ಕಾರವಾರ : ಉತ್ತರ ಕನ್ನಡ ಜಿಲ್ಲೆಗೆ ಸಿಹಿಸುದ್ದಿಗಳ ಮೇಲೆ ಸಿಹಿಸುದ್ದಿ ಲಭ್ಯವಾಗುತ್ತಿದ್ದು, ದಿನೇದಿನೇ ಕರೋನಾ ವ್ಯಾಕ್ಸಿನೇಷನ್ ಪ್ರಮಾಣ ಹೆಚ್ಚುತ್ತಿರುವುದು ಜಿಲ್ಲೆಯ ಜನರಿಗೆ ಸಮಾಧಾನ ತಂದಿದೆ. ಅದಷ್ಟೇ ಅಲ್ಲದೆ ಬೇಗ ವ್ಯಾಕ್ಸಿನೇಷನ್ ಪಡೆದುಕೊಳ್ಳಬೇಕು ಎನ್ನುವ ಜನರಿಗೆ ಇದು ಅನುಕೂಲಕರವಾಗಲಿದೆ. ಜೊತೆಗೆ ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಒಂದೇ ಪರಿಹಾರವಾಗಿದ್ದು, ಈ ಬಗ್ಗೆ ಆದಷ್ಟು ಶೀಘ್ರವಾಗಿ ಲಸಿಕೆ ಪಡೆಯುವತ್ತ ಜನತೆ ಪ್ರಯತ್ನ ಮುಂದುವರೆಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಭಾರೀ ಪ್ರಮಾಣದ ಕೋವಿಡ್ ಲಸಿಕೆ ಲಭ್ಯವಿದೆ. ಕೋವಿಶೀಲ್ಡ್ 35 ,300 ಮತ್ತು ಕೋವ್ಯಾಕ್ಸಿನ್ 4,900 ಸೇರಿ ಒಟ್ಟು 40,200 ಲಸಿಕೆ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋವಿಶೀಲ್ಡ್ ಎಲ್ಲೆಲ್ಲಿ?

ಕುಮಟಾ 3 ಸಾವಿರ, ಶಿರಸಿ 5 ಸಾವಿರ, ಸಿದ್ದಾಪುರ 2 ಸಾವಿರ, ಯಲ್ಲಾಪುರ 1,500, ಅಂಕೋಲಾದಲ್ಲಿ 2,500, ಭಟ್ಕಳ 5 ಸಾವಿರ, ಹಳಿಯಾಳ 2 ಸಾವಿರ, ಹೊನ್ನಾವರ 4 ಸಾವಿರ, ಜೋಯ್ಡಾ 1,500, ಕಾರವಾರ 2,700, ಮುಂಡಗೋಡ 4 ಸಾವಿರ , ದಾಂಡೇಲಿ 1,500, ಜಿಲ್ಲಾಸ್ಪತ್ರೆಯಲ್ಲಿ 600 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ.

RELATED ARTICLES  ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾದ ನಟ, ನಿರ್ದೇಶಕ

ಕೋವ್ಯಾಕ್ಸಿನ್ ಎಲ್ಲೆಲ್ಲಿ?

ಜಿಲ್ಲಾಸ್ಪತ್ರೆಯಲ್ಲಿ 200, ಹೊನ್ನಾವರದಲ್ಲಿ 1 ಸಾವಿರ, ಕುಮಟಾ 1 ಸಾವಿರ, ಶಿರಸಿ 2,200, ದಾಂಡೇಲಿ 500 ಒಟ್ಟು 4,900 ಕೋವ್ಯಾಕ್ಸಿನ್ ಲಭ್ಯವಿದೆ.

ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು , ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕಿದೆ. ಲಸಿಕೆ ಪಡೆಯುವಲ್ಲಿ ಸುಖಾಸುಮ್ಮನೆ ಬಂದಲ ಸೃಷ್ಟಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಿದೆ ಕೊರೋನಾ ನಿಯಮಗಳನ್ನು ಮೀರುವಂತಹ ಕಾರ್ಯ ಮಾಡಬಾರದೆಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳು ಜನರಲ್ಲಿ ವಿನಂತಿ ಮಾಡಿದ್ದಾರೆ.

RELATED ARTICLES  ಸಕಲ ಸರ್ಕಾರಿ ಗೌರವಗಳೊಂದಿಗೆ ಕೇಂದ್ರ ಸಚಿವ ಅನಂತ್ ಕುಮಾರ್ ರವರ ಅಂತ್ಯ ಸಂಸ್ಕಾರ: ನಾಳೆ ಮಧ್ಯಾಹ್ನ 1 ಗಂಟೆಗೆ.

ಜಿಲ್ಲಾಧಿಕಾರಿಗಳಿಂದ ಮಾಹಿತಿ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸೋಮವಾರ 35,300 ಡೋಸ್ ಕೋವಿಶಿಲ್ಸ್ ಹಾಗೂ 4900 ಡೋಸ್ ಕೋವ್ಯಾಕ್ಸಿನ್ ಲಸಿಕೆ ಲಭ್ಯವಾಗಲಿದ್ದು, ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಲಸಿಕಾ ವಿತರಣಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ 2 ನೇ ಡೋಸ್ ಲಸಿಕೆ ಪಡೆಯಲು ಬಾಕಿ ಇರುವ ಹಾಗೂ ಕೋವಿಶೀಲ್ಸ್ ಲಸಿಕೆ ಪ್ರಥಮ ಡೋಸ್ ಪಡೆದು 84 ದಿನ ಪೂರೈಸಿರುವ ಹಾಗೂ ಕೋವ್ಯಾಕ್ಸಿನ್ ಪಡೆದು 28ದಿನ ಪೂರೈಸಿರುವ ಎಲ್ಲ ಫಲಾನುಭವಿಗಳು ಹಾಗೂ 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಪ್ರಥಮ ಡೋಸ್ ಲಸಿಕೆ ನೀಡಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೆ ಮುಗಿಲನ್ ತಿಳಿಸಿದ್ದಾರೆ.