ಗೋಕರ್ಣ : ಕಳೆದ ಮೂರು ದಿನದ ಹಿಂದೆ ಸಮುದ್ರದ ಕಲ್ಲು ಬಂಡೆಯ ಸನಿಹ ಸೆಲ್ಫಿ ತೆಗಿಯಲು ಹೋದ ಯುವಕ ಕಾಲುಜಾರಿ ಬಿದ್ದು ಸಮುದ್ರ ಪಾಲಾಗಿದ್ದ ಘಟನೆ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಓಂ ಬೀಚ್ ನಲ್ಲಿ ನಡೆದಿತ್ತು.

ಹಾನಗಲ್ ಮೂಲದ ಶೇಕಪ್ಪ ಕಮಾಟಿ (35) ಸಮುದ್ರಪಾಲಾದ ವ್ಯಕ್ತಿಯಾಗಿದ್ದು ಆತ ಮಧ್ಯಾನ ಹಾನಗಲ್ ನಿಂದ ಗೋಕರ್ಣಕ್ಕೆ 12 ಜನರೊಂದಿಗೆ ಆಗಮಿಸಿದ್ದ ಈತ ಓಂ ಬೀಜ್ ನ ಬಲಭಾಗದಲ್ಲಿರುವ ಸಮುದ್ರ ತೀರದ ಕಲ್ಲುಬಂಡೆ ಬಳಿ ಸೆಲ್ಫಿ ತೆಗೆದುಕೊಳ್ಳಲು ತೆರಳಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು.

RELATED ARTICLES  ಕೃಷಿ ಪ್ರತಿಷ್ಠಾನದ ನೇತೃತ್ವದಲ್ಲಿ ಕೃಷಿ ಜಯಂತಿ: ಉತ್ತಮ ಕೃಷಿಕರಿಗೆ ಸಿಗಲಿದೆ ಗೌರವ

ತನ್ನ ಮೊಬೈಲಲ್ಲಿ ಸೆಲ್ಫಿ ತೆಗೆಯುವ ವೇಳೆ ಅಲೆಗಳ ಹೊಡೆತಕ್ಕೆ ಸಮುದ್ರದಲ್ಲಿ ಶೇಕಪ್ಪ ಕೊಚ್ಚಿಹೋಗಿದ್ದ , ಲೈಫ್ ಗಾರ್ಡಗಳು ರಕ್ಷಿಸುವ ಪ್ರಯತ್ನ ಮಾಡಿದರಾದರೂ ರಕ್ಷಣೆ ಸಾಧ್ಯವಾಗಿರಲಿಲ್ಲ. ಈತನ ಶವಕ್ಕಾಗಿ ಪೊಲೀಸರಿಂದ ಶೋಧ ಕಾರ್ಯ ನಡೆದಿದ್ದು ಮೂರು ದಿನದ ನಂತರ ಇಂದು ಆತನ ಶವ ಪತ್ತೆಯಾಗಿದೆ.

RELATED ARTICLES  ಬಾಲಾರೋಪಿಗಳ ಗೃಹದಿಂದ ಬಾಲಪರಾಧಿ ಎಸ್ಕೇಪ್

ಪೊಲೀಸರು ಹಾಗೂ ಕರಾವಳಿ ಕಾವಲು ಪಡೆಯವರು ಹಾಗೂ ಲೈಫ್ ಗಾರ್ಡಗಳು ಶವವನ್ನು ಇಂದು ಮೇಲಕ್ಕೆ ತಂದಿದ್ದು ಕುಟುಂಬಕ್ಕೆ ಹಸ್ತಾಂತರಿಸುವ ಹಾಗೂ ಇನ್ನಿತರ ಪ್ರಕ್ರಿಯೆ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.