ಕಾರವಾರ: ಅಕ್ರಮ ಗೋವುಗಳ ಸಾಗಾಟ ಹಾಗೂ ಮದ್ಯ ಸಾಗಾಟ ಜಾಲ ಉತ್ತರ ಕನ್ನಡದಲ್ಲಿ ಪದೇಪದೇ ಬೆಳಕಿಗೆ ಬರುತ್ತಿದ್ದು, ಇದೀಗ ಮತ್ತೆ ಅಂತಹುದೇ ಪ್ರಕರಣ ಕಾರವಾರದಲ್ಲಿ ಸದ್ದು ಮಾಡಿದೆ.

ಗೋವಾದಿಂದ ಅಕ್ರಮವಾಗಿ ಮದ್ಯಸಾಗಾಟ ಮಾಡುವ ಸಂದರ್ಭಗಳಲ್ಲಿ ಕಾರವಾರ ತಾಲೂಕಿನ ಮಾಜಾಳಿ ಚೆಕ್ ಪೋಸ್ಟ್ ಬಳಿ ಅಬಕಾರಿ ಅಧಿಕಾರಿಗಳು ಮದ್ಯ ವಶಕ್ಕೆ ಪಡೆದಿದ್ದು ಚಾಲಕನನ್ನು ಬಂಧಿಸಿದ ಘಟನೆ ವರದಿಯಾಗಿದೆ.

RELATED ARTICLES  ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ 2019ರ ಸಿಇಟಿ ಪರೀಕ್ಷೆ ಮುಂದೂಡಿಕೆ ಸಾಧ್ಯತೆ.

ಗೋವಾ ಮಾರ್ಗವಾಗಿ ಗ್ಲುಕೋಸ್ ಸಾಗಾಟ ಮಾಡುತ್ತಿದ್ದ ಲಾರಿಯಲ್ಲಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಲು ಯತ್ನಿಸಲಾದ ಆರೋಪದಲ್ಲಿ ಆಂಧ್ರಪ್ರದೇಶ ಮೂಲದ ವೆಂಕಟಸ್ವಾಮಿ ಎಂಬುವವನ್ನು ಬಂಧಿಸಲಾಗಿದೆ.

RELATED ARTICLES  ರಾಜ್ಯ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ

ಅಧಿಕಾರಿಗಳು ಗ್ಲುಕೋಸ್ ಸಾಗಿಸುವ ಲಾರಿಯನ್ನು ತಡೆದು ತಪಾಸಣೆ ನಡೆಸುತ್ತಿರುವ ಸಂದರ್ಭದಲ್ಲಿ ಈ ಅಕ್ರಮ ಮದ್ಯ ಸಾಗಾಟ ಬಯಲಾಗಿದೆ. ಅಕ್ರಮ ಮದ್ಯ, ಲಾರಿ ಹಾಗೂ ಗ್ಲೂಕೋಸ್ ಸೇರಿ ಒಟ್ಟು 23, 59 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದ್ದು, ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.