ಅಮೇರಿಕಾದ ಪ್ರತಿಷ್ಟಿತ ಬಾಹ್ಯಾಕಾಶ ಸಂಸ್ಥೆಯಾದ ‘ನಾಸಾ’ ದಿಂದ ಕೊಡಮಾಡುವ ‘ಫ಼್ಯೂಚರ್ ಇನ್ವೆಸ್ಟಿಗೇಟರ್’ ಪ್ರಶಸ್ತಿಗೆ ಜಿಲ್ಲೆಯ ಯುವ ಪ್ರತಿಭೆ ದಿನೇಶ ಹೆಗಡೆ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಸಶಿಗುಳಿ ಗ್ರಾಮದವರಾದ ದಿನೇಶ ಹೆಗಡೆ ನಾಸಾದ ಸಂಶೋಧನಾ ಪ್ರಶಸ್ತಿ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಅವರು ಅಮೇರಿಕಾದ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಅಧ್ಯಯನ ಮಾಡುತ್ತಿದ್ದಾರೆ.

ಪ್ರಸ್ತುತ ಅಮೆರಿಕದ ಹ೦ಟ್ಸ್ ವಿಲ್ಲೆ ಯಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ದಿನೇಶ ವಸಂತ ಹೆಗಡೆ, ನಾಸಾ ಫ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಆಯ್ಕೆಯಾಗಿ ಭಾರತದ ಕೀರ್ತಿ ಹೆಚ್ಚುವಂತೆ ಮಾಡಿದ್ದಾರೆ.ಈ ಪ್ರಶಸ್ತಿಗೆ ವಿಜ್ಞಾನದ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ ದಿನೇಶ ಹೆಗಡೆ ಹಾಗೂ ಕ್ಯಾಥರೀನ್ ಡೇವಿಡ್ಸನ್ ಅವರ ಜೊತೆ ಸಲ್ಲಿಸಿರುವ ಸಂಶೋಧನಾ ಪ್ರಸ್ತಾವನೆ ಆಯ್ಕೆಯಾಗಿದೆ.

ಯು.ಎ.ಎಚ್.ಸೆಂಟರ್ ಫ಼ಾರ್ ಸ್ಪೇಸ್ ಪ್ಲಾಸ್ಮಾ ಮತ್ತು ಏರೋನಾಮಿಕ್ ರಿಸರ್ಚ್’ ನ ಬಾಹ್ಯಾಕಾಶ ವಿಭಾಗದಲ್ಲಿ ಪದವಿ ಸಂಶೋಧನಾ ಸಹಾಯಕರಾಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ದಿನೇಶ ಹೆಗಡೆ ಹಾಗು ಕ್ಯಾಥರೀನ್ ಡೆವಿಡ್ಸನ್ ಎಂಬುವವರೊಂದಿಗೆ ಸಲ್ಲಿಸಿರುವ ‘ಬಾಹ್ಯಾಕಾಶ ಹವಾಮಾನದ ಅನಿಶ್ಚಿತತೆಗಳ ಪರಿಮಾಣಾತ್ಮಕ ಅಧ್ಯಯನ’ ವಿಷಯದ ಕುರಿತಾದ ಸಂಶೋಧನಾ ಪ್ರಸ್ತಾವನೆಗೆ ತಲಾ 1ಕೋಟಿ 42 ಸಾವಿರ (1,35,000 ಅಮೇರಿಕನ್ ಡಾಲರ್ ) ವಿದ್ಯಾರ್ಥಿವೇತನವನ್ನು ಪಡೆಯಲಿದ್ದಾರೆ.ಅವರು ಬಾಹ್ಯಾಕಾಶ ಹವಾಮಾನದ ಕುರಿತು ಅಧ್ಯಯನ ನಡೆಸಲು ಈ ಅನುದಾನ ನೀಡಲಾಗಿದೆ.

RELATED ARTICLES  ಅತಿದೊಡ್ಡ ಗೋಹತ್ಯಾ ನಿಷೇಧ ಆಂದೋಲನ 'ಅಭಯ ಗೋಯಾತ್ರೆ'ಯ ಸಮಾರೋಪಕ್ಕೆ ಭಾರೀ ಸಿದ್ಧತೆ.

ಸಿದ್ದಾಪುರ ತಾಲೂಕಿನ ವಾಜಗದ್ದೆ ಸರ್ಕಾರಿ ಶಾಲೆಯಲ್ಲಿ ಹಾಗೂ ಹಾರ್ಸಿಕಟ್ಟಾದ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿರುವ ಅವರು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಹಾಗೂ ಮೈಸೂರು ವಿವಿಯಿಂದ ಭೌತಶಾಸ್ತ್ರದಲ್ಲಿ ಎಂಎಸ್ಸಿ ಪಡೆದಿದ್ದಾರೆ. ಆ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಅವರು ಜಿಲ್ಲೆಯ ಹಾಗೂ ಕನ್ನಡನಾಡಿನ ಕೀರ್ತಿ ಪತಾಕೆ ಯನ್ನು ಉತ್ತುಂಗಕ್ಕೆರಿಸಿದ್ದಾರೆ.

ಈ ಸಂಶೋಧನೆಯನ್ನು (UAH) ಬಾಹ್ಯಾಕಾಶ ವಿಜ್ಞಾನ ವಿಭಾಗವು ನಾಸಾ ಅರ್ಥ್ ಮತ್ತು ಸ್ಪೇಸ್ ಸೈನ್ಸ್ ಮತ್ತು ಟೆಕ್ನಾಲಜಿ (FI-NESST) ಅನುದಾನದಲ್ಲಿ ನಾಸಾ ಪ್ಯೂಚರ್ ಇನ್ವೆಸ್ಟಿಗೇಟರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.ಈ ಪ್ರಶಸ್ತಿಗೆ ಆಯ್ಕೆಯಾದ ಈ ಇಬ್ಬರು ವಿದ್ಯಾರ್ಥಿಗಳಿಗೂ ಟ್ಯೂಷನ್, ಸಂಶೋಧನಾ ಚಟುವಟಿಕೆಗಳು ಮತ್ತು ಪ್ರಯಾಣ ವೆಚ್ಚಗಳನ್ನು ಭರಿಸಲು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳಿಗೆ ಹಾಜರಾಗಲು ತಲಾ 1,35,00,000 ಅಮಿರಿಕನ್ ಡಾಲರ್ ಸ್ಟೈಫಂಡ್ ನೀಡಲಾಗುವುದು ಎಂದು ವಿಶ್ವವಿದ್ಯಾನಿಲಯದ ವೆಬ್ಸೈಟ್‍ನಲ್ಲಿ ತಿಳಿಸಲಾಗಿದೆ.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್ ಇಲ್ಲಿದೆ.

ಬಾಹ್ಯಾಕಾಶ ವಿಜ್ಞಾನದ ವಿಶೇಷ ಪ್ರಾಧ್ಯಾಪಕ ಡಾ.ನಿಕೊಲಾಯ್ ಪೋಗೊರೆಲೋವ್ ಅವರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಅನಿಶ್ಚಿತತೆಯಿಂದ ಕೂಡಿರುವ ಬಾಹ್ಯಾಕಾಶ ಹವಾಮಾನವನ್ನು ಅಭ್ಯಾಸ ಮಾಡುವ ವಿಧಾನವನ್ನು ಸಂಶೋದನಾ ವಿಷಯವಾಗಿ ಆಯ್ದುಕೊಂಡು ಅಭ್ಯಾಸ ಮಾಡುತ್ತಿದ್ದಾರೆ.

ಈ ಜೊತೆಗೆ ಸೌರ ಮಾರುತದ ಗುಣಲಕ್ಷಣಗಳ ಬಗ್ಗೆ ಅಧ್ಯಯನ ಮಾಡುತ್ತಿರುವ ದಿನೇಶ್, ಪ್ಲಾಸ್ಮಾ ಸ್ಥಿತಿಯಲ್ಲಿ ಪ್ರೋಟಾನ್‍ಗಳು
ಮತ್ತು ಎಲೆಕ್ಟ್ರಾನ್‍ಗಳನ್ನು ಒಳಗೊಂಡಿರುವ ನಿರಂತರ ಹರಿವು ಸೂರ್ಯನಿಂದ ಹೊರಕ್ಕೆ ಹೇಗೆ ಹರಿಯುತ್ತದೆ ಮತ್ತು ತನ್ನೊಳಗಿನ ಸೌರ ಕಾಂತೀಯ ಕ್ಷೇತ್ರವನ್ನು ಅದರೊಂದಿಗೆ ಹೇಗೆ ಒಯ್ಯುತ್ತದೆ ಎಂಬ ವಿಷಯದ ಬಗ್ಗೆಯೂ ಅಧ್ಯಯನ ನಡೆಸಿದ್ದಾರೆ.ದಿನೇಶ ಹೆಗಡೆ ಅವರು ಸಮಯ ಅವಲಂಬಿತ, ಡೇಟಾಚಾಲಿತ ಮತ್ತು ಸೌರ ವಾತಾವರಣದ ಸುಮಾರು ನೈಜ-ಸಮಯದ ಸಂಖ್ಯಾತ್ಮಕ ಮಾದರಿಗಳನ್ನು ಮತ್ತು ಡಾ. ಪೋಗೊರೆಲೋವ್ ಅವರ ಸಂಶೋಧನಾ ಗುಂಪಿನಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಸಂಖ್ಯಾತ್ಮಕ ಮಾದರಿಗಳನ್ನು, ಪಾರ್ಕರ್ ಸೋಲಾರ್ ಪ್ರೋ ಬ್ (ಪಿಎಸ್‍ಪಿ) ಸೇರಿದಂತೆ ನಾಸಾ ಕಾರ್ಯಾಚರಣೆಗಳ ದತ್ತಾಂಶವನ್ನು ಬಳಸುತ್ತಿದ್ದಾರೆ ಎಂದು ತಿಳಿದುಬಂದಿದೆ.