ಹೊನ್ನಾವರ- ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್‌ಇಂಡಿಯಾ ನಾರ್ಥ ಕೆನರಾ ಬ್ರಾಂಚ್ ಕುಮಟಾ ಇವರ ವತಿಯಿಂದ ನ್ಯೂ ಇಂಗ್ಲೀಷ್ ಸ್ಕೂಲ್‌ನಲ್ಲಿ ಉಚಿತ ಪೌಷ್ಟಿಕ ಆಹಾರ ವಿತರಣಾ ಶಿಬಿರವನ್ನು ಮಂಗಳಮುಖಿ (ಟ್ರಾನ್ಸ ಜೆಂಡರ) ಸಮುದಾಯದವರಿಗೆ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್‌ಇಂಡಿಯಾದ ಕುಮಟಾದ ಕಾರ್ಯದರ್ಶಿ ಡಾ// ಪ್ರೀತಿ ಭಂಡಾರಕರ್ ಹಾಜರಿದ್ದರು ಹಾಗೂ ಫ್ಯಾಮಿಲಿ ಪ್ಲಾನಿಂಗ್‌ನ ಪೌಷ್ಠಿಕ ಆಹಾರವನ್ನು ಮಂಗಳಮುಖಿಯವರಿಗೆ ವಿತರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಫ್ಯಾಮಿಲಿ ಪ್ಲಾನಿಂಗ್ ಮ್ಯಾನೇಜರ್ ಆದ ಶ್ರೀಮತಿ ಸಂತಾನ್ ಲೂಯಿಸ್‌ರವರು ಮಂಗಳಮುಖಿಯವರಿಗೆ ಪೌಷ್ಠಿಕ ಆಹಾರವನ್ನು ವಿತರಿಸಿ, ಅವರಿಗೆ ಆಗುವ ಅನ್ಯಾಯದ ಕುರಿತು ಬೇಸರ ವ್ಯಕ್ತಪಡಿಸಿ, ಅವರ ಆರೋಗ್ಯದ ಕುರಿತು ಮಾತನಾಡಿದರು.
ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಶನ್ ಆಫ್‌ಇಂಡಿಯಾದ ಪ್ರೋಗ್ರಾಮ್ ಆಫೀಸರ್ ಆದಂತಹ ಶ್ರೀಮತಿ ಮಂಜುಳಾ ಗೌಡ ಸ್ವಾಗತಿಸಿ-ವಂದಿಸಿದರು.
ನ್ಯೂ ಇಂಗ್ಲೀಷ್ ಸ್ಕೂಲ್ ನ ಪ್ರಾಂಶುಪಾಲರು ಈ ಕಾರ್ಯಕ್ರಮ ಮಾಡಲು ಸ್ಥಳಾವಕಾಶ ನೀಡಿ ಪ್ರೋತ್ಸಾಹಿಸಿದರು. ಶಿಲ್ಪಾ ನಾಯ್ಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
.