ಕುಮಟಾ : ಕಾಗಾಲ ಗ್ರಾಮ ಪಂಚಾಯತದ ಅಂಗಡಿಕೇರಿ ವಾರ್ಡಿನ ಹಿರಿಯ ಸದಸ್ಯ ಪುರುಷೋತ್ತಮ ಬೀರಕೋಡಿ ಹಾಗೂ ಯುವ ಸದಸ್ಯ ಪ್ರಮೋದ ಅವರು ಮತ್ತು ಅವರ ಜೊತೆ ರೋಹಿದಾಸ ಶೇಟ್ ಮಹಾಬಲ ಬೀರಕೋಡಿ ಇವರು ಕಾಗಾಲ ಅಂಗಡಿಕೇರಿ ಗುಡ್ ಕಾಗಾಲಕ್ಕೆ ಅನುಕೂಲವಾಗುವ ಹಾಗೆ ಕೊರೊನಾ ಲಸಿಕೆ ಕಾರ್ಯಕ್ರಮ ಆಗಬೇಕೆಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಚಿದಾನಂದ ಭಂಡಾರಿ ಕಾಗಾಲ ಅವರ ಮೂಲಕ ದೂರವಾಣಿಯಲ್ಲಿ ಶಾಸಕ ದಿನಕರ ಶೆಟ್ಟಿಯವರನ್ನು ಸಂಪರ್ಕಿಸಿ ವಿನಂತಿಸಿಕೊಂಡಾಗ ಸಾರ್ವಜನಿಕರ ಕೋರಿಕೆಗೆ ಸ್ಪಂದಿಸಿದ ಶಾಸಕರು ಕೂಡಲೆ ಸ್ಥಳದ ಬಗ್ಗೆ ಮಾಹಿತಿ ಪಡೆದುಕೊಂಡು ಅಂಗಡಕೇರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಲಸಿಕಾ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ಅದರರಂತೆ ಅಗಷ್ಟ 23 ಸೋಮವಾರ ಲಸಿಕೆ ನೀಡುವ ಕಾರ್ಯಕ್ರಮ ಶಿಸ್ತು ಬದ್ಧವಾಗಿ ಶಾಂತರೀತಿಯಿಂದ ನೆರವೇರಿತು.

RELATED ARTICLES  ಕುಮಟಾದಲ್ಲಿ ನಿಮಗಾಗಿ ಕಾದಿದೆ ಅಪೂರ್ವ ಉದ್ಯೋಗ ಅವಕಾಶ.

ಲಸಿಕೆ ಪಡೆಯಲು ಜನರು ಉತ್ಸಾಹದಿಂದ ಆಗಮಿಸಿದರು.ಕೆಲವರಂತು ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಜನರು ಸರದಿ ಸಾಲಿನಲ್ಲಿ ನಿಂತಿದ್ದರು.ಪಂಚಾಯತ ಸದಸ್ಯರಾದ ಪುರುಷೋತ್ತಮ ಬೀರಕೋಡಿ,ಪ್ರಮೋದ ಅವರು ಜತೆಗೂಡಿ ಆಶಾ ಕಾರ್ಯಕರ್ತೆಯವರ ನೆರವಿನಿಂದ ಜನರಿಗೆ ಟೋಕನ್ ವಿತರಿಸಿದರು.ಯಾವುದೇ ಗೊಂದಲ ಬಡಿದಾಟ ಇಲ್ಲದೇ ವ್ಯವಸ್ಥಿತವಾಗಿ ಲಸಿಕೆಯನ್ನು ನೀಡಲಾಯಿತು.ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಸಂದೀಪಕುಮಾರ,ಸವಿತಾ ತಳವಾರ,ನಾವೇಣಿ ಎಲ್ ಪಟಗಾರ,ಸರೋಜಾ ಕೊಡಾರ ಆಶಾ ಕಾರ್ಯಕರ್ತೆಯರುಗಳಾದ ಯಮುನಾ ಆಗೇರ ವಾಸಂತಿ ಬೀರಕೋಡಿ ಹಾಗೂ ಆರಕ್ಷಕ ಸಿಬ್ಬಂದಿಗಳು ಬಹಳ ಶೃದ್ಧೆಯಿಂದ ಕಾರ್ಯ ನಿರ್ವಹಿಸಿ ಗಮನ ಸೆಳೆದರು. ಪಂಚಾಯತದ ಅಧ್ಯಕ್ಷರಾದ ಶಶಿಕಾಂತ ನಾಯ್ಕರವರು ಉಪಸ್ಥಿತರಿದ್ದು ಸಹಕರಿಸಿದರು.

ಸ್ಥಳೀಯ ಸಮಾಜ ಸೇವಿಗಳಾದ ಡಿ ಎನ್ ಪಟಗಾರ ಎಚ್ ಎನ್  ವಿಠ್ಠಲ ಮಂಜುನಾಥ ನಾಯ್ಕ ಮನೋಜ ಮೂರೂರಕರ್ ಮೊದಲಾದವರು ಕೈಜೋಡಿಸಿ ಸಾರ್ವಜನಿಕರಿಗೆ ಸಹಕರಿಸಿ ಯಾವುದೇ ತೊಂದರೆ ಆಗದಂತೆ ನೋಡಿಕೊಂಡರು.ಏಮ್ಸ ಸಂಸ್ಥೆಯ ಕುರಿತಾದ ಮಾತುಕತೆಗೆ ನಿಯೋಗದೊಂದಿಗೆ ಮಂಗಳೂರಿಗೆ ತೆರಳಿದ್ದ ಶಾಸಕ ದಿನಕರ ಶೆಟ್ಟಿಯವರು ದೂರವಾಣಿ ಮೂಲಕ ಲಸಿಕಾ ವಿತರಣೆಯ ಮಾಹಿತಿ ಪಡೆದುಕೊಂಡಿದ್ದು. ಗುಡ್ ಕಾಗಾಲ ಭಾಗದಲ್ಲೂ ಲಸಿಕೆಯ ಕಾರ್ಯಕ್ರಮವನ್ನು ಆದಷ್ಟು ಶೀಘ್ರದಲ್ಲಿಯೇ ಹಮ್ಮಿಕೊಳ್ಳಲು ವ್ಯವಸ್ಥೆ ಮಾಡುವುದಾಗಿ ಶಾಸಕರು ಭರವಸೆ ನೀಡಿರುವುದಾಗಿ ತಿಳಿದು ಬಂದಿದ್ದು ಶಾಸಕರ ಸ್ಪಂದನೆ ಸಾರ್ವಜನಿಕರಲ್ಲಿ ತೀವ್ರ ಮೆಚ್ಚುಗೆ ವ್ಯಕ್ತವಾಗಿದ್ದು.ಲಸಿಕಾ ವಿತರಣ ಕಾರ್ಯಕ್ರಮಕ್ಕೆ ಅಂಗಡಿಕೇರಿ ವಾರ್ಡನ ಸದಸ್ಯರು ಹಾಗೂ ಸಮಾಜಸೇವಿಗಳ ಸಹಕಾರದ ಬಗ್ಗೆಯೂ ಜನರು ಸಂತಸವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

RELATED ARTICLES  ವಿದ್ಯಾರ್ಥಿಗಳಿಗಾಗಿ ಸಾಹಿತ್ಯ ಕಮ್ಮಟ ಕಾರ್ಯಕ್ರಮ