ಭಟ್ಕಳ: ಇಲ್ಲಿನ ಹನುಮಾನನಗರದ ನಿವಾಸಿ ಮಮತಾ ದೇವೇಂದ್ರ ನಾಯ್ಕ ಅವರು ಮಂಡಿಸಿರುವ ಸಂಶೋಧನಾ ಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ (ಡಾಕ್ಟರೇಟ್) ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.

ಅವರು ಕುವೆಂಪು ವಿಶ್ವವಿದ್ಯಾಲಯದ ರಸಾಯನಶಾಸ್ತ್ರದ ಸಂಶೋಧನೆ ಮತ್ತು ಸ್ನಾತಕೋತ್ತರ ಅಧ್ಯಯನ ವಿಭಾಗದ ಯಾದವ ಬೋಡ್ಕೆ ಅವರ ಮಾರ್ಗದರ್ಶನದಲ್ಲಿ ‘ಕೆಲವು ಪ್ರಮುಖ ಆವರ್ತಕ ಸಂಯುಕ್ತಗಳ ಸಂಶ್ಲೇಷಣೆ, ಗುಣಲಕ್ಷಣ ಮತ್ತು ಜೈವಿಕ ಮೌಲ್ಯಮಾಪನ’ (Synthesis, Characterization And Biological Evaluation Of Some Novel Heterocyclic Compounds) ಎಂಬ ವಿಷಯದ ಬಗ್ಗೆ ಪ್ರಬಂಧ ಮಂಡಿಸಿದ್ದರು.

RELATED ARTICLES  ದೇಶಕ್ಕೆ ಕೀರ್ತಿ ತಂದ ಉತ್ತರಕನ್ನಡದ ಬಾಲಕ.

ಮಮತಾ ನಾಯ್ಕ ಅವರು ಪ್ರಸ್ತುತ ಭಟ್ಕಳದ ಸಿದ್ದಾರ್ಥ ಪದವಿಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಸಾಧನೆಗೆ ಕುಟುಂಬಸ್ಥರು, ಹನುಮಾನನಗರದ ನಾಮಧಾರಿ ಸಮಾಜ, ಯುವಕ ಮಂಡಳ, ಜೈ ಹನುಮಾನ್ ಯುವಕ ಮಂಡಳ ಜೈ, ಹನುಮಾನ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಊರಿನ ಮುಖಂಡರು ಅಭಿನಂದಿಸಿದ್ದಾರೆ.

RELATED ARTICLES  ನಾಳೆ ಮಾತಾ ಮಹಿಮಾ ಪುಸ್ತಕ ಲೋಕಾರ್ಪಣೆ