಿನ್ ನೀಡಲಾಗುವದು.ಮಗ್ದೂಮ ಕಾಲನಿಯ ಜುಮ್ಮಾ ಮಸೀದಿ ಬಳಿಯ ಶಾದಿ ಮಹಲ್‌ನಲ್ಲಿ 500 ಡೋಸ್, ಪಟ್ಟಣದ ಶ್ರೀ ಗುರು ರಾಘವೇಂದ್ರ ಮಠದ ಹಿಂಬಾಗದಲ್ಲಿ 1 ಸಾವಿರ ಡೋಸ್, ಪುರವರ್ಗದ ಸರ್ಕಾರಿ ಶಾಲೆಯಲ್ಲಿ 500 ಡೋಸ್‌ಗಳನ್ನು ನೀಡಲು ನಿರ್ಧರಿಸಲಾಗಿದೆ.

ಹೊನ್ನಾವರದಲ್ಲಿ ಎಲ್ಲೆಲ್ಲಿ?

ಹೊನ್ನಾವರ ತಾಲ್ಲೂಕಿನಲ್ಲಿ ಶುಕ್ರವಾರ ಒಟ್ಟು 2,800 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಪಟ್ಟಣದ ಮಾರ್ಥೋಮಾ ಶಾಲೆಯಲ್ಲಿ, ಕಾಸರಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ,ಹೊಸಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ,ಸಾಲಕೋಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಮುಗ್ವಾ ಹಾಗೂ ಕಡತೋಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ಲಭ್ಯವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.

RELATED ARTICLES  ದಲಿತರೇನು ಪಾಪಿಗಳಾ?: ಬಿಜೆಪಿ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ

ಸಾರ್ವಜನಿಕರು ಯಾವುದೆ ಜನಜಂಗುಳಿಗೆ ಆಸ್ಪದ ನೀಡದೆ ಬೆಳಿಗ್ಗೆಯಿಂದ ಸಂಜೆಯವರೆಗೆ ನೀಡುವ ಈ ಲಸಿಕಾಕರಣದ ಮಹಾ ಅಭಿಯಾನದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಂದು ಲಸಿಕೆ ಪಡೆಯಬೇಕು.