ಹೊನ್ನಾವರ: ಗ್ರೇನೆಟ್ ಹಾಗೂ ಕಡಪ ತುಂಬಿದ ಲಾರಿ ಪಲ್ಟಿಯಾಗಿರುವ ಘಟನೆ ತಾಲೂಕಿನ ಗೇರುಸೊಪ್ಪಾ ಸುಳೆಮಕ್ಕಿ ಕ್ರಾಸ್ ತಿರುವಿನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ. ಗ್ರೇನೆಟ್ ಹಾಗೂ ಕಡಪ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಕ್ರಾಸ್ ಪಲ್ಟಿಯಾಗಿದೆ. ಅದೃಷ್ಟವಶಾತ್ ವಾಹನದಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಆಂಧ್ರಪ್ರದೇಶದಿಂದ ಉಡುಪಿ ಗ್ರೇನೆಟ್ ಹಾಗೂ ಕಡಪ ತುಂಬಿಕೊಂಡು ಹೋಗುತ್ತಿರುವಾಗ ಗೇರುಸೊಪ್ಪಾ ಬಳಿ ರಸ್ತೆಯ ಪಕ್ಕದ ಹೊಂಡದಲ್ಲಿ ಬಿದ್ದಿತ್ತು. ವಾಹನ ಚಾಲಕ ವಾಹನದಲ್ಲಿ ಸಿಲುಕಿದ್ದರೆ, ಇನೊರ್ವನ ಮೇಲೆ ಗ್ರೇನೆಟ್ ಬಿದ್ದು ಕೆಲಕಾಲ ಸ್ಥಳದಲ್ಲಿ ಗಂಭೀರ ಸ್ಥಿತಿ ನಿರ್ಮಾಣವಾಯಿತು.
ಮಾಹಿತಿ ದೊರೆತ ತಕ್ಷಣ ಕಾರ್ಯಪ್ರವೃತ್ತ 112 ಸಿಬ್ಬಂದಿಗಳು ಸ್ಥಳಿಯರ ಸಹಕಾರದಿಂದ ಇರ್ವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಇರ್ವರು ಅಪಾಯದಿಂದ ಪಾರಾಗಿದ್ದಾರೆ . ಈ ಕುರಿತು ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.