ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ನ ಪ್ರಕಾರ ಇಂದು 48 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ. ಇಂದು ಭಟ್ಕಳದಲ್ಲಿ ಒಂದು ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ. ಒಟ್ಟೂ ಸಾವಿನ ಸಂಖ್ಯೆ 753 ಕ್ಕೆ ಏರಿದೆ.

ಹೆಲ್ತ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 9, ಅಂಕೋಲಾದಲ್ಲಿ 4, ಕುಮಟಾದಲ್ಲಿ 21, ಹೊನ್ನಾವರ 6, ಭಟ್ಕಳದಲ್ಲಿ 4, ಶಿರಸಿಯಲ್ಲಿ 3, ಸಿದ್ದಾಪುರದಲ್ಲಿ 0, ಯಲ್ಲಾಪುರದಲ್ಲಿ 1, ಮುಂಡಗೋಡ 0, ಹಳಿಯಾಳದಲ್ಲಿ 0, ಮತ್ತು ಜೋಯಿಡಾದಲ್ಲಿ 0 ಒಟ್ಟೂ 48 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

RELATED ARTICLES  ಮಾಜಿ ತಾಪಂ ಸದಸ್ಯ ರಾಜುಪಟಗಾರ ಬಿಜೆಪಿ ಬಲಕ್ಕೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 438 ಆಗಿದ್ದು, ಅವರಲ್ಲಿ 96 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 342 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 21, ಅಂಕೋಲಾ‌ 12, ಕುಮಟಾ 15, ಹೊನ್ನಾವರ 0, ಭಟ್ಕಳ 2, ಶಿರಸಿ 10 ಸಿದ್ದಾಪುರ 2, ಯಲ್ಲಾಪುರ 2, ಮುಂಡಗೋಡ 0, ಹಳಿಯಾಳ 1, ಜೋಯ್ಡಾ 0 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 65 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  ಕಾರವಾರ ಚೆಕ್ ಪೋಸ್ಟ್ ದಾಟಿ ಗೋವಾಕ್ಕೆ ಹೋದವನಲ್ಲಿಯೂ ಕೋರೋನಾ ಪಾಸಿಟೀವ್..! ಮೂಲದ ಪತ್ತೆ ಕಾರ್ಯ ಶುರು

ಕರೋನಾ ಹೆಲ್ತ್ ಬುಲೆಟಿನ್ ಪ್ರಕಾರ ಇಂದು ಕುಮಟಾದಲ್ಲಿ ಅತಿ ಹೆಚ್ಚು 21 ಕಾರವಾರ ಎರಡನೇ ಸ್ಥಾನ ಅಂದರೆ 9 ಜನರಲ್ಲಿ ಕರೋನಾ ಕಾಣಿಸಿಕೊಂಡಿದೆ.

ಇದು ನಮ್ಮ ಕಳಕಳಿ…
ಕೊರೋನಾ ಬಗ್ಗೆ ಜನತೆ ಸಾಕಷ್ಟು ಮುಂಜಾಗ್ರತಾ ಕ್ರಮ‌ಕೈಗೊಳ್ಳುವ ಅಗತ್ಯತೆ ಇದ್ದು, ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಾವೂ ನಿಮ್ಮಲ್ಲಿ ವಿನಂತಿಸುತ್ತೇವೆ.