ಕುಮಟಾ: ಉತ್ತರಕನ್ನಡ ಜಿಲ್ಲೆಯಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಿಸುವ ವಿಚಾರವಾಗಿಬಪ್ರಧಾನಿ ಅವರಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದ ಡಾ. ಪದ್ಮನಾಭ ಕಾಮತ್ ಅವರನ್ನು ಸೋಮವಾರ ಶಾಸಕ ದಿನಕರ ಶೆಟ್ಟಿ ಹಾಗೂ ಅವರ ನಿಯೋಗ ಭೇಟಿ ಮಾಡಿ ಉತ್ತರ ಕನ್ನಡದ ಬೇಡಿಕೆಯನ್ನು ನಿವೇದಿಸಿ ಮಹಾನ್ ಕಾರ್ಯದಲ್ಲಿ ನೀವು ಬೆಂಗಾವಲಾಗಿ ನಿಲ್ಲಬೇಕು ಎಂದು ವಿನಂತಿಸಿಕೊಂಡಿದ್ದಾರೆ.

ಆಶ್ರಯ ಫೌಂಡೇಶನ್‌ನ ರಾಜೀವ ಗಾಂವಕರ, ಹಿರಿಯ ವಕೀಲ ಆರ್.ಜಿ.ನಾಯ್ಕ, ಧೀರು ಶಾನಭಾಗ, ನಿತ್ಯಾನಂದ ನಾಯ್ಕ ವನ್ನಳ್ಳಿ ಸೇರಿದಂತೆ ಆರು ಮಂದಿ ಸದಸ್ಯರ ಸಮಿತಿಯು ಬೆಳಿಗ್ಗೆ ಮಂಗಳೂರಿಗೆ ತೆರಳಿತ್ತು. ಡಾ.ಪದ್ಮನಾಭ ಕಾಮತ್ ಅವರನ್ನು ಭೇಟಿ ಮಾಡಿ ಕೆಲವು ಸಮಯ ಮಾತುಕತೆ ನಡೆಸಿದರು. ಉತ್ತರ ಕನ್ನಡ ಜಿಲ್ಲೆಗೆ ವಿಮ್ಸ್ ಆಸ್ಪತ್ರೆ ಕೊಡಿ ಎಂಬ ಬೇಡಿಕೆ ಇಟ್ಟಿದ್ದಕ್ಕೆ ಕಾಮತರಿಗೆ ಅಭಿನಂದನೆ ಸಲ್ಲಿಸಿದ ದಿನಕರ ಶೆಟ್ಟಿ ಅವರು, ಈ ಪ್ರಯತ್ನ ಯಶಸ್ವಿಯಾಗಬೇಕು. ಶಾಸಕನಾಗಿ ನನ್ನಿಂದ ಯಾವುದೇ ರೀತಿಯ ಸಹಾಯ ಸಹಕಾರ ನೀಡಲು ನಾನು ಸಿದ್ಧನಿದ್ದೇನೆ. ನಮ್ಮ ಜನತೆಗೆ ಈ ಆಸ್ಪತ್ರೆ ಅತ್ಯಂತ ಅವಶ್ಯಕತೆ ಇದೆ. ಎಂಬುದನ್ನು ತೋಡಿಕೊಂಡರು. ಜೊತೆಗೆ ಪ್ರತಿಯೊಂದು ಹೆಜ್ಜೆಯಲ್ಲೂ ನಾವು ಜೊತೆಗಿರುವುದಾಗಿ ವಿಶ್ವಾಸದಿಂದ ಹೇಳಿದರು.

RELATED ARTICLES  ಜನವರಿ 27ರಿಂದ 31ರ ವರೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-೯

ಜಿಲ್ಲೆಯಲ್ಲಿ ಏಮ್ಸ್ ಆಸ್ಪತ್ರೆ ನಿಮ್ಮ ಪ್ರಯತ್ನದ ಮೇಲೆ ನಿಂತಿದೆ. ನಿಮಗೆ ಈ ದಿಶೆಯಲ್ಲಿ ನಮ್ಮ ಜಿಲ್ಲೆಯ ಎಲ್ಲ ರೀತಿಯ ಸಹಕಾರ ಒದಗಿಸುತ್ತೇವೆ. ನಿಮ್ಮ ಹೋರಾಟ, ಪ್ರಯತ್ನದ ಜೊತೆ ನಾವು ಸದಾ ಇದ್ದೇವೆ ಎಂಬ ಭರವಸೆಯನ್ನು ಶಾಸಕರು ನೀಡಿದರು. ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಬಂದು ಉತ್ತರ ಕನ್ನಡ ಅಭಿವೃದ್ಧಿ ಮತ್ತು ವಿಮ್ಸ್ ಆಸ್ಪತ್ರೆ ನಿರ್ಮಾಣದ ಕುರಿತು ಮಾತನಾಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಡಾ. ಪದ್ಮನಾಭ
ಕಾಮತ್ ಅವರು ತದನಂತರ ಕಾಗಾಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಇಸಿಜಿ ಯಂತ್ರವನ್ನು ಕೊಡುಗೆಯಾಗಿ ನೀಡಿದರು.

RELATED ARTICLES  ಅನ್ಯಧರ್ಮಕ್ಕೆ ಮತಾಂತರಗೊಳಿಸಲು ಯತ್ನ : ಮೂವರು ಮಹಿಳೆಯರು ಪೊಲೀಸರ ವಶ.

ಈ ಸಂದರ್ಭದಲ್ಲಿ ಭಟ್ಕಳ ಮೂಲದ ದೇಶವಿಖ್ಯಾತ ಹಂಗೋ ಐಸ್‌ಕ್ರೀಮ್ ಮುಖ್ಯಸ್ಥ ಪ್ರದೀಪ ಪೈ ಆಗಮಿಸಿ ಬೇಡಿಕೆಯನ್ನು ಬೆಂಬಲಿಸಿದರು. ಈ ಸಂದರ್ಭದಲ್ಲಿ ಡಾ. ಕಾಮತ್ ಮಾತನಾಡಿ ಪ್ರದೀಪ ಕಾಮತ ಬಿಜೆಪಿ ಸರಕಾರದಲ್ಲಿ ಪ್ರಭಾವಿ ವ್ಯಕ್ತಿತ್ವದವರಾಗಿದ್ದು ಅವರ ಶಕ್ತಿಯನ್ನು ಬಳಸಿಕೊಳ್ಳಿ ಎಂದರು.