ಕುಮಟಾ : ಅಪಾಯಕಾರಿ ಸೇತುವೆಗೆ ಯವಾ ಬ್ರಿಗೇಡ್ ಕುಮಟಾ ತಂಡದಿಂದ ತಾತ್ಕಾಲಿಕ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿದ್ದು ಇದೀಗ ಯುವ ಬ್ರಿಗೇಡ್ ನ ಕಾರ್ಯ ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ.

ತಾಲೂಕಿನ ಚಂದಾವರದಿಂದ ಶೇಡಿಕುಳಿ ಮಾರ್ಗವಾಗಿ ಸಂಚರಿಸುವ ರಸ್ತೆಯಲ್ಲಿ ಸಿಗುವ ತೆಬರಿ ಹಳ್ಳದ ಸೇತುವೆಯೊಂದು ಇದ್ದು ಈ ಸೇತುವೆಗೆ ಯಾವುದೆ ತಡೆಗೋಡೆ ಇಲ್ಲದೆ ಜನತೆ ಸಮಸ್ಯೆ ಎದುರಿಸುತ್ತಿದ್ದರು.

RELATED ARTICLES  ರೇಣುಕಾ ರಮಾನಂದರ 'ಸಂಬಾರ ಬಟ್ಟಲ ಕೊಡಿಸು' ಕವನ ಸಂಕಲನಕ್ಕೆ ವಿಭಾ ಸಾಹಿತ್ಯ ಪ್ರಶಸ್ತಿ

ತಡೆಗೋಡೆಗಳಿಲ್ಲ ಸೇತುವೆಯ ಮೇಲೆ ಓಡಾಡುವಾಗ ಅನೇಕ ಸಾವುಗಳಾಗಿರುವ ಉದಾಹರಣೆಗಳೂ ಇದೆ. ಅಲ್ಲದೆ ಅದೇಷ್ಟೊ ಜನ ಬಿದ್ದು ಅಪಘಾತಗಳಾಗಿದ್ದು ಉಂಟು. ಇಂದು ಈ ಸೇತುವೆಗೆ ಯುವಾ ಬ್ರಿಗೇಡ ಕುಮಟಾ ತಂಡವು ತಾತ್ಕಾಲಿಕ ತಡೆಗೋಡೆಯನ್ನು ನಿರ್ಮಾಣವನ್ನು ಮಾಡಿದ್ದು ಅಪಘಾತ ತಡೆಯುವಲ್ಲಿ ಒಂದು ಹೆಜ್ಜೆ ಮುಂದಿಟ್ಟಿದೆ.

RELATED ARTICLES  ಹೇಗಿತ್ತು ಹೇಗಾಯ್ತು ಕುಮಟಾ ಮಣಕಿ ಮೈದಾನ! ಅಯ್ಯೋ ಗೋಳು ಕೇಳೋರೆ ಇಲ್ವೇ?

ಜನರು ಈ ಮಾರ್ಗವನ್ನು ಅವಲಂಬಿಸಿದ್ದು ನಿತ್ಯ ಓಡಾಟಕ್ಕೆ ಜನತೆ ಹರಸಾಹಸ ಪಡುವ ಸ್ಥಿತಿಯಲ್ಲಿದ್ದು ಆದರೆ ಯುವ ಬ್ರಿಗೇಡ್ ನ ಕಾರ್ಯದಿಂದ ಜನತೆಯ ಓಡಾಟಕ್ಕೆ ಅನುಕೂಲವಾಗಿದ್ದು ಗ್ರಾಮಸ್ಥರು ಯುವ ಬ್ರಿಗೇಡ್ ಸದಸ್ಯರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಯುವ ಬ್ರಿಗೇಡ್ ನ ಸದಸ್ಯರುಗಳು ಊರಿನ ಗ್ರಾಮಸ್ಥರು ಹಾಜರಿದ್ದರು.