ಗೋಕರ್ಣ: ಸಮುದ್ರದಲ್ಲಿ ಎಲ್ಲಾ ನಿಯಮಗಳನ್ನು ಮೀರಿ ಈಜಲು ತೆರಳುವವರ ಸಂಖ್ಯೆ ಹೆಚ್ಚುತ್ತಿದ್ದು ಇಂದು ಮತ್ತೆ ಅಂತಹುದೇ ಪ್ರಕರಣ ಇದೀಗ ವರದಿಯಾಗಿದೆ. ಸಮುದ್ರದಲ್ಲಿ ಈಜಲು ಹೋದ ಯುವಕ ಅಲೆಗಳ ಅಬ್ಬರಕ್ಕೆ ಮುಳಗಿ ಸಾವು ಕಂಡ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಇಂದು ಸಂಜೆ ನಡೆದಿದೆ.
ಬೀದರ್ ಜಿಲ್ಲೆಯ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಮಿಕ್ರಮ ಹಾಗೂ ಆರು ಜನ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದಿದ್ದರು. ಈ ವೇಳೆ ಕುಡ್ಲೆ ಕಡಲತೀರದಲ್ಲಿ ಈಜಲುಬತೆರಳಿದ್ದಾರೆ ಎನ್ನಲಾಗಿದ್ದು ಅಲೆಗೆ ಸಿಕ್ಕು ವಿಕ್ರಮ್ ಸಾವು ಕಂಡಿದ್ದಾನೆ.
ಈತನ ಶವವನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ವಾರದಲ್ಲಿ ಇದೇ ರೀತಿಯ ಐದು ಪ್ರಕರಣಗಳು ದಾಖಲಾಗಿದ್ದು ಮೋಜು-ಮಸ್ತಿಗೆ ಬರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಅವರೆಲ್ಲರೂ ಅಧಿಕಾರಿಗಳು ಹಾಗೂ ಗಾರ್ಡ್ಗಳು ನೀಡುವ ಸೂಚನೆಯನ್ನು ಪಾಲಿಸದೆ ಸಮುದ್ರದ ಈಜಿಗೆ ಇಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಇದೇ ತಿಂಗಳಲ್ಲಿ ಪ್ರವಾಸಕ್ಕೆಂದು ಬಂದ 10 ಜನ ಕಡಲಿನ ಅಲೆಗಳಿಗೆ ಕೊಚ್ಚಿ ಹೋಗಿ ಸಾವು ಕಂಡಿದ್ದಾರೆ. ಗೋಕರ್ಣದ ಕಡಲ ತೀರದಲ್ಲಿ ಲೈಪಗಾರ್ಡ,ಪ್ರವಾಸಿ ಮಿತ್ರ ಹಾಗೂ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿದೆ. ಹೀಗಿದ್ದರೂ ಬರುವ ಪ್ರವಾಸಿಗರು ಎಚ್ಚರಿಕೆ ನೀಡಿದರೂ ಸಮುದ್ರದಲ್ಲಿ ಈಜಾಡಲು ಹೋಗಿ ತಮ್ಮ ಜೀವವನ್ನೇ ಕಳೆದುಕೊಳ್ಳುತಿದ್ದಾರೆ ಎನ್ನುವುದು ದುರಂತಕಾರಿ ಸಂಗತಿ.