ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ ಒಟ್ಟು 42,200 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಈ ವರೆಗಿನ ಅತೀ ಹೆಚ್ಚು ಲಸಿಕೆ ನಾಳೆ ಲಭ್ಯವಿದ್ದು, ಲಸಿಕೆ ಪಡೆಯಲು ಬಯಸುವವರಿಗೆ ಸಂತಸದ ಸುದ್ದಿ ಇದಾಗಿದೆ.

ನಾಳೆ ಜಿಲ್ಲಾಸ್ಪತ್ರೆಯಲ್ಲಿ 600 , ಅಂಕೋಲಾದಲ್ಲಿ 2,500, ಭಟ್ಕಳ 4 ಸಾವಿರ, ಹಳಿಯಾಳ 2 ಸಾವಿರ, ಹೊನ್ನಾವರ 5,600, ಜೋಯ್ಡಾ 2 ಸಾವಿರ, ಕಾರವಾರ 1,200, ಮುಂಡಗೋಡ 4 ಸಾವಿರ, ಕುಮಟಾ 5,600, ಶಿರಸಿ 7 ಸಾವಿರ, ಸಿದ್ದಾಪುರ 3,500, ಯಲ್ಲಾಪುರ 2,500, ದಾಂಡೇಲಿ 1,400, ನೇವಿ 300 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

RELATED ARTICLES  ವಿಶ್ವ ಕ್ಷಯರೋಗ ನಿರ್ಮೂಲನ ದಿನಾಚರಣೆಯ ನಿಮಿತ್ತ ಜಾಗೃತಿ ಕಾರ್ಯಕ್ರಮ .

ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು , ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕಿದೆ. ಲಸಿಕೆ ಪಡೆಯುವಲ್ಲಿ ಸುಖಾಸುಮ್ಮನೆ ಬಂದಲ ಸೃಷ್ಟಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಿದೆ ಕೊರೋನಾ ನಿಯಮಗಳನ್ನು ಮೀರುವಂತಹ ಕಾರ್ಯ ಮಾಡಬಾರದೆಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳು ಜನರಲ್ಲಿ ವಿನಂತಿ ಮಾಡಿದ್ದಾರೆ.

ಅಂಕೋಲಾದಲ್ಲಿ ಎಲ್ಲೆಲ್ಲಿ?

ಅಂಕೋಲಾ ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ ಒಟ್ಟೂ 2500 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.
ರಾಮನಗಳಿ (250), ಬೃಹ್ಮೂರು (450),ಕಸಭಾ ಕೇಣಿ (300) ಹಾರವಾಡ (430) ವಾಡಿಬೊಗ್ರಿ (350), ಶಿರೂರು (220), ಅಗಸೂರು (200), ವ್ಯಾಪ್ತಿಯಲ್ಲಿ ಗುರುವಾರ ಲಸಿಕಾಕರಣ ನಡೆಯಲಿದೆ. ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ,ದ್ವಿತೀಯ ಡೋಸ್ ಗಳ ಹೊರತಾಗಿ ವಿಕಲಚೇತನರರು , ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಇಡಲಾಗಿದೆ.