ಯಲ್ಲಾಪುರ : ತಾಲೂಕಿನ ಪಟ್ಟಣದ ಅಂಚಿನ ಮಲ್ಲಿಕಾ ಹೊಟೇಲ್ ಸಮೀಪ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ರವಿವಾರ ಸಂಜೆ ಗ್ಯಾಸ್ ಟ್ಯಾಂಕರ್ ಬೈಕಿಗೆ ಢಿಕ್ಕಿಯಾದ ಪರಿಣಾಮ ಬೈಕ್ ಸವಾರನೋರ್ವ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಈ ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಬಾಳಾ ವಿಠೋಬಾ ಗಾವಡೆ (45), ಜಮಗುಳಿ,ಕಣ್ಣಿಗೇರಿ ಎಂದು ಗುರುತಿಸಲಾಗಿದೆ. ಈತನು ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಎಂದು ವರದಿಯಾಗಿದೆ.

RELATED ARTICLES  ವಿಶ್ವಾಸ ಮತಕ್ಕೆ ಸೋಲು : ಕೊನೆಗೂ ಕಳಚಿತ ದೋಸ್ತಿ ಕೊಂಡಿ.

ಪಟ್ಟಣದ ಕಾರ್ಯಕ್ಕಾಗಿ ಬೈಕ್ ಮೇಲೆ ಬರುತ್ತಿದ್ದ
ಬಾಳಾ ವಿಠೋಬಾ ಗಾವಡೆಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದಿದ ಪರಿಣಾಮ ಆತ ಮೃತಪಟ್ಟಿದ್ದಾನೆ. ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯವಾಗಿ ಮಾಹಿತಿ ಲಭ್ಯವಾಗಿದೆ. ಪೊಲೀಸ್ ತನಿಖೆ ನಂತರದಲ್ಲಿ ಪೂರ್ಣ ಮಾಹಿತಿ ತಿಳಿಯಬೇಕಿದೆ.

ಬೈಕ್ ಹಿಂಬದಿ ಸವಾತ ಕೃಷ್ಣ ಪರಶ್ಯಾ ಮರಾಠಿ ಜಮಗುಳಿ ಗಾಯಗೊಂಡಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆಯ ನಿಯಮಗಳನ್ನು ಪಾಲಿಸುವ ಜೊತೆಗೆ ವಾಹನ ಸಮಾರರು ಸಾಕಷ್ಟು ಕಾಳಜಿ ವಹಿಸಬೇಕು ಎಂಬುದು ಸ್ಥಳೀಯರ ಮಾತಾಗಿದೆ.

RELATED ARTICLES  ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಸಂತೋಷದಿಂದ ಇಲ್ಲ ; ಎಚ್.ಡಿ.ಕುಮಾರಸ್ವಾಮಿ

ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಹಾಗೂ ಇನ್ನಿತರ ವಾಹನ ಸವಾರರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ಸೇರಿಸುವ ಕಾರ್ಯ ನಡೆಸಲಾಗಿದೆ.