ಅಂಕೋಲಾದಲ್ಲಿ 2500 ಡೋಸ್.

ಅಂಕೋಲಾ ತಾಲೂಕಿನಲ್ಲಿ ಸೋಮವಾರ ಒಟ್ಟೂ 2500 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಹಟ್ಟಿಕೇರಿ ಪ್ರಾ. ಆ . ಕೇಂದ್ರ ವ್ಯಾಪ್ತಿಯ ಬೆಲೇಕೇರಿ 400, ಶಿರಕುಳಿ 200, ಬೆಳಸೆ ಪ್ರಾ ಆ ಕೇಂದ್ರ ವ್ಯಾಪ್ತಿಯ ಅಗ್ರಗೋಣ 570, ಹಿಲ್ಲೂರು ಪ್ರಾ. ಆ .ಕೇಂದ್ರ ವ್ಯಾಪ್ತಿಯಲ್ಲಿ 450, ರಾಮನಗುಳಿ ಪ್ರಾ. ಆ ವ್ಯಾಪ್ತಿಯ ಡೋಂಗ್ರಿ 220, ಆಗಸೂರು 230,ಹಾರವಾಡಾ ಪ್ರಾ ಆ ಕೇಂದ್ರ ವ್ಯಾಪ್ತಿಯ ಅಸರ್ವಾ 200, ಸಕಲಬೇಣ 230 ಡೋಸ್ ಲಸಿಕೆಗಳು ಲಭ್ಯವಿದ್ದು, ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ,ದ್ವಿತೀಯ ಡೋಸ್ ಗಳನ್ನು ಸಮಾನವಾಗಿ ಕಾಯ್ದಿರಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳು ಕಾಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ .

ಹೊನ್ನಾವರದಲ್ಲಿ ಎಲ್ಲಿ?

ಹೊನ್ನಾವರ ತಾಲೂಕಿನಲ್ಲಿ ಒಟ್ಟು ನಾಳೆ 5,190 ವ್ಯಾಕ್ಸಿನ್ ಲಭ್ಯವಿದ್ದು, ಇವುಗಳಲ್ಲಿ ಕೋವಿಶೀಲ್ಡ್ 4000, ಕೋವ್ಯಾಕ್ಸಿನ್ 1190 ಎಂದು ತಿಳಿದುಬಂದಿದೆ. ಹೊನ್ನಾವರ ಪಟ್ಟಣದಲ್ಲಿ, ಸಾಲ್ಕೋಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಗೇರುಸೋಪ್ಪಾ ಆರೋಗ್ಯ ಕೇಂದ್ರದಲ್ಲಿ, ಹೊಸಾಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ,ಖರ್ವಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ,ಸಂಶಿ, ಬಳ್ಕೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ಲಭ್ಯವಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

RELATED ARTICLES  ಸುಳ್ಳು, ವಿಕೃತ ಸುದ್ದಿ ಹರಡುತ್ತಿರುವವರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಬೆಂಬಲ: ಅನಂತ್ ಕುಮಾರ್ ಹೆಗಡೆ ಕಿಡಿ

ಶಿರಸಿಯಲ್ಲಿ ಎಲ್ಲೆಲ್ಲಿ ಲಸಿಕಾಕರಣ?

ಶಿರಸಿ ತಾಲೂಕಿನಲ್ಲಿ ಸೋಮವಾರ 5,000 ಕೋವಿಶೀಲ್ಡ್ ಲಸಿಕೆ, 2.220 ಕೋವ್ಯಾಕ್ಸಿನ್ ಲಸಿಕೆ ಲಭ್ಯವಿದ್ದು, ಒಟ್ಟೂ 7,220 ಡೋಸ್ ಲಸಿಕೆ ಮೊದಲ ಮತ್ತು 2ನೇ ಡೋಸ್ ಪಡೆದುಕೊಳ್ಳುವವರು ತೆಗೆದುಕೊಳ್ಳಬಹುದಾಗಿದೆ ಎಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆ ಎಲ್ಲೆಲ್ಲಿ?

ಲಭ್ಯವಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಬಂಕನಾಳದಲ್ಲಿ 500, ಹುತ್ಗಾರಿನಲ್ಲಿ 500, ದೊಡ್ನಳ್ಳಿಯಲ್ಲಿ 400, ಕಕ್ಕಳ್ಳಿ 300, ಬಂಡಲ 300, ಡಾ.ಬಿ.ಆರ್ ಅಂಬೇಡ್ಕರ ಭವನದಲ್ಲಿ 220 ಡೋಸ್ ಲಸಿಕೆ ಲಭ್ಯವಿದೆ.

ಕೋವಿಶೀಲ್ಡ್ ಲಸಿಕೆ ಇಲ್ಲಿ ಲಭ್ಯ?

ಲಭ್ಯವಿರುವ 500 ಕೋವಿಶೀಲ್ಡ್ ಲಸಿಕೆಯನ್ನು ಸಾಲ್ಕಣಿಯಲ್ಲಿ 200, ಹೆಗಡೆಕಟ್ಟಾ 400, ಯಡಳ್ಳಿ 400, ಹನುಮಂತಿ 200, ಗೌಡಳ್ಳಿ 300, ಉಂಚಳ್ಳಿ 400, ಗುಡ್ನಾಪುರ 400, ನರೂರ್ 300, ಹುಲೇಕಲ್ 600, ಮೆಣಸಿ 200, ಬನವಾಸಿ 200, ದಾಸನಕೊಪ್ಪ 200, ಡಾ.ಬಿಆರ್. ಅಂಬೇಡ್ಕರ ಭವನದಲ್ಲಿ 1200 ಡೋಸ್ ಲಸಿಕೆ ಲಭ್ಯವಿದೆ.

ಉತ್ತರಕನ್ನಡದ ಲಸಿಕಾ ಮಾಹಿತಿ.

ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಭಾರೀ ಪ್ರಮಾಣದ ಕೋವಿಡ್ ಲಸಿಕೆ ಲಭ್ಯವಿದೆ. ಕೋವಿಶೀಲ್ಡ್ 35 ,300 ಮತ್ತು ಕೋವ್ಯಾಕ್ಸಿನ್ 4,900 ಸೇರಿ ಒಟ್ಟು 40,200 ಲಸಿಕೆ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES  ಮೂಡಬಿದಿರೆ ಕ್ಷೇತ್ರದಲ್ಲಿ ದಾಖಲೆ ಮಾಡಿರುವ ಶಾಸಕ ಅಭಯಚಂದ್ರರವರು ಹೇಳಿದ್ದೇನು?

ಕೋವಿಶೀಲ್ಡ್ ಎಲ್ಲೆಲ್ಲಿ?

ಕುಮಟಾ 3 ಸಾವಿರ, ಶಿರಸಿ 5 ಸಾವಿರ, ಸಿದ್ದಾಪುರ 2 ಸಾವಿರ, ಯಲ್ಲಾಪುರ 1,500, ಅಂಕೋಲಾದಲ್ಲಿ 2,500, ಭಟ್ಕಳ 5 ಸಾವಿರ, ಹಳಿಯಾಳ 2 ಸಾವಿರ, ಹೊನ್ನಾವರ 4 ಸಾವಿರ, ಜೋಯ್ಡಾ 1,500, ಕಾರವಾರ 2,700, ಮುಂಡಗೋಡ 4 ಸಾವಿರ , ದಾಂಡೇಲಿ 1,500, ಜಿಲ್ಲಾಸ್ಪತ್ರೆಯಲ್ಲಿ 600 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ.

ಕೋವ್ಯಾಕ್ಸಿನ್ ಎಲ್ಲೆಲ್ಲಿ?

ಜಿಲ್ಲಾಸ್ಪತ್ರೆಯಲ್ಲಿ 200, ಹೊನ್ನಾವರದಲ್ಲಿ 1 ಸಾವಿರ, ಕುಮಟಾ 1 ಸಾವಿರ, ಶಿರಸಿ 2,200, ದಾಂಡೇಲಿ 500 ಒಟ್ಟು 4,900 ಕೋವ್ಯಾಕ್ಸಿನ್ ಲಭ್ಯವಿದೆ.

ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು , ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕಿದೆ. ಲಸಿಕೆ ಪಡೆಯುವಲ್ಲಿ ಸುಖಾಸುಮ್ಮನೆ ಬಂದಲ ಸೃಷ್ಟಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಿದೆ ಕೊರೋನಾ ನಿಯಮಗಳನ್ನು ಮೀರುವಂತಹ ಕಾರ್ಯ ಮಾಡಬಾರದೆಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳು ಜನರಲ್ಲಿ ವಿನಂತಿ ಮಾಡಿದ್ದಾರೆ.