ಹೊನ್ನಾವರ : ಅಕ್ರಮ ಗೋ ಮಾಂಸ ಸಾಗಾಟ ಹಾಗೂ ಅಕ್ರಮ ಗೋ ಸಾಗಾಟ ಜಾಲಗಳು ಉತ್ತರಕನ್ನಡದ ಅನೇಕ ಕಡೆಗಳಲ್ಲಿ ಕಾರ್ಯಮಾಡುತ್ತಿದ್ದು, ಇಂತಹ ಕೃತ್ಯದಲ್ಲಿ ತೊಡಗಿಕೊಂಡವರ ಬಂಧನ ಹಾಗೂ ಇಂತಹ ಕಾರ್ಯಾಚರಣೆಗಳು ನಡೆಯುವಾಗ ಪೊಲೀಸ್ ದಾಳಿಗಳು ಸಾಮಾನ್ಯ ಎನ್ನುವಂತಾಗಿದೆ. ಆದರು ಇಂತಹ ಪ್ರಕರಣ ಮತ್ತೆ ಮತ್ತೆ ಪುನರಾವರ್ತನೆ ಮಾಡಿರುವುದು, ಪೊಲೀಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಪೊಲೀಸ್ ಇಲಾಖೆಯ ಕ್ಷಿಪ್ರ ಕಾರ್ಯಾಚರಣೆಯಿಂದ ಈಗಾಗಲೇ ಅನೇಕ ಗೋ ಸಾಗಾಟ ಹಾಗೂ ಗೋ ಮಾಂಸ ಸಾಗಾಟ ಪ್ರಕರಣಗಳನ್ನು ಬೇಧಿಸುತ್ತಿದ್ದರೂ, ಹೊನ್ನಾವರದ ಗುಣವಂತೆಯಲ್ಲಿ ನಡೆದಿದೆ ಎನ್ನಲಾದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಬೆಳಗಿನ ಜಾವ ಅಕ್ರಮ ಗೋ ಸಾಗಾಟ ಪ್ರಕರಣ ನಡೆದಿದೆ ಎಂದು ಸ್ಥಳೀಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಶಾರಾಮಿ ಕಾರಿನಲ್ಲಿ ಬಂದ ಗೋ ಕಳ್ಳರು ಬೆಳಗಿನ ಜಾವ ಗೋ ಕಳ್ಳತನಕ್ಕೆ ಮುಂದಾಗಿದ್ದಾರೆ. ರಸ್ತೆಯ ಸನಿಹದಲ್ಲಿದ್ದ ಗೋಗಳನ್ನು ಕಾರಿನಲ್ಲಿ ತುಂಬಿಕೊಂಡು ಎಸ್ಕೇಪ್ ಆಗಿದ್ದು, ಈ ಘಟನೆ ಸಿ.ಸಿ.ಟಿ.ವಿಯಲ್ಲಿ ಸೆರೆಯಾಗಿದೆ.
ಕುತ್ತಿಗೆಗೆ ಹಗ್ಗ ಹಾಕಿ ಗೋವನ್ನು ಎಳೆತಂದು ಕಾರಿನ ಡಿಕ್ಕಿಯಲ್ಲಿ ತುಂಬಲು ಪ್ರಯತ್ನ ನಡೆಸಿದ ದೃಷ್ಯಾವಳಿ ಇದರಲ್ಲಿದೆ. ಗೋವನ್ನು ತುಂಬಲು ವಿಫುಲಯತ್ನ ನಡೆಸಿದ ಘಟನೆಯ ಕುರಿತಾಗಿ ಸಾರ್ವಜನಿಕರಿಂತ ಬೇಸರ ವ್ಯಕ್ತವಾಗುತ್ತಿದೆ.
ಈ ಕೃತ್ಯದ ಹಿಂದೆ ಅಡಗಿದ ವರನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೂರ್ಣ ಮಾಹಿತಿ ಪೊಲೀಸ್ ತನಿಖೆಯ ನಂತರದಲ್ಲಿ ತಿಳಿದುಬರಬೇಕಿದೆ.
ಸಿ.ಸಿ.ಟಿವಿ ದೃಷ್ಯಾವಳಿ ಇಲ್ಲಿದೆ.