ಅಂಕೋಲಾ : ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಅಂಕೋಲಾ ತಾಲೂಕಿನ ತೆಂಕಣಕೇರಿಯ ಗೌತಮ ಪ್ರಭಾಕರ ನಾಯ್ಕ, ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.

ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿ, ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಗೌತಮ ಉದ್ಯೋಗದಲ್ಲಿದ್ದ ಎನ್ನಲಾಗಿದೆ. ಸೋಮವಾರ ಮಧ್ಯಾಹ್ನ ಈ ದುರ್ಘಟನೆ ನಡೆದಿದೆ. ಮನೆಯಲ್ಲಿ ಯಾರು ಇರದ ವೇಳೆ ಅದಾವುದೋ ಕಾರಣದಿಂದ ಮಾನಸಿಕವಾಗಿ ನೊಂದು ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

RELATED ARTICLES  A Beginner's Guide To Beam Cryptocurrency

ಮೃತ ಗೌತಮ ಶಾಂತ ಸ್ವಭಾವದ ಯುವಕ ನಾಗಿದ್ದು, ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಇರುತ್ತಿದ್ದು, ಆತನ ಆಕಸ್ಮಿಕ ನಿಧನದ ಸುದ್ದಿಗೆ ಊರಲ್ಲಿ ನೀರವ ಮೌನ ಆವರಿಸಿದಂತಿದೆ.

ಕೋವಿಡ್ ಲಾಕ್ಡೌನ್ ಕಾರಣ ಮನೆಯಿಂದಲೇ ಕಂಪನಿ ಕೆಲಸ (ವರ್ಕ್ ಪ್ರಾಂ ಹೋಂ) ಮಾಡುತ್ತಿದ್ದು, ಸಾವಿಗೆ ಶರಣಾಗುವ ಪೂರ್ವವೂ ಕೆಲ ಹೊತ್ತು ಕಾರ್ಯ ನಿರ್ವಹಿಸಿದಂತಿದೆ ಎನ್ನುವುದು ಕೆಲ ಸ್ಥಳೀಯರ ಅಭಿಪ್ರಾಯವಾಗಿದೆ.

RELATED ARTICLES  ಗೌರಿ ವ್ರತ: ಮಹಿಳೆಯರಿಂದ ಬಾಗಿನ ಅರ್ಪಣೆ

ಮೃತನ ತಾಯಿ ಶಿಕ್ಷಣ ಇಲಾಖೆಯಲ್ಲಿ ಸಿ. ಆರ್. ಪಿ.ಯಾಗಿ ಸೇವೆ ಸಲ್ಲಿಸುತ್ತಿದ್ದು,ಈ ಹಿಂದಿನ ಕಹಿ ಘಟನೆ ಪತಿಯ ಸಾವಿನ ದುಃಖ ಮರೆಯುವ ಮುನ್ನವೇ,ಮುದ್ದಿನ ಮಗನನ್ನು ಕಳೆದುಕೊಂಡು ರೋದಿಸುವಂತಾಗಿದೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.