ಗೋಕರ್ಣ : ಸೆಲ್ಫಿ ಹುಚ್ಚು ಅನೇಕ ಜನರ ಪ್ರಾಣವನ್ನೇ ಕಿತ್ತುಕೊಂಡಿದೆ, ಅದರಲ್ಲಿಯೂ ಸಮುದ್ರದಲ್ಲಿ, ಕಲ್ಲು ಬಂಡೆಗಳ ಮೇಲೆ, ಗುಡ್ಡದ ಪ್ರದೇಶದಲ್ಲಿ ಸೆಲ್ಫಿ ತೆಗೆಯಲು ಹೋಗಿ ಎಷ್ಟೋ ಜನ ಉಸಿರು ಚೆಲ್ಲಿರುವ ಘಟನೆಯೂ ನಡೆದಿದೆ. ಆದರೂ ಜನತೆಯ ಸೆಲ್ಫಿ ಹುಚ್ಚು ಇನ್ನೂ ಕಡಿಮೆಯಾಗಿಲ್ಲ.

ಸಮುದ್ರದ ಕಲ್ಲು ಬಂಡೆಯ ಸನಿಹ ಸೆಲ್ಫಿ ತೆಗಿಯಲು ಹೋದ ಯುವಕ ಕಾಲುಜಾರಿ ಬಿದ್ದು ಸಮುದ್ರ ಪಾಲಾದ ಘಟನೆ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಓಂ ಬೀಚ್ ನಲ್ಲಿ ಇಂದು ಮಧ್ಯಾನ ನಡೆದಿದೆ.

RELATED ARTICLES  ಕರಾವಳಿ ಉತ್ಸವದಲ್ಲಿ ನಡೆಯಲಿದೆ ತರಹೇವಾರಿ ಹೂ ಗಿಡಗಳ ಪ್ರದರ್ಶನ.

ಹಾನಗಲ್ ಮೂಲದ ಶೇಕಪ್ಪ ಕಮಾಟಿ (35) ಸಮುದ್ರಪಾಲಾದ ವ್ಯಕ್ತಿಯಾಗಿದ್ದು ಇಂದು ಮಧ್ಯಾನ ಹಾನಗಲ್ ನಿಂದ ಗೋಕರ್ಣಕ್ಕೆ 12 ಜನರೊಂದಿಗೆ ಆಗಮಿಸಿದ್ದ ಈತ ಓಂ ಬೀಜ್ ನ ಬಲಭಾಗದಲ್ಲಿರುವ ಸಮುದ್ರ ತೀರದ ಕಲ್ಲುಬಂಡೆ ಬಳಿ ಸೆಲ್ಫಿ ತೆಗೆದುಕೊಳ್ಳಲು ತೆರಳಿದ್ದ ಎನ್ನಲಾಗಿದೆ.

ತನ್ನ ಮೊಬೈಲಲ್ಲಿ ಸೆಲ್ಫಿ ತೆಗೆಯುವ ವೇಳೆ ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಶೇಕಪ್ಪ ಕೊಚ್ಚಿಹೋಗಿದ್ದಾನೆ ಎನ್ನಲಾಗಿದೆ. ಲೈಫ್ ಗಾರ್ಡಗಳು ರಕ್ಷಿಸುವ ಪ್ರಯತ್ನ ಮಾಡಿದರಾದರೂ ರಕ್ಷಣೆ ಸಾಧ್ಯವಾಗಿಲ್ಲ. ಈತನ ಶವಕ್ಕಾಗಿ ಪೊಲೀಸರಿಂದ ಶೋಧ ಕಾರ್ಯ ನಡೆಯುತಿದ್ದು ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಹಸೆಮಣೆ ಏರಬೇಕಾದವ ಕೊರೋನಾದಿಂದಾಗಿ ಮಸಣ ಸೇರಿದ : ಕಾರವಾರದಲ್ಲೊಂದು ಮನ ಕಲಕುವ ಘಟನೆ

ಒಂದೆಡೆ ಈಜಲು ತೆರಳಿ ಪ್ರಾಣ ಬಿಡುವವರ ಸಂಖ್ಯೆ ಹಾಗೂ ಸೆಲ್ಫಿ ತೆಗಿಯುವ ವೇಳೆ ಇಂತಹ ಅವಘಡಗಳು ಸಂಭವಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಹಾಗೂ ಪ್ರವಾಸಕ್ಕೆ ಬರುವವರು ಎಚ್ಚರಿಕೆವಹಿಸಬೇಕಾಗಿದೆ ಎಂದು ಅಧಿಕಾರಿಗಳು ವಿನಂತಿಸಿದ್ದಾರೆ.