ಕಾರವಾರ : ಕೊರೋನಾ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಒಂದೆಡೆ ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ವಿಶೇಷ ಮುತುವರ್ಜಿಯಿಂದ ಹಾಗೂ ಎಲ್ಲ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೀವ್ರತರವಾಗಿ ಹೆಚ್ಚಿನ ಪ್ರಮಾಣದಲ್ಲಿ ನಡೆಸಲಾಗುತ್ತಿದೆ.

ನಾಳೆ ಶನಿವಾರ ದಿನಾಂಕ 21/08/2021 ರಂದು ಜಿಲ್ಲೆಯಲ್ಲಿ ಒಟ್ಟು 20,800 ವ್ಯಾಕ್ಸಿನ್ ಲಭ್ಯವಿದೆ. ಇವುಗಳಲ್ಲಿ 18,100 ಕೋವಿಶೀಲ್ಡ್ ಮತ್ತು 2,700 ಕೋವ್ಯಾಕ್ಸಿನ್ ಎಂದು ತಿಳಿದುಬಂದಿದೆ.

RELATED ARTICLES  ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ..!

ಹೊನ್ನಾವರದಲ್ಲಿ 2 ಸಾವಿರ ಕೋವಿಶೀಲ್ಡ್, ಜೋಯ್ಡಾ 800 ಕೋವಿಶೀಲ್ಡ್ ಲಭ್ಯವಿದೆ. ಅಲ್ಲದೆ, ಕಾರವಾರದಲ್ಲಿ 1,700 , ಮುಂಡಗೋಡಿನಲ್ಲಿ 1,200, ಕುಮಟಾ 2 ಸಾವಿರ, ಅಂಕೋಲಾದಲ್ಲಿ 1,500 ಕೋವಿಶೀಲ್ಡ್, ಭಟ್ಕಳದಲ್ಲಿ 1,500 ಕೋವಿಶೀಲ್ಡ್, ಹಳಿಯಾಳದಲ್ಲಿ 1,200 ಕೋವಿಶೀಲ್ಡ್, ಶಿರಸಿ 2,500, ಸಿದ್ದಾಪುರ 1,200, ಯಲ್ಲಾಪುರ 1,200 ದಾಂಡೇಲಿ 800, ಮತ್ತು ಜಿಲ್ಲಾಸ್ಪತ್ರೆಯಲ್ಲಿ 500 ಕೋವಿಶೀಲ್ಡ್ ಲಭ್ಯವಿದೆ. ಹೊನ್ನಾವರದಲ್ಲಿ 200, ಕಾರವಾರದಲ್ಲಿ 200, ಕುಮಟಾ 1 ಸಾವಿರ, ಸಿದ್ದಾಪುರ 1 ಸಾವಿರ, ದಾಂಡೇಲಿ 100, ಜಿಲ್ಲಾಸ್ಪತ್ರೆಯಲ್ಲಿ 200 ಕೋವ್ಯಾಕ್ಸಿನ್ ಲಭ್ಯವಿದೆ.

RELATED ARTICLES  ಜಿಂಕೆಯನ್ನು ಬೇಟೆಯಾಡಿ ಮಾಂಸ ಹಂಚಿಕೊಳ್ಳುತ್ತಿದ್ದಾಗ ದಾಳಿನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ

ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು , ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕಿದೆ. ಕೊರೋನಾ ಬಗ್ಗೆ ಜಾಗೃತರಾಗಿದ್ದು ಕೊರೋನಾ ಲಸಿಕೆ ಪಡೆಯುವ ಮೂಲಕ ಎಲ್ಲರೂ ಕೊರೋನಾ ನಿಯಂತ್ರಣಕ್ಕೆ ಸಹಕರಿಸುವಂತೆ ಆರೋಗ್ಯ ಇಲಾಖೆ ಜನತೆಯಲ್ಲಿ ಮನವಿ ಮಾಡಿದೆ.