ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ನ ಪ್ರಕಾರ ಇಂದು 28 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ವರದಿಯಾಗಿದೆ. ಇಂದು ಕುಮಟಾದಲ್ಲಿ ಒಂದು ಸಾವು ಸಂಭವಿಸಿದ ಬಗ್ಗೆ ವರದಿಯಾಗಿದೆ. ಒಟ್ಟೂ ಸಾವಿನ ಸಂಖ್ಯೆ 755 ಕ್ಕೆ ಏರಿದೆ.

ಕಳೆದ‌ ಅನೇಕ ದಿನಗಳಿಂದ 50 ಕ್ಕೂ ಮಿಕ್ಕ ಕೊರೋನಾ ಪ್ರಕರಣ ದಾಖಲಾಗುತ್ತಿತ್ತು, ಇಂದು ಮತ್ತೆ ಕಡಿಮೆ ಪ್ರಕರಣ ದಾಖಲಾಗಿದ್ದು ಜನತೆಗೆ ಸ್ವಲ್ಪ ಮಟ್ಟಿನ ನೆಮ್ಮದಿಯನ್ನು ನೀಡುವ ಸುದ್ದಿಯಾಗಿದೆ.

RELATED ARTICLES  ಇಂದಿನ ಉತ್ತರ ಕನ್ನಡದ ಕೊರೋನಾ Update

ಹೆಲ್ತ ಬುಲೆಟಿನ್ ಪ್ರಕಾರ ಕಾರವಾರದಲ್ಲಿ 5, ಅಂಕೋಲಾದಲ್ಲಿ 5, ಕುಮಟಾದಲ್ಲಿ 7, ಹೊನ್ನಾವರ 1, ಭಟ್ಕಳದಲ್ಲಿ 3, ಶಿರಸಿಯಲ್ಲಿ 3, ಸಿದ್ದಾಪುರದಲ್ಲಿ 2, ಯಲ್ಲಾಪುರದಲ್ಲಿ 2, ಮುಂಡಗೋಡ 0, ಹಳಿಯಾಳದಲ್ಲಿ 0, ಮತ್ತು ಜೋಯಿಡಾದಲ್ಲಿ 0 ಒಟ್ಟೂ 28 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 399 ಆಗಿದ್ದು, ಅವರಲ್ಲಿ 96 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 303 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

ಕಾರವಾರ 18, ಅಂಕೋಲಾ‌ 4, ಕುಮಟಾ 8, ಹೊನ್ನಾವರ 32, ಭಟ್ಕಳ 2, ಶಿರಸಿ 0 ಸಿದ್ದಾಪುರ 0, ಯಲ್ಲಾಪುರ 0, ಮುಂಡಗೋಡ 0, ಹಳಿಯಾಳ 0, ಜೋಯ್ಡಾ 1 ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 65 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

RELATED ARTICLES  10,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಾ ಈ ಕಂಪೆನಿ..?

ಇದು ನಮ್ಮ ಕಳಕಳಿ…
ಕೊರೋನಾ ಬಗ್ಗೆ ಜನತೆ ಸಾಕಷ್ಟು ಮುಂಜಾಗ್ರತಾ ಕ್ರಮ‌ಕೈಗೊಳ್ಳುವ ಅಗತ್ಯತೆ ಇದ್ದು, ಮಾಸ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನಾವೂ ನಿಮ್ಮಲ್ಲಿ ವಿನಂತಿಸುತ್ತೇವೆ.