ಕಾರವಾರ: ಬೇಗ ಲಸಿಕೆ ಪಡೆಯಬೇಕು ಎಂಬ ಉತ್ತರಕನ್ನಡ ಜಿಲ್ಲೆಯ ಜನರ ಆಸೆ ಆದಷ್ಟು ಶೀಘ್ತವಾಗಿ ಈಡೆರುವಂತೆ ಕಾಣುತ್ತಿದ್ದು ನಾಳೆ ಜಿಲ್ಲೆಯಲ್ಲಿ ಅತಿಹೆಚ್ಚು ಪ್ರಮಾಣದ ಲಸಿಕೆ ಲಭ್ಯವಿದೆ.

ಎಲ್ಲಾ ತಾಲೂಕುಗಳಿಗೂ ಸೇರಿ 22,800 ವ್ಯಾಕ್ಸಿನ್ ಹಂಚಿಕೆ ಮಾಡಲಾಗಿದೆ. ಕಾರವಾರದಲ್ಲಿ 2 ಸಾವಿರ, ಮುಂಡಗೋಡ 1,200, ಕುಮಟಾ 2,800, ಶಿರಸಿ 2,800, ಸಿದ್ದಾಪುರ 1,300 , ಯಲ್ಲಾಪುರ 1,200, ಅಂಕೋಲಾ 2 ಸಾವಿರ, ಭಟ್ಕಳ 3,500, ಹಳಿಯಾಳ 1,200, ಹೊನ್ನಾವರ 2,500, ಜೋಯ್ಡಾದಲ್ಲಿ 800, ದಾಂಡೇಲಿ 1 ಸಾವಿರ, ಜಿಲ್ಲಾಸ್ಪತ್ರೆಯಲ್ಲಿ 500 ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯ ವಾಗುವ ಬಗ್ಗೆ ಮಾಹಿತಿ ಲಭ್ಯವಿದೆ.

ಅಂಕೋಲಾದಲ್ಲಿ ಎಲ್ಲೆಲ್ಲಿ?

ನಾಳೆ ಅಂಕೋಲಾದಲ್ಲಿ ಒಟ್ಟೂ 2000 ಕೋವಿಡ್ ಲಸಿಕೆಗಳು ಲಭ್ಯವಿದೆ. ಭಾವಿಕೇರಿ, ಉಳುವರೆ,ಅರ‍್ಸಾ ಹಾಗೂ ಪಟ್ಟಣದ ಸ್ವಾತಂತ್ರ‍್ಯ ಸಂಗ್ರಾಮ ಸಂಗ್ರಾಮ ಸ್ಮಾರಕ ಭವನಗಳಲ್ಲಿ ತಲಾ 300ಡೋಸ್ ಲಸಿಕೆಗಳು ಲಭ್ಯವಿದ್ದು ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ದ್ವಿತೀಯ ಡೋಸ್ ಸಮ ಹಂಚಿಕೆಯೊಂದಿಗೆ ಗರ್ಬಿಣಿಯರು ಮತ್ತು ಬಾಣಂತಿಯರಿಗೆ (20 ) ಡೋಸ್ ಕಾಯ್ದಿರಿಸಲಾಗಿದೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 30-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಅಂಬಾರಕೋಡ್ಲ, ಗುಂಡಬಾಳ, ಸುಂಕಸಾಳ, ರಾಮನಗುಳಿ ವ್ಯಾಪ್ತಿಯಲ್ಲಿ ತಲಾ 200 ಡೋಸ ಲಸಿಕೆಗಳು ಲಭ್ಯವಿದ್ದು 50% 50% ಹಂಚಿಕೆ ಹಾಗೂ ಗರ್ಬಿಣಿಯರು ಮತ್ತು ಬಾಣಂತಿಯರಿಗೆ ( 20) ಡೋಸ್ ಲಸಿಕೆ ಕಾಯ್ದಿರಿಸಲಾಗಿದೆ ಎನ್ನಲಾಗಿದೆ.

ಶಿರಸಿಯಲ್ಲಿ ಎಲ್ಲೆಲ್ಲಿ?

ತಾಲೂಕಿನಲ್ಲಿ ಒಟ್ಟು 2,650 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಸಾಲ್ಕಣಿಯಲ್ಲಿ 250, ಮೆಣಸಿ 100, ಬನವಾಸಿಯಲ್ಲಿ 300, ಹೆಗಡೆಕಟ್ಟಾದಲ್ಲಿ 300, ಕಕ್ಕಳ್ಳಿ 200, ಹುಲೇಕಲ್ 200, ಬಿಸಲಕೊಪ್ಪ 200, ಸುಗಾವಿ 200, ಸಿಂಪಿಗಲ್ಲಿ ರುದ್ರ ದೇವಚರ ಮಠದಲ್ಲಿ 200, ದಾಸನಕೊಪ್ಪ 200, ರೇವಣಕಟ್ಟಾ 200 ಡೋಸ್ ಲಸಿಕೆ ಲಭ್ಯವಿದೆ. ಮೊದಲ ಮತ್ತು 2ನೇ ಡೋಸ್ ಲಸಿಕೆ ಪಡೆಯುವವರು ಇದರ ಸೌಲಭ್ಯ ಪಡೆದುಕೊಳ್ಳಬಹುದು.

ಹೊನ್ನಾವರದಲ್ಲಿ ಎಲ್ಲೆಲ್ಲಿ?
ಹೊನ್ನಾವರ ತಾಲ್ಲೂಕಿನಲ್ಲಿ ಶುಕ್ರವಾರ ಒಟ್ಟು 2,800 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಪಟ್ಟಣದ ಮಾರ್ಥೋಮಾ ಶಾಲೆಯಲ್ಲಿ, ಕಾಸರಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ,ಹೊಸಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ,ಸಾಲಕೋಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಮುಗ್ವಾ ಹಾಗೂ ಕಡತೋಕಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ಲಭ್ಯವಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 06-04-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಭಟ್ಕಳದಲ್ಲಿ ಎಲ್ಲೆಲ್ಲಿ?
ಪುರಸಭೆ ವ್ಯಾಪ್ತಿಯಲ್ಲಿ 2000 ವ್ಯಾಕ್ಷಿನ್ ನೀಡಿದರೆ ತಾಲೂಕಿನ ಗ್ರಾಮೀಣ ಭಾಗಗಳಲ್ಲೂ 1500 ವ್ಯಾಕ್ಷಿನ್ ನೀಡಲಾಗುವದು.ಮಗ್ದೂಮ ಕಾಲನಿಯ ಜುಮ್ಮಾ ಮಸೀದಿ ಬಳಿಯ ಶಾದಿ ಮಹಲ್‌ನಲ್ಲಿ 500 ಡೋಸ್, ಪಟ್ಟಣದ ಶ್ರೀ ಗುರು ರಾಘವೇಂದ್ರ ಮಠದ ಹಿಂಬಾಗದಲ್ಲಿ 1 ಸಾವಿರ ಡೋಸ್, ಪುರವರ್ಗದ ಸರ್ಕಾರಿ ಶಾಲೆಯಲ್ಲಿ 500 ಡೋಸ್‌ಗಳನ್ನು ನೀಡಲು ನಿರ್ಧರಿಸಲಾಗಿದೆ

ಸಾರ್ವಜನಿಕರು ಯಾವುದೆ ಜನಜಂಗುಳಿಗೆ ಆಸ್ಪದ ನೀಡದೆ ಬೆಳಿಗ್ಗೆಯಿಂದ ಸಂಜೆಯವರೆಗೆ ನೀಡುವ ಈ ಲಸಿಕಾಕರಣದ ಮಹಾ ಅಭಿಯಾನದಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಂದು ಲಸಿಕೆ ಪಡೆಯಬೇಕು.