ಹೊನ್ನಾವರ : ಕಡತೋಕಾದ ಸ್ವಯಂಭು ದೇವ ಸೇವಾ ಸಮಿತಿ, ಕಡತೋಕಾ ಇದರ ವತಿಯಿಂದ ಶ್ರಾವಣ ಮಾಸದ ವಿಶೇಷವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ರುದ್ರ ಪಠಣ, ರುದ್ರ ಹವನ, ಅಭಿಷೇಕ, ಪಾರಾಯಣ ಹಾಗೂ ಇತರ ವೈದಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕೆಕ್ಕಾರು ಪಾಠಶಾಲೆಯ ನಿವೃತ್ತ ಶಿಕ್ಷಕ ವಿದ್ವಾನ್ ರಾಮಚಂದ್ರ ಭಟ್ಟ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಜೊತೆಗೆ ತಾಳಮದ್ದಳೆ ಕಾರ್ಯಕ್ರಮವೂ ನಡೆಯಿತು.
ಸ್ವಯಂಭು ಮಹಾಗಣಪತಿ ಯಕ್ಷಗಾನ ಮಂಡಳಿ ಹಾಗೂ ಕಲಿಕಾ ಕೇಂದ್ರ ಕಡತೋಕಾ ಆಶ್ರಯದಲ್ಲಿ, ದೇವಾಲಯ ಸೇವಾ ಸಮಿತಿ, ಮಂಡಳಿಯ ಸಹಯೋಗದೊಂದಿಗೆ ಕೋವಿಡ್ ನಿಯಮಾವಳಿಯಂತೆ ಸೀಮಿತ ಜನರನ್ನೊಳಗೊಂಡ ಕಾರ್ಯಕ್ರಮ ಇದಾಗಿತ್ತು. ಎಸ್.ಶಂಭು ಭಟ್ಟ ಅವರ ಅಧ್ಯಕ್ಷತೆಯಲ್ಲಿ ಸನ್ಮಾನ ಕಾರ್ಯಕ್ರಮ ನೆರವೇರಿತು. ನಂತರ ಬಡಗುತಿಟ್ಟಿನ ಮೊದಲ ಮಹಿಳಾ ಭಾಗವತೆಯಾದ ಯಕ್ಷ ಮಾಣಿಕ್ಯ ಚಿಂತನಾ ಉದಯ ಹೆಗಡೆ ಮಾಳಕೊಡ್ ಅವರ ಕಂಠಸಿರಿಯ ಭಾಗವತಿಕೆಯಲ್ಲಿ, ತಾಳಮದ್ದಳೆ ಸಂಪನ್ನಗೊಂಡಿತು. ಅರ್ಥದಾರಿಗಳಾಗಿ ಈಶ್ವರ ಭಟ್ಟ, ಪ್ರಭಾಕರ ಚಿಟ್ಟಾಣಿ, ಆನಂದ ಭಟ್ಟ ಕೆಕ್ಕಾರ್, ರಾಮಚಂದ್ರ, ಗಣೇಶ ಭಟ್ಟ ಭಾಗವಹಿಸಿದರು.