ಕುಮಟಾ : ಬೆಂಗಳೂರಿನಿಂದ ಪ್ರವಾಸಕ್ಕೆ ಹೊರಟ ಯುವಕರ ತಂಡ ಬೈಕ್ ನಲ್ಲಿ ಕೇರಳವನ್ನೆಲ್ಲಾ ಸುತ್ತಾಡಿ ಗೋಕರ್ಣಕ್ಕೆ ತೆರಳುವ ಉದ್ದೇಶದೊಂದಿಗೆ ಬಂದು ಶನಿವಾರ ರಾತ್ರಿ ಕುಮಟಾದ ಸನ್ಮಾನ ಲಾಡ್ಜ್ ನಲ್ಲಿ ತಂಗಿದ್ದರು. ರಾತ್ರಿ ಕುಮಟಾ ತಾಲೂಕಿನ ಸನ್ಮಾನ್ ಲಾಡ್ ಎದುರು ನಿಲ್ಲಿಸಿದ್ದ ಪ್ರವಾಸಿಗರೊಬ್ಬರ ದುಬಾರಿ ಬೈಕ್ ಬೆಳಗಾಗುವುದರೊಳಗೆ ಇದ್ದಲ್ಲಿಂದ ಮಾಯವಾಗಿದೆ.

ತಾಂತ್ರಿಕವಾಗಿ ಬೈಕ್ ಕೆಲವೊಂದು ಸೂಕ್ಷ್ಮ ಸಂಗತಿಗಳನ್ನು ಹೊಂದಿರುವ ಕಾರಣ ಬೈಕ್ ಅನ್ನು ಹೆಚ್ಚು ದೂರ ಚಲಾಯಿಸಲು ಸಾಧ್ಯವಿಲ್ಲ ಎನ್ನಲಾಗಿದ್ದು ಬೈಕ್ ಇರುವಿಕೆ ಬಗ್ಗೆ ಯಾರಾದರೂ ಖಚಿತ ಮಾಹಿತಿ ನೀಡಿದ್ದಲ್ಲಿ ಅವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಅವರು ಘೋಷಿಸಿದ್ದಾರೆ. ಲಾಡ್ಜ್ ಎದುರು ನಿಲ್ಲಿಸಿದ್ದ ಬೈಕ್ ಗಳಲ್ಲಿ ಕೆ.ಎ.02 ಕೆ.ಎ 9275 ನಂಬರಿನ ಒಂದು ಬೈಕ್ ಕಳ್ಳತನವಾಗಿದೆ.

RELATED ARTICLES  ಕರಾವಳಿ ಉತ್ಸವದಲ್ಲಿ ನಡೆಯಲಿದೆ ತರಹೇವಾರಿ ಹೂ ಗಿಡಗಳ ಪ್ರದರ್ಶನ.

ಬೇರೆ ಯಾವುದೇ ಕೀ ಬಳಸಿದರೂ ಬೈಕ್ ನ ಪೆಟ್ರೋಲ್ ಟ್ಯಾಂಕ್ ಓಪನ್ ಮಾಡಲು ಸಾಧ್ಯವಿಲ್ಲ, ತಾಂತ್ರಿಕವಾಗಿ ಹೈ ಪ್ರೊಟೆಕ್ಷನ್ ಹೊಂದಿರುವ ಬೈಕ್ ಅನ್ನು ಎಲ್ಲಿಯೇ ಬಚ್ಚಿಟ್ಟರೂ ಹುಡುಕಬಹುದು. ಆದರೆ ಇದಕ್ಕೆ ಕೆಲದಿನಗಳ ಪೊಲೀಸ್ ತನಿಖೆ ಅಗತ್ಯವಾಗಬಹುದು. ಇದೆಲ್ಲ ರಗಳೆ ಬೇಡ ಬೈಕ್ ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ ಕೊಟ್ಟು ಕೇಸ್ ಇಲ್ಲದೇ ತಮ್ಮ ಬೈಕ್ ಅನ್ನು ಮರಳಿ ಪಡೆದು ಮುಂದಕ್ಕೆ ಸಾಗುವ
ಯೋಚನೆಯಲ್ಲಿದ್ದು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

RELATED ARTICLES  ರಾಷ್ಟ ಮಟ್ಟಕ್ಕೆ ನ್ಯೂ ಇಂಗ್ಲೀಷ್ ಸ್ಕೂಲ್ ಹೊನ್ನಾವರದ ವಿದ್ಯಾರ್ಥಿಗಳು

ಬೈಕ್ ಕಂಡಲ್ಲಿ ಕುಮಟಾ ಪೊಲೀಸ್ ಠಾಣೆಯ ನಂಬರ್ 08386 -222333, ಅಥವಾ 7760779581 ಈ ನಂಬರ್ ಗೆ ಕರೆ ಮಾಡಿ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವ ಜೊತೆಗೆ ಸೂಕ್ತ ಬಹುಮಾನ ನೀಡಲಾಗುವುದೆಂದು ಮಾಹಿತಿ ಲಭ್ಯವಾಗಿದೆ.