ಕಾರವಾರ:- ಹಾವುಗಳು ಕಪ್ಪೆ ಹಾಗೂ ಇತರ ಕೀಟಗಳನ್ನು ಹಿಡಿದು ಭಕ್ಷಿಸಿ ತಮ್ಮ ಜೀವನ ಸಾಗಿಸುವುದನ್ನು ನಾವು ಕೇಳಿದ್ದೇವೆ. ಇದೆಲ್ಲದಕ್ಕಿಂತ ವಿಭಿನ್ನವಾಗಿ ಹಾವುಗಳು ಹಾವುಗಳನ್ನು ನುಂಗುವುದು ಕೆಲವೆಡೆ ನಡೆಯುವ ಘಟನೆ ಆದ್ರೆ ಹೆಬ್ಬಾವು ಒಂದನ್ನು ಕಾಳಿಂಗಸರ್ಪ ನುಂಗಲು ಪ್ರಯತ್ನಿಸಿದ ಘಟನೆ ನಡೆದಿದೆ.

ಈ ಘಟನೆ ನಡೆದಿರುವುದು ಕಾರವಾರದ ಹರಿದೇವ ನಗರದಲ್ಲಿ. ಸುಮಾರು ಅರ್ಧ ಘಂಟೆಗಳ ಕಾಲ ಕಾಳಿಂಗ ಹಾಗೂ ಹೆಬ್ಬಾವಿನ ನಡುವೆ ಕದನ ನಡೆದಿದ್ದು ನೋಡುಗರ ಮೈ ನವಿರೇಳಿಸುವಂತೆ ಮಾಡಿದೆ.

RELATED ARTICLES  ವಿಪ್ರೋ ಕಂಪನಿಗೆ ಬೆದರಿಕೆ

ಸರಿ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಒಂದನ್ನೊಂದು ನುಂಗುವ ಪ್ರಯತ್ನ ಮಾಡಿದ್ದು, ಕೊನೆಗೂ ಬೃಹದಾಕಾರದ ಕಾಳಿಂಗ ಸರ್ಪವು ಹೆಬ್ಬಾವನ್ನು ನುಂಗುವ ಪ್ರಯತ್ನದಲ್ಲಿ ಗೆಲವು ಕಂಡಿದೆ.

RELATED ARTICLES  ಹೊನ್ನಾವರ, ಭಟ್ಕಳದಲ್ಲಿ ನಾಳಿನ ಕೊರೋನಾ ಲಸಿಕಾ ಮಾಹಿತಿ

ಈ ವೇಳೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಎರಡು ಹಾವುಗಳನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಈ ಹಾವುಗಳ ಕಿತ್ತಾಟ ನೋಡುವ ಜನರಿಗೆ ರೋಚಕತೆ ಸೃಷ್ಟಿಸಿತ್ತಲ್ಲದೆ ಮೈ ನಡುಕ ಹುಟ್ಟಿಸಿತ್ತೆಂದು ಸ್ಥಳೀಯರು ಸತ್ವಾಧಾರ ನ್ಯೂಸ್ ಜೊತೆ ಅನಿಸಿಕೆ‌ ಹಂಚಿಕೊಂಡಿದ್ದಾರೆ.