ಬೆಂಗಳೂರು: ಬಿಜೆಪಿಯವರಿಗೆ ಜನಬೆಂಬಲ ಸಿಕ್ಕಿಲ್ಲ..ಹಾಗಾಗಿ ಬಿಜೆಪಿ ಯುವ ಮೋರ್ಚಾದ ಬೈಕ್ ಜಾಥಾ ಸಂಪೂರ್ಣ ವಿಫಲವಾಗಿದೆ. ಮಂಗಳೂರಿನಲ್ಲಿ ಕೇವಲ 3 ಸಾವಿರ ಜನ ಕಾರ್ಯಕರ್ತರು ಸೇರಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಯುವಮೋರ್ಚಾ ಆಯೋಜಿಸಿದ್ದ ಮಂಗಳೂರು ಚಲೋ ಬೈಕ್ ಜಾಥಾಕ್ಕೆ ಸರ್ಕಾರ, ಜಿಲ್ಲಾಡಳಿತ ಅನುಮತಿ ನೀಡಿಲ್ಲವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಮಾಜಿ ಡಿಸಿಎಂ ಅಶೋಕ್, ಅರವಿಂದ್ ಲಿಂಬಾವಳಿ, ಸಂಸದರಾದ ನಳಿನ್ ಕುಮಾರ್ ಕಟೀಲ್, ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಮುಖಂಡರು ಮಂಗಳೂರಿನ ಜ್ಯೋತಿ ಸರ್ಕಲ್ ನಲ್ಲಿಯೇ ಪ್ರತಿಭಟನಾ ಸಭೆ ನಡೆಸಿದ್ದರು.

RELATED ARTICLES  ಹಿರಿಯ ನಟ ಕಾಶೀನಾಥ ಇನ್ನಿಲ್ಲ: ನಗಿಸಿದವನ ನಗು ಇನ್ನು ನೆನಪು ಮಾತ್ರ

ಪ್ರತಿಭಟನೆ ವೇಳೆ ಕೆಲವೆಡೆ ಕಲ್ಲು ತೂರಾಟ ನಡೆಸಲಾಗಿದೆ. ಸಭೆ ಅಂದ ಮೇಲೆ ತಳ್ಳಾಟ, ನೂಕು, ನುಗ್ಗಲು ಸಾಮಾನ್ಯ. ಆದರೆ ಬಿಜೆಪಿ ಬೈಕ್ ರಾಲಿ ಸಂಪೂರ್ಣ ವಿಫಲವಾಗಿದೆ ಎಂದರು.

RELATED ARTICLES  ಭಾರತದಲ್ಲಿ 5.62 ಲಕ್ಷ ಜನರ ಫೇಸ್‌ಬುಕ್‌ ಖಾತೆಗಳ ಮೂಲಕ ಮಾಡಿದ ಮಾಹಿತಿ ಕಳವು.