ಶಿರಸಿ : ತಾಲೂಕಿನ ಕನವಳ್ಳಿ ಗಲ್ಲಿಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ವಿಧವೆ ಮಹಿಳೆಗೆ ಬಾಳು ಕೊಡಲು ಮುಂದಾಗಿದ್ದ ಈ ಯುವಕ ಆತ್ಮಹತ್ಯೆಗೆ ಶರಣಾಗಿರುವುದು ಇದೀಗ ಸುದ್ದಿಯಾಗಿದೆ.

ಶಿರಸಿ ತಾಲೂಕಿನ ಕನವಳ್ಳಿ ಗಲ್ಲಿಯ ಅಬ್ದುಲ್ ಖಾದರ್ ಹಮೀಮ್ ಸಾಬ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದೆ. ಈತ ವಿಧವೆ ಮಹಿಳೆಯೊಬ್ಬಳನ್ನು ಪ್ರೀತಿಸಿ ಆಕೆಯನ್ನ ಮದುವೆಯಾಗುವುದಾಗಿ 6 ತಿಂಗಳ ಹಿಂದೆ ಅವಳನ್ನು ತನ್ನ ಮನೆಗೆ ಕರೆತಂದು ಇಟ್ಟುಕೊಂಡಿದ್ದ ಎಂದು ಸ್ಥಳೀಯ ವರದಿಗಳು ಹೇಳಿದೆ.

RELATED ARTICLES  ಜಿಲ್ಲೆಯಲ್ಲಿ ನಾಳೆ ಎಲ್ಲೆಲ್ಲಿ ಎಷ್ಟು ವ್ಯಾಕ್ಸಿನ್ ಲಭ್ಯ..!

ಆದರೆ ಕೆಲ ದಿನಗಳ ಹಿಂದೆ ವಿಧವೆ ಮಹಿಳೆ ಈತನಿಗೆ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿದ್ದು ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಿದ್ದ ಈತ ಸೋಮವಾರ ತನ್ನ ಮನೆಯಲ್ಲಿಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನುವ ಮಾಹಿತಿ ಲಭ್ಯವಾಗಿದೆ.

RELATED ARTICLES  ನೋಟ್ ಬ್ಯಾನ್ ಕ್ರಮ ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ!

ಯುವಕನೊಬ್ಬ ವಿಧವೆಗೆ ಬಾಳು ಕೊಡಲು ಹೋಗಿ ತನ್ನ ಬದುಕನ್ನೇ ಅಂತ್ಯಮಾಡಿಕೊಂಡಿರುವುದು ವಿಚಿತ್ರವಾಗಿ ಕಾಣಿಸುತ್ತಿದ್ದೆ ಎನ್ನುತ್ತಾರೆ ಸ್ಥಳೀಯರು. ಘಟನೆಗೆ ಸಂಬಂಧಿಸಿದಂತೆ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತನಿಖೆಯ ನಂತರದಲ್ಲಿ ಸಂಪೂರ್ಣ ಮಾಹಿತಿ ಹೊರಬರಬೇಕಿದೆ.