ನಾಳೆ ಹೊನ್ನಾವರದಲ್ಲಿ ಎಲ್ಲೆಲ್ಲಿ ಲಸಿಕಾಕರಣ?

ನಾಳೆ ಹೊನ್ನಾವರ ತಾಲೂಕಿನ ಪಟ್ಟಣದ ಮಾರ್ಥೋಮಾ ಶಾಲೆಯ ಆವಾರದಲ್ಲಿ, ಪಟ್ಟಣ ಪಂಚಾಯತ ಆವರಣದಲ್ಲಿ, ಹಳದೀಪುರದ ಹೊರಭಾಗದಲ್ಲಿ, ಖರ್ವಾ ಪ್ರಾಥಮಿಕ ಆರೋಗ್ಯ ಕೇಂದ್ರದ ಚಿಕ್ಕನಕೋಡ, ಮಂಕಿ ದೇವರಗದ್ದೆಯಲ್ಲಿ ಲಸಿಕಾಕರಣ ಪ್ರಕ್ರಿಯೆ ನಡೆಯಲಿದೆ. ಒಟ್ಟೂ 2000 ಕೋವೀಶೀಲ್ಡ ಹಾಗೂ 200 ಕೋವ್ಯಾಕ್ಸೀನ್ ಲಭ್ಯವಿದೆ ಎಂದು ಮಾಹಿತಿ ಲಭ್ಯವಾಗಿದೆ.

ಅಂಕೋಲಾದಲ್ಲಿ ಎಲ್ಲಿ?

ಅಂಕೋಲಾ ತಾಲೂಕಿನ ವಿವಿಧ ಭಾಗಗಳಾದ ಲಕ್ಷೇಶ್ವರ, ಮೂಲೆಕೇಣಿ (ಕೇಣಿ), ಅಚವೆ ವ್ಯಾಪ್ತಿಯಲ್ಲಿ ತಲಾ 300ಡೋಸ್ ಲಸಿಕೆಗಳು ಲಭ್ಯವಿದ್ದು ಅವುಗಳಲ್ಲಿ ಪ್ರಥಮ ಡೋಸ್ (140),ದ್ವಿತೀಯ ಡೋಸ್ ( 140) ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರಿಗೆ (20 ) ಡೋಸ್ ಕಾಯ್ದಿರಿಸಲಾಗಿದೆ. ‘ ಮಂದಿಗೆ, ಬಬ್ರುವಾಡಾ, ಕೊಡ್ಸಣಿ ವ್ಯಾಪ್ತಿಯಲ್ಲಿ ತಲಾ 200 ಡೋಸ ಲಸಿಕೆಗಳು ಲಭ್ಯವಿದ್ದು ಅವುಗಳಲ್ಲಿ 1ನೇ ಡೋಸ್ ಗೆ (90), ದ್ವಿತೀಯ ಡೋಸ್ ಗೆ (90) ಹಾಗೂ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ( 20) ಡೋಸ್ ಲಸಿಕೆ ಕಾಯ್ದಿರಿಸಲಾಗಿದೆ.

RELATED ARTICLES  ಪ್ರವಾಹ ಪರಿಸ್ಥಿತಿ ನಿರ್ವಹಿಸಲು ರಾಜ್ಯ ಸರ್ಕಾರದಿಂದ 195 ಕೋಟಿ ಬಿಡುಗಡೆ.

ಶಿರಸಿಯಲ್ಲಿ ನಾಳೆ ಲಸಿಕೆ ಎಲ್ಲೆಲ್ಲಿ?

ಶಿರಸಿ ತಾಲೂಕಿನಲ್ಲಿ ಒಟ್ಟು 2850 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು, ಅದನ್ನು 1ನೇ ಮತ್ತು 2ನೇ ಡೋಸ್ ಪಡೆಯುವವರಿಗೆ ನೀಡಲಾಗುತ್ತದೆ. ನಗರದ ಯಲ್ಲಾಪುರ ರಸ್ತೆಯ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ 900 ನ್ನು 2ನೇ ಡೋಸ್ ಪಡೆಯುವವರಿಗೆ ಮಾತ್ರ ನೀಡಲಾಗುತ್ತದೆ. ರೇವಣಕಟ್ಟಾದಲ್ಲಿ 200, ಹುಲೇಕಲ್’ನಲ್ಲಿ 150, ದಾಸನಕೊಪ್ಪದಲ್ಲಿ 200, ಬಿಸಲಕೊಪ್ಪದಲ್ಲಿ 200, ಬನವಾಸಿಯಲ್ಲಿ 200 ಕಕ್ಕಳ್ಳಿಯಲ್ಲಿ 150, ಸಾಲ್ಕಣಿಯಲ್ಲಿ 300, ಸುಗಾವಿಯಲ್ಲಿ 200, ಮೆಣಸಿ 150, ಹೆಗಡೆಕಟ್ಟಾದಲ್ಲಿ 200 ಡೋಸ್ ಲಸಿಕೆ ಲಭ್ಯವಿದೆ.

ಕೊರೋನಾ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಒಂದೆಡೆ ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ವ್ಯಾಕ್ಸಿನೇಷನ್ ಪ್ರಕ್ರಿಯೆಯನ್ನು ವಿಶೇಷ ಮುತುವರ್ಜಿಯಿಂದ ಹಾಗೂ ಎಲ್ಲ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೀವ್ರತರವಾಗಿ ಹೆಚ್ಚಿನ ಪ್ರಮಾಣದಲ್ಲಿ ನಡೆಸಲಾಗುತ್ತಿದೆ.

ನಾಳೆ ಶನಿವಾರ ದಿನಾಂಕ 21/08/2021 ರಂದು ಜಿಲ್ಲೆಯಲ್ಲಿ ಒಟ್ಟು 20,800 ವ್ಯಾಕ್ಸಿನ್ ಲಭ್ಯವಿದೆ. ಇವುಗಳಲ್ಲಿ 18,100 ಕೋವಿಶೀಲ್ಡ್ ಮತ್ತು 2,700 ಕೋವ್ಯಾಕ್ಸಿನ್ ಎಂದು ತಿಳಿದುಬಂದಿದೆ. ಹೊನ್ನಾವರದಲ್ಲಿ 2 ಸಾವಿರ ಕೋವಿಶೀಲ್ಡ್, ಜೋಯ್ಡಾ 800 ಕೋವಿಶೀಲ್ಡ್ ಲಭ್ಯವಿದೆ. ಅಲ್ಲದೆ, ಕಾರವಾರದಲ್ಲಿ 1,700 , ಮುಂಡಗೋಡಿನಲ್ಲಿ 1,200, ಕುಮಟಾ 2 ಸಾವಿರ, ಅಂಕೋಲಾದಲ್ಲಿ 1,500 ಕೋವಿಶೀಲ್ಡ್, ಭಟ್ಕಳದಲ್ಲಿ 1,500 ಕೋವಿಶೀಲ್ಡ್, ಹಳಿಯಾಳದಲ್ಲಿ 1,200 ಕೋವಿಶೀಲ್ಡ್, ಶಿರಸಿ 2,500, ಸಿದ್ದಾಪುರ 1,200, ಯಲ್ಲಾಪುರ 1,200 ದಾಂಡೇಲಿ 800, ಮತ್ತು ಜಿಲ್ಲಾಸ್ಪತ್ರೆಯಲ್ಲಿ 500 ಕೋವಿಶೀಲ್ಡ್ ಲಭ್ಯವಿದೆ. ಹೊನ್ನಾವರದಲ್ಲಿ 200, ಕಾರವಾರದಲ್ಲಿ 200, ಕುಮಟಾ 1 ಸಾವಿರ, ಸಿದ್ದಾಪುರ 1 ಸಾವಿರ, ದಾಂಡೇಲಿ 100, ಜಿಲ್ಲಾಸ್ಪತ್ರೆಯಲ್ಲಿ 200 ಕೋವ್ಯಾಕ್ಸಿನ್ ಲಭ್ಯವಿದೆ.

RELATED ARTICLES  ಗೋಕರ್ಣ ದೇವಾಲಯವನ್ನು ವಶಪಡಿಸಿಕೊಳ್ಳುವುದು, ನ್ಯಾಯಾಂಗಕ್ಕೆ ಸರ್ಕಾರ ಮಾಡುತ್ತಿರುವ ಅಪಚಾರ : ಶ್ರೀ ರಾಮಚಂದ್ರಾಪುರ ಮಠದಿಂದ‌ ಸಲ್ಲಿಕೆಯಾಯ್ತು ನ್ಯಾಯಾಂಗ ನಿಂದನೆ ಅರ್ಜಿ!

ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು , ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕಿದೆ. ಕೊರೋನಾ ಬಗ್ಗೆ ಜಾಗೃತರಾಗಿದ್ದು ಕೊರೋನಾ ಲಸಿಕೆ ಪಡೆಯುವ ಮೂಲಕ ಎಲ್ಲರೂ ಕೊರೋನಾ ನಿಯಂತ್ರಣಕ್ಕೆ ಸಹಕರಿಸುವಂತೆ ಆರೋಗ್ಯ ಇಲಾಖೆ ಜನತೆಯಲ್ಲಿ ಮನವಿ ಮಾಡಿದೆ.