ಭಟ್ಕಳ: ಭಟ್ಕಳ ಪಿ.ಎಲ್.ಡಿ. ಬ್ಯಾಂಕ್ ನ ನಿರ್ದೇಶಕ ತಾಲೂಕಿನ ಜಾಲಿ ನಿವಾಸಿಯಾದ ಮಂಜುನಾಥ ದುರ್ಗಪ್ಪ ನಾಯ್ಕ ರಸ್ತೆ ದಾಟುತ್ತಿದ್ದ ವೇಳೆ ಅಪಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ. ಬಿಜೆಪಿ ಮುಖಂಡರಾಗಿದ್ದ ಇವರು ಹಲವು ಸಂಘಟನೆಗಳಲ್ಲಿ ಸಕ್ರೀಯರಾಗಿದ್ದರು. ಅಪಾರ ಜನಬೆಂಬಲ ಹೊಂದಿದ್ದ ಇವರು ಭಟ್ಕಳ ವಿನಾಯಕ ಸೌಹಾರ್ಧ ಬ್ಯಾಂಕಿನ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಮೃತರಿಗೆ ಪತ್ನಿ ಹಾಗೂ ಎರಡು ಮಕ್ಕಳಿದ್ದಾರೆ.

ಜಾತುರ್ಮಾಸ ವೃತದಲ್ಲಿದ್ದ ಉಜಿರಿಯ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರನ್ನು ಭೇಟಿ ಮಾಡಿ ಊರಿಗೆ ಹಿಂತಿರುಗುವ ವೇಳೆ ಮಾರ್ಗ ಮಧ್ಯದಲ್ಲಿ ನಿಲ್ಲುಸಿದ ವಾಹನದಿಂದ ಇಳಿದು ರಸ್ತೆ ದಾಟುತ್ತಿದ್ದ ವೇಳೆ ಭಟ್ಕಳ ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಜಾಲಿ ನಿವಾಸಿಯಾದ ಮಂಜುನಾಥ ದುರ್ಗಪ್ಪ ನಾಯ್ಕ ರವರಿಗೆ ಬೈಕ್ ಡಿಕ್ಕಿಯಾಗಿ ದಾರುಣವಾಗಿ ಮೃತಪಟ್ಟಿದ್ದಾರೆ. ಬೈಂದೂರ ತಾಲುಕಿನ ಯಡ್ತರೆ ರಾಹುತನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಬೈಕ್ ಸವಾರ ಉಪ್ಪುಂದ ಕರ್ಕಿಕಳಿ ನಿವಾಸಿ ಕಿರಣ್ ಎಂಬಾತ ಗಂಭೀರ ಗಾಯಗೊಂಡಿದ್ದು ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

RELATED ARTICLES  ಮಹಿಳೆಯ ಹೊಟ್ಟೆಯಲ್ಲಿ ಬೆಳೆದಿದ್ದ 4 ಕೆ.ಜಿ ಗಡ್ಡೆ ಹೊರತೆಗೆದ ವೈದ್ಯರು.

ಟೆಂಪೋ ಟ್ರ‍್ಯಾಕ್ಸ್ ಮೂಲಕ ಧರ್ಮಸ್ಥಳ ಉಜಿರೆಗೆ ತೆರಳಿ ಊರಿಗೆ ಹಿಂತಿರುಗುತ್ತಿದ್ದ ಭಟ್ಕಳ ಜಾಲಿಯ ತಂಡವೊoದು ರಾಹುತನಕಟ್ಟೆ ಬಳಿ ವಾಹನ ನಿಲ್ಲಿಸಿದ್ದು, ಮಂಜುನಾಥ್ ನಾಯ್ಕ್ ಅವರು ರಾಷ್ಟ್ರೀಯ ಹೆದ್ದಾರಿಯ ಎದುರು ಬದಿ ಇದ್ದ ಮೀನಿನ ಅಂಗಡಿಗೆ ತೆರಳುತ್ತಿದ್ದ ಸಂದರ್ಭ ಬೈಂದೂರು ಕಡೆಯಿಂದ ಬುಲೆಟ್ ಬೈಕಿನಲ್ಲಿ ಬಂದ ಯುವಕ ಅವರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಅಫಘಾತದ ರಭಸಕ್ಕೆ ರಸ್ತೆ ದಾಟುತ್ತಿದ್ದ ವ್ಯಕ್ತಿಯು ಬದಿಗೆ ಎಸೆಯಲ್ಪಟ್ಟು ಅಲ್ಲಿಯೇ ಮೃತಟ್ಟಿದ್ದಾರೆ. ಬುಲೆಟ್ ಬೈಕ್ ಸವಾರ ಡಿವೈಡರ್ ಬದಿಗೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗಾಗಿ ಕುಂದಾಪುರಕ್ಕೆ ಕೊಂಡೊಯ್ಯಲಾಗಿದೆ. ಬೈಂದೂರು ಪಿಎಸೈ ಪವನ್ ನಾಯಕ್ ಹಾಗೂ ಸಿಬ್ಬಂಧಿಗಳು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು, ಈ ಬಗ್ಗೆ ಬೈಂದೂರು ಠಾಣೆ ಪ್ರಕರಣ ದಾಖಲಾಗಿದೆ. ನಿಧನದ ಸುದ್ದಿ ತಿಳಿಯುತ್ತಿದ್ದಂತಯೇ ಶಾಸಕ ಸುನೀಲ ನಾಯ್ಕ ಸೇರಿದಂತೆ ನೂರಾರು ಜನರು ಬೈಂದೂರು ಅಸ್ಪತ್ರೆಯ ಎದುರು ಜಮಾಯಿಸಿದ್ದರು. ಮುಂದಿನ ಪ್ರಕ್ರಿಯೆ ಇವರೆಲ್ಲರ ಸಮ್ಮುಖದಲ್ಲಿ ನಡೆಸಲಾಗಿದೆ ಎಂದು ವರದಿಯಾಗಿದೆ.

RELATED ARTICLES  ಆರು ಗ್ರಾಮಗಳಿಗೆ ಇನ್ನೂ ಸಿಕ್ಕಿಲ್ಲ ವಿದ್ಯುತ್ ಸಂಪರ್ಕ: ಹೋರಾಟದ ಹಾದಿ ಹಿಡಿದ ಗ್ರಾಮಸ್ಥರು.

ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಜನವಸತಿ ಪ್ರದೇಶವಿದ್ದರೇ ವಿದ್ಯುತ್ ದೀಪಗಳನ್ನು ಅಳವಡಿಸಬೇಕೆಂಬ ನಿಯಮವಿದ್ದರೂ ಐಆರ್‌ಬಿ ಕಂಪೆನಿ ಎಲ್ಲವನ್ನೂ ಗಾಳಿಗೆ ತೂರಿ ಕುಳಿತಿದೆ. ರಾಹುತನಕಟ್ಟೆಯ ಜನಸಂಚಾರ ಇರುವ ಭಾಗದಲ್ಲಿ ತೀರ ಕತ್ತಲು ಆವರಿಸಿರುವುದರಿಂದ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇದೆ ಎಂಬುದು ಸಾರ್ವಜನಿಕರ ಮಾತಾಗಿದೆ.