ಕಾರವಾರ: ಇಲ್ಲಿನ ಬಿ.ವಿ.ರೆಸಿಡೆನ್ಸಿ ಲಾಡ್ಜ್ ನಲ್ಲಿ ಕಳೆದ ಮೂರು ದಿನಗಳಿಂದ ರೂಮ್ ಪಡೆದು ವಾಸವಾಗಿದ್ದ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಆಂದ್ರ ಪ್ರದೇಶದ ಅನಂತಪುರ ಮೂಲದ ಪಿ.ಮಾರುತಿ ಎಂಬಾತ ಕಳೆದ ಮೂರು ದಿನದ ಹಿಂದೆ ಕಾರವಾರಕ್ಕೆ ಬಂದಿದ್ದು, ಇಲ್ಲಿನ ಬಿ.ವಿ.ರೆಸಿಡೆನ್ಸಿ ಲಾಡ್ಜ್ ನಲ್ಲಿ ರೂಂಮ್ ಪಡೆದುಕೊಂಡಿದ್ದ ಎನ್ನಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ರೂಮ್ ಪಡೆದಿದ್ದ ಈತ ಭಾನುವಾರ ಬೆಳಿಗ್ಗೆ 10 ಗಂಟೆಗೆ ರೂಮ್ ನಿಂದ ಹೊರಗೆ ಬಂದು ನಂತರ ಮತ್ತೆ ಒಳ ಹೋಗಿದ್ದನ್ನು ಲಾಡ್ಜ್ ಸಿಬ್ಬಂದಿ ಗಮನಿಸಿದ್ದಾರೆ ಎನ್ನಲಾಗಿದೆ.
ಆದರೆ ಇಂದು ಬೆಳಿಗ್ಗೆ ಎಷ್ಟು ಕೂಗಿದರೂ ಬೆಲ್ ಮಾಡಿದರೂ ವ್ಯಕ್ತಿ ರೂಮ್ ಗೆ ತೆರೆಯದೆ ಇದ್ದಾಗ ಅಲ್ಲುಗೆ ಲಾಡ್ಜ್ ಗೆ ಸಂಬಂಧಿಸಿದವರು ಹೋಗಿ ನೋಡಿದಾಗ ಪ್ಯಾನ್ ಗೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು ಕಾರಣ ಇನ್ನು ತಿಳಿದುಬಂದಿಲ್ಲ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತನಿಖೆ ನಂತರ ಪೂರ್ಣ ಮಾಹಿತಿ ಲಭ್ಯವಾಗಬೇಕಾಗಿದೆ.