ಇಂದಿನ ದಿನಮಾನದ ಶಿಕ್ಷಣ ವ್ಯವಸ್ಥೆಯು ಅಂಕಗಳಿಕೆಯೇ ಶಿಕ್ಷಣದ ಧ್ಯೇಯ ಎಂಬಂತೆ ಸಾಗುತ್ತಿದೆ. ಮಗುವಿನ ವ್ಯಕ್ತಿತ್ವವನ್ನು ಸಹಜವಾಗಿ ಅರಳಿಸುವಂತಹ ಕಾರ್ಯ ಇಂದಿನ ಶಿಕ್ಷಣದಿಂದ ಆಗುತ್ತಿದೆಯೇ ಎಂಬುದನ್ನು ವಸ್ತುನಿಷ್ಠವಾಗಿ ಆತ್ಮಾವಲೋಕನ ಮಾಡುವಂತಹ ಚಿಂತನೆಯನ್ನು ಶಿಕ್ಷಕರ ದಿನಾಚರಣೆಯಂದು ನಾವು ಮಾಡಬೇಕಾಗಿದೆ ಎಂದು ಎಸ್.ಡಿ.ಎಂ.ಕಾಲೇಜಿ ಕನ್ನಡ ವಿಭಾಗದ ಹಿರಿಯ ಉಪನ್ಯಾಸಕ ನಾಗರಾಜ ಹೆಗಡೆ ಅಪಗಾಲ ನುಡಿದರು.

ಅವರು ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು. ನಂತರ ಮಾತನಾಡಿದ ಅವರು ದೀಪವೊಂದು ಆರುವ ಮುನ್ನ ಇನ್ನೊಂದು ದೀಪವನ್ನು ಬೆಳಗಿ ಸಾರ್ಥಕತೆಯನ್ನು ಪಡೆಯುವಂತೆ ಶಿಕ್ಷಕವೃತ್ತಿಯಲ್ಲಿ ಶಿಕ್ಷಕ ಆತ್ಮ ತೃಪ್ತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. ಬರಿಯ ಆದರ್ಶಗಳ ನೆಲೆಯಲ್ಲಿ ಯೋಚಿಸದೆ ಇಂದಿನ ವಾಸ್ತವತೆಗಳ ನೆಲೆಯಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಕೆಲಸ ಶಿಕ್ಷಕರಿಂದಾಗಬೇಕಿದೆ ಎಂದು ಅವರು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕ ಎಜುಕೇಶನ್ ಟ್ರಸ್ಟನ ಅಧ್ಯಕ್ಷ ಡಾ.ಸುರೇಶ ನಾಯಕ ಮಾತನಾಡಿ ಶಿಕ್ಷ ನಿರಂತರ ವಿಧ್ಯಾರ್ಥಿಯಾಗಿದ್ದು ಅಧ್ಯಯನ ಅಧ್ಯಾಪನವನ್ನು ಮೈಗೂಡಿಸಿಕೊಳ್ಳಬೇಕೆಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಆರ್.ನರಸಿಂಹ ಮೂರ್ತಿ ಪ್ರಾಸ್ಥಾವಿಕ ನುಡಿಗಳನ್ನಾಡಿ ಓರ್ವ ಶಿಕ್ಷಕರಾಗಿ ರಾಧಾಕೃಷ್ಣನ್ ರವರ ಆದರ್ಶ ವ್ಯಕ್ತಿತ್ವ , ಪಾಂಡಿತ್ಯ ವಿಧ್ಯಾರ್ಥಿಗಳ ಮೇಲೆ ಅವರು ಬೀರಿದ ಪ್ರಭಾವಗಳನ್ನು ಉಲ್ಲೇಖಿಸಿ ಎಲ್ಲರನ್ನು ಸ್ವಾಗತಿಸಿದರು.

RELATED ARTICLES  ಶ್ರೀ ಯಶೋಧರ ನಾಯ್ಕ ಟ್ರಸ್ಟ್ ನಿಂದ ಆರೋಗ್ಯ ಮಾಹಿತಿ ಕಾರ್ಯಕ್ರಮ

ಕಾರ್ಯಕ್ರಮವನ್ನು ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಲಾಯಿತು. ಬಿ.ಎಡ್.ಪ್ರಶಿಕ್ಷಣಾರ್ಥಿಗಳು ರಾಧಾಕ್ರಷ್ಣನ್ ರವರ ವಿಚಾರ ಧಾರೆಗಳ ಕುರಿತು ಅನಿಸಿಕೆ ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ಭಾಷಾ ಸಂಘದಿಂದ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ ಭಾಷಣ ಸ್ಪರ್ಧೆಯಲಿ ಪ್ರಥಮ ಸ್ಥಾನ ಪಡೆದ ಜಗದೀಶ ನಾಯ್ಕ, ದ್ವಿತೀಯ ಸ್ಥಾನ ಪಡೆದ ನ್ಯಾನ್ಸಿ ಥೋಮಸ್,ಪ್ರೀತಿ ನಾಯ್ಕ ಮತ್ತು ತೃತೀಯ ಸ್ಥಾನವನ್ನುಪಡೆದ ಸ್ವಾತಿ ಮೇಸ್ತ, ಪ್ರೋತ್ಸಾಹಕ ಬಹುಮಾನ ಪಡೆದ ಕವಿತಾ ವಿಷ್ಣು ನಾಯ್ಕ ಮತ್ತು ಅಭಿತಾ ಇವರಿಗೆ ಬಹುಮಾನ ವಿತರಿಸಲಾಯಿತು. ಶ್ವೇತಾ ಸಂಗಡಿಗರು ಪ್ರಾರ್ಥಿಸಿದರು. ಉಷಾ ವಂದಿಸಿದರು. ಪ್ರಶಿಕ್ಷಣಾರ್ಥಿ ಪವಿತ್ರಾ ಹೇರೂರು ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರೆ ಚಂದ್ರಾವತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಲ್ಲಿ ಉಪನ್ಯಾಸಕ ವೃಂದ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES  ಗೋಕರ್ಣದ ತಾರಮಕ್ಕಿ ಕೇರಿಯಲ್ಲಿ ಗ್ರಾಮ ದೇವತೆ ಶ್ರೀ ಭದ್ರಕಾಳಿ ಪಲ್ಲಕ್ಕಿ ಉತ್ಸವ