ಭಟ್ಕಳ: ಚಿರತೆಗಳ ಓಡಾಟ ಕಾಡು ಹಾಗೂ ಗುಡ್ಡದ ಸ್ಥಳದಲ್ಲಿ ಸಾಮಾನ್ಯ. ಆದರೆ ಗುಡ್ಡದ ಸ್ಥಳದಲ್ಲಿ ಚಿರತೆಯೊಂದು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಭಟ್ಕಳದ ಮುಟ್ಟಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ತಲಾಂದ ಗ್ರಾಮದ ಸನಿಹದ ಗುಡ್ಡ ಪ್ರದೇಶದಲ್ಲಿ ಚಿರತೆಯ ಮೃತಪಟ್ಟಿದ್ದು, ಇದೊಂದು ಹೆಣ್ಣು ಚಿರತೆ ಎಂದು ಗುರುತಿಸಲಾಗಿದೆ.
ಚಿರತೆಯ ಮೃತ ದೇಹ ನೋಡಿದ ಅಲ್ಲಿನ ಸ್ಥಳೀಯ ಅರಣ್ಯ ಇಲಾಖೆಯ ವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾರ್ಯ ಕೈಗೊಂಡು ಚಿರತೆಯ ಮೃತ ದೇಹವನ್ನು ಅಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಿದರು.
ಆಹಾರ ಹುಡುಕುತ್ತ ಕಾಡಿನಿಂದ ಗುಡ್ಡ ಪ್ರದೇಶಕ್ಕೆ ಬಂದ ಚಿರತೆ ಇನ್ನೊಂದು ಯಾವುದೋ ಪ್ರಾಣಿಯೊಂದಿಗೆ ಕಾಳಗ ನಡೆದು ಆ ಪ್ರಾಣಿ ಕಚ್ಚಿ ಚಿರತೆಯನ್ನು ಸಾಯಿಸಿರಬಹುದೆಂದು ಶಂಕಿಸಲಾಗಿದೆ.
ಚಿರತೆಯ ಶವ ಪರಿಶೀಲನೆ ಹಾಗೂ ಮುಂದಿನ ಕಾರ್ಯ ಕೈಗೊಳ್ಳುವ ಸಂದರ್ಭದಲ್ಲಿ ಎ.ಸಿ.ಎಫ್ ಬಾಲಚಂದ್ರ ಎಚ್.ಸಿ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು.