ಕುಮಟಾ: ಕಡಲತೀರಗಳಲ್ಲಿ ನೀರಿಗೆ ಈಜಲು ಹೋಗಿ ಪ್ರವಾಸಿಗರು ಸಾವನ್ನಪ್ಪುವ ಪ್ರಕರಣಗಳು ಜಾಸ್ತಿಯಾಗುತ್ತಿದ್ದು ದೂರದ ಊರುಗಳಿಂದ ಬರುವ ಪ್ರವಾಸಿಗರು ಅತ್ಯಂತ ನಿರ್ಲಕ್ಷ್ಯ ಮತ್ತು ಹುಂಬತನದಿಂದ ನೀರಿಗಿಳಿದು ಅಪಾಯವನ್ನು ಬರಮಾಡಿಕೊಳ್ಳುತ್ತಿರುವುದನ್ನು ಗಮನಿಸಿ ಅಧಿಕಾರಿಗಳು ಎಲ್ಲಾ ಮಾಲೀಕರನ್ನು ಕರೆದು ಸಭೆ ನಡೆಸಿದ್ದಾರೆ.

ತಾಲ್ಲೂಕಿನ ಕಡಲತೀರಗಳ ರೆಸಾರ್ಟ್ ಮತ್ತು ಹೋಟೆಲ್ ಮಾಲೀಕರ ಸಭೆ ಕರೆದ ಪಿಎಸ್ಸೈ ಆನಂದಮೂರ್ತಿ ಅವರು ಪ್ರವಾಸಿಗರ ರಕ್ಷಣೆ ಮತ್ತು ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಕೆಲವು ಸೂಚನೆಗಳನ್ನು ನೀಡಿದರು.

ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾಡ್ಜ್, ಹೋಮ್ ಸ್ಟೆ, ರೆಸಾರ್ಟನ್ನು ನಡೆಸುತ್ತಿದ್ದವರು ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಅಪರಾಧಗಳನ್ನು ತಡೆಯುವ ಮತ್ತು ಅಪರಾಧಗಳನ್ನು ಪತ್ತೆ ಹಚ್ಚುವ ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಸಕ್ಷಮ ಪ್ರಾಧಿಕಾರದಿಂದ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆದುಕೊಂಡಿರತಕ್ಕದ್ದು. ಪರವಾನಿಗೆಯನ್ನು ಕಾಲಕಾಲಕ್ಕೆ ನಿಯಮಾನುಸಾರ ನವೀಕರಿಸತಕ್ಕದ್ದು . ಯಾವುದೇ ರೀತಿಯ ವೇಶ್ಯಾವಾಟಿಕೆ, ಜೂಜಾಟ ಹಾಗೂ ಇತರೆ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡತಕ್ಕದ್ದಲ್ಲ . ಪರವಾನಿಗೆ ಇಲ್ಲದೆ ಯಾವುದೇ ರೀತಿಯ ಮದ್ಯಪಾನ ಮಾಡಲು ಅವಕಾಶ ನೀಡಬಾರದು. ಯಾವುದೇ ರೀತಿಯ ಮಾದಕ ವಸ್ತು, ನಿದ್ರಾಜನಕ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.

RELATED ARTICLES  ಶಿವಮೊಗ್ಗಾದ ಹಲವೆಡೆ ಭೂಕಂಪನ : ಉತ್ತರ ಕನ್ನಡದಲ್ಲಿಯೂ ಭೂಕಂಪನ ಅನುಭವ

ಕಡ್ಡಾಯವಾಗಿ ಪ್ರವೇಶದ್ವಾರದಲ್ಲಿ , ಕೌಂಟರನಲ್ಲಿ ಹಾಗೂ ಅವಶ್ಯಕತೆ ಇರುವ ಸ್ಥಳದಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಿ ಅವು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಬರುವ ಎಲ್ಲಾ ಅತಿಥಿಗಳ ಪೋಟೋ, ಐ.ಡಿ.ಕಾರ್ಡ, ಸಂಪೂರ್ಣ ವಿಳಾಸ, ಫೋನ ನಂಬರಗಳನ್ನು ಪಡೆದುಕೊಂಡು ಸಂಬಂಧಪಟ್ಟ ರಜಿಸ್ಟರನಲ್ಲಿ ನಮೂದಿಸಬೇಕು. ಅತಿಥಿಗಳು ಬಂದ ಸಮಯ ಹಾಗೂ ತೆರಳಿದ ಸಮಯವನ್ನು ರಜಿಸ್ಟರನಲ್ಲಿ ನಮೂದಿಸಬೇಕು ಎಂದು ತಿಳಿಸಿದ್ದಾರೆ.

RELATED ARTICLES  ನಮೃತಾಗೆ ಸಸ್ಯಶಾಸ್ತ್ರ ವಿಷಯದಲ್ಲಿ 5 ಬಂಗಾರದ ಪದಕ

ಪ್ರತಿ ದಿನ ಬೆಳಗ್ಗೆ 11 ಗಂಟೆಗೆ ತಮ್ಮ ವಾಸವಿರುವ ಅತಿಥಿಗಳ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡಬೇಕು. ಯಾವುದೇ ಅಪ್ರಾಪ್ತ ಹುಡುಗ ಹುಡುಗಿಯರು ಬಂದರೆ ಅವರಿಗೆ ರೂಮನ್ನು ನೀಡತಕ್ಕದ್ದಲ್ಲ. ಅತಿಥಿಗಳಿಗೆ ಸ್ಪಷ್ಟವಾಗಿ ಕಾಣುವಂತೆ ಅವರ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಗಳ ಫಲಕಗಳನ್ನು , ಹಾಗೂ ಬೀಚಗಳಲ್ಲಿ ತಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ಇರುವ ಫಲಕಗಳನ್ನು ಅಳವಡಿಸಬೇಕು ಎನ್ನಲಾಗಿದೆ.