ಕುಮಟಾ : ಆಧುನಿಕ ಜೀವನ ಶೈಲಿ ಹಾಗು ಅಸಂತುಲಿತ ಆಹಾರ ಪದ್ಧತಿ ಜೊತೆಗೆ ಮಿತಿಮೀರಿದ ಮಾನಸಿಕ ಒತ್ತಡಗಳಿಂದ ಇಂದು ಅಪಾರಮಂದಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ,ಹೃದಯ ಸ್ತಂಭನಗಳಿಂದ ಅಕಾಲ ಮರಣವನ್ನು ಹೊಂದುತ್ತಿರು ಅಂಶವು ಮನುಕುಲವನ್ನೇ ತಲ್ಲಣಗೊಳಿಸುತ್ತಿದೆ.ಕೆಲವೊಮ್ಮೆ ಸೂಕ್ತ ಚಿಕಿತ್ಸೆ ದೊರೆತರೆ ಬದುಕಿಸಬಹುದಿತ್ತು ಎಂಬ ಅಸಹಾಯಕತೆಯ ನುಡಿಗಳೂ ಕೇಳಿಬರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಮಾಡುವವರಿಗಂತೂ ಪ್ರಾಥಮಿಕ ಚಿಕಿತ್ಸೆಗೂ ಕಷ್ಟ ಎನಿಸುವ ವಾತಾವರಣ ಇರುತ್ತದೆ.ಇವುಗಳನ್ನೆಲ್ಲಾ ಗಮನಿಸಿದ ಎಮ್ಸನ ಖ್ಯಾತ ಹೃದಯರೋಗ ತಜ್ಞರಾದ ಡಾಕ್ಟರ್ ಪದ್ಮನಾಭ ಕಾಮತ್ ರವರು ಹಲವಾರು ಪ್ರಾಥಮಿಕ ಚಿಕಿತ್ಸಾಕೇಂದ್ರಗಳಿಗೆ ಅತ್ಯಮೂಲ್ಯವಾದ ಇ ಸಿ ಜಿ ಯಂತ್ರಗಳನ್ನು ಉಚಿತವಾಗಿ ವಿತರಿಸುವುದರ ಮೂಲಕ ಬಡವರ ಆಶಾಕಿರಣ ಎನಿಸಿದ್ದಾರೆ. ಇದು ವರೆಗೂ ಕರ್ನಾಟಕದಲ್ಲಿ 414 ಇಸಿಜಿ ಯಂತ್ರವನ್ನು ನೀಡಿರುವ ಇವರು ಕಾಗಾಲ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ನೀಡಿರುವುದು 415 ನೆಯ ಯಂತ್ರವಾಗಿದೆ. ಪ್ರಸ್ತುತ ಮಣಿಪಾಲ ಜ್ಯೋತಿ ಕೆ ಎಂ ಸಿ ಯ ಹೃದ್ರೋಗ ತಜ್ಞರಾದ ಇವರು ಯಕ್ಷಗಾನ ಕಲೆಯ ಆರಾಧಕರಾಗಿದ್ದು ಹೃದಯದ ಕಾಯಿಲೆಗೆ ಒಳಗಾದ ಅನೇಕ ಕಲಾವಿದರನ್ನು ಉಪಚರಿಸಿ ಅವರಿಗೆ ಧೈರ್ಯವನ್ನು ಸ್ಥೈ ರ್ಯ ವನ್ನೂ ತುಂಬುತ್ತಿದ್ದಾರೆ.ವೈದ್ಯರ ಈ ಸಾಧನೆಯು ಪ್ರಧಾನಿ ನರೇಂದ್ರ ಮೋದಿಯವರ ಗಮನವನ್ನೂ ಸೆಳೆದು ಅವರಿಂದ ಶ್ಲಾಘನೆಗೆ ಒಳಪಟ್ಟಿದೆ.

RELATED ARTICLES  ಪ್ರತಿನಿತ್ಯದ ಜೀವನದಲ್ಲಿ ಮನುಷ್ಯ ಆರಾಮದಿಂದ ಇರಬೇಕಾದರೆ ಯೋಗ ಬೇಕೇ ಬೇಕು:ಅರವಿಂದ ದಳವಾಯಿ

ಪ್ರಸ್ತುತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆಯನ್ನು ಅನುಭವಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಗೂ ವೈದ್ಯಕೀಯವಾಗಿ ಮಹ್ವತ್ವದ ಕೊಡುಗೆಗಳನ್ನು ಕೊಡಬೇಕೆಂಬ ಕಳಕಳಿಯನ್ನು ಹೊಂದಿರುವ ಈಬಡವರ ಬಂಧು ಡಾಕ್ಟರ್ ಪದ್ಮನಾಭ ಕಾಮತರವರನ್ನು ಖುದ್ದಾಗಿ ಕುಮಟಾದ ಶಾಸಕ ದಿನಕರ ಶೆಟ್ಟಿಯವರು ಯುವ ಉತ್ಸಾಹಿ ಸಮಾಜ ಚಿಂತಕ ನಿತ್ಯಾನಂದ ಗೋಳಿ ನಾಯಕ,ಹಾಂಗ್ಯೋದ ಪ್ರದೀಪ ಪೈ ಅವರ ಜೊತೆಗೆ ವಕೀಲರಾದ ಆರ್ ಜಿ ನಾಯ್ಕ ,ಸಮಾಜ ಸೇವಿಗಳಾದ ರಾಜೀವ ಗಾಂವ್ಕರ್ ಮತ್ತು ಧೀರೂ ಶಾನಭಾಗ ಮೊದಲಾದವರೊಂದಿಗೆ ಭೇಟಿಮಾಡಿ ಮಹತ್ವದ ಚರ್ಚೆಯನ್ನು ಮಾಡಿದ್ದಾರೆ.ಇದೇ ಸಂದರ್ಭದಲ್ಲಿ ಕುಮಟಾದ ಕಾಗಾಲದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 415 ನೆಯ ಇಸಿಜಿ ಯಂತ್ರವನ್ನು ಡಾಕ್ಟರ್ ಪದ್ಮನಾಭ ಕಾಮತರು ಕಳುಹಿಸಿಕೊಡುವುದರ ಮೂಲಕ ಕಾಗಾಲ,ಬಾಡ,ಹೊಲನಗದ್ದೆ, ಕಲಭಾಗ, ಧಾರೇಶ್ವರ ಪಂಚಾಯತ ವ್ಯಾಪ್ತಿಯ ಜನತೆಯ ಪಾಲಿ ಮಹತ್ತರ ವಾದ ಉಪಕಾರವನ್ನು ಮಾಡಿದ್ದಾರೆ. ಇವರ ಉಪಕಾರಕ್ಕೆ ಶಾಸಕ ದಿನಕ ಶೆಟ್ಟಿಯವರು ನಿತ್ಯಾನಂದ ನಾಯಕ ,ರಾಜೀವ ಗಾಂವ್ಕರ್ ಆರ್ ಜಿ ನಾಯ್ಕ,ಧೀರೂ ಶಾನಭಾಗ ಮುಂತಾದವರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

RELATED ARTICLES  ಕರಾವಳಿಯಲ್ಲಿ ರಾಹುಲ್ ಕಮಾಲ್.!

ತಾಲೂಕಾ ವೈದ್ಯಾಧಿಕಾರಿ ಡಾಕ್ಟರ್ ಆಜ್ಞಾ ನಾಯಕ ಹಾಗೂ ಪ್ರಾಥಮಿಕ ಆರೋಗ್ಯಕೇಂದ್ರ ಕಾಗಾಲದ ವೈದ್ಯಾಧಿಕಾರಿಗಳಾದ ಡಾಕ್ಟರ್ ಸತೀಶ ಭಟ್ಟ ಹಾಗೂ ಎಲ್ಲ ಆರೋಗ್ಯ ಸಿಬ್ಬಂದಿಗಳು ಡಾಕ್ಟರ್ ಪದ್ಮನಾಭ ಕಾಮತ್ ರವರಿಗೆ ವಿಶೇಷವಾದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ಉತ್ತರಕನ್ನಡ ಜಿಲ್ಲೆಯಾದ್ಯಂತ ಡಾಕ್ಟರ್ ಪದ್ಮನಾಭ ಕಾಮತ್ ರವರ ಕಾರ್ಯಕ್ಕೆ ಕೃತಜ್ಞೆಗಳು ಹರಿದು ಬರುತ್ತಲಿದೆ.