ಹೊನ್ನಾವರ : ತಾಲೂಕಿನಲ್ಲಿ ನಾಳೆ 6 ಸಾವಿರ ಕೋವಿಶೀಲ್ಡ್ ಲಸಿಕೆ ಇದ್ದು, ಹೊನ್ನಾವರ ಪಟ್ಟಣ ಪಂಚಾಯತ ಸಭಾಭವನದಲ್ಲಿ 200 ಜನರಿಗೆ ಲಸಿಕೆ ನೀಡಲಾಗುವುದು. ತಾಲೂಕಾ ಆಸ್ಪತ್ರೆಯ ವತಿಯಿಂದ ಮಾರ್ಥೋಮಾ ಶಾಲೆಯಲ್ಲಿ ನೀಡಲಾಗುತಿತ್ತು . ಆದರೆ, ಶಾಲೆ ಆರಂಭವಾಗಿರುವ ಹಿನ್ನಲೆಯಲ್ಲಿ ಹಳೆಯ
ಡಿ.ಎಫ್ ಓ ಕಚೇರಿ ಕಟ್ಟಡದಲ್ಲಿ ನೀಡಲಾಗುತ್ತಿದೆ.

ಉಳಿದಂತೆ ಕಡತೋಕಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1000 ಡೋಸ್ ಬಂದಿದ್ದು, ಈ ಆರೋಗ್ಯ ಕೇಂದ್ರ ವ್ಯಾಪ್ತಿಯ ಚಂದಾವರ ಮತ್ತು ಹೋದ್ಕೆ ಶಿರೂರ ಭಾಗದಲ್ಲಿ ಕೇಂದ್ರಗಳನ್ನು ತೆರೆದು ನೀಡಲಾಗುತ್ತದೆ, ಹಳದೀಪುರ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ 600 ಡೋಸ್ ನೀಡಲಾಗಿದೆ, ಮಾದಿಕೋಟ್ಟಿಗೆ, ಅಪ್ಪಿಕೆರೆ, ಕರ್ಕಿ ಈ ಮೂರು ಕಡೆಗಳಲ್ಲಿ ತಲಾ ಎರಡನೂರು ವ್ಯಾಕ್ಸಿನ್ ನೀಡಲು ನಿರ್ಧರಿಸಲಾಗಿದೆ.

ಸಾಲಕೋಡ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗೆ 600 ವ್ಯಾಕ್ಸಿನ್ ಬಂದಿದ್ದು, ಇದನ್ನು ದರ್ಬೆಜಡ್ಡಿ ಮತ್ತು ಗುಡ್ಡೆಬಾಳದಲ್ಲಿ ತಲಾ ಮೂರು ನೂರರಂತೆ ನೀಡಲಾಗುವುದು, ಮಂಕಿ ಪ್ರಾಥಮಿಕ ಕೇಂದ್ರ ವ್ಯಾಪ್ತಿಗೆ ಬಂದ 600 ಲಸಿಕೆಯಲ್ಲಿ ನೆಲವಕ್ಕಿ, ಹೆಬ್ಬಾರ ಹಿತ್ಲ, ಮುಗಳಿ ಈ ಭಾಗದವರಿಗಾಗಿ ಗುಣವಂತೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಯಲಿದೆ.

ಗೇರುಸೋಪ್ಪಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 600 ವ್ಯಾಕ್ಸಿನ್ ಬಂದಿದ್ದು, ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕೆಂದು ಕೋರಲಾಗಿದೆ. ಅಲ್ಲದೆ, ಹೆಚ್ಚಿನ ಮಾಹಿತಿಗಾಗಿ ತಮ್ಮ ತಮ್ಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯಕೇಂದ್ರವನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.

RELATED ARTICLES  ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೃಹತ್ ಕಂಟೇನರ್ ಪಲ್ಟಿ.

ಬಳ್ಕೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 500 ಲಸಿಕೆ ಹಂಚಿಕೆಯಾಗಿದ್ದು, ಇದನ್ನು ಕೆಳಗಿನೂರು, ಅಪ್ಸರಕೊಂಡ, ಕಾಸರಕೋಡ ಭಾಗದಲ್ಲಿ ನೀಡಲಾಗುತ್ತದೆ, ಹೊಸಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 500 ವಿತರಣೆಯಾಗಿದ್ದು, ಅದರಲ್ಲಿ 300 ಹೊಸಾಡ , ಮಾವಿನಕುರ್ವಾ ಭಾಗಕ್ಕೆ , 300 ಜಲವಳ್ಳಿ ಭಾಗಕ್ಕೆ ನೀಡಲಾಗುತ್ತದೆ, ಖರ್ವಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವ್ಯಾಕ್ಸಿನ್ ಬಂದಿದ್ದು ಅದನ್ನು ಹಿರೆಬೈಲ್ ಮತ್ತು ಕಡಗೇರಿಯಲ್ಲಿ ತಲಾ ಎರಡು ನೂರರಂತೆ ನೀಡಲಾಗುತ್ತಿದೆ.

ಶಿರಸಿಯಲ್ಲಿ ಎಲ್ಲೆಲ್ಲಿ ?

ಬಿಸಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300, ಇಕ್ರಾ ಎಜುಕೇಶನ್ ಟ್ರಸ್ಟ್ ಮುಸ್ಲಿಂ ಗಲ್ಲಿಯಲ್ಲಿ 900, ಕೊಳಗಿಬೀಸ್ 500, ವಡ್ಡಳ್ಳಾ 350, ಅಂಡಗಿ 350, ಕುಳವೆ 500, ಮೇಲಿನ ಓಣಿಕೇರಿ 500, ದೇವನಳ್ಳಿ 700, ಎಸಳೆ 400, ರಾಮನಬೈಲಿನಲ್ಲಿ 500, ಕೆಎಂಎಫ್ ಅಗಸೇಬಾಗಿಲು 400, ಕಾಯಿಗುಡ್ಡೆಯಲ್ಲಿ 300, ಬೈರುಂಭೆಯಲ್ಲಿ 600, ತಿಗಣಿ 300, ಮಧುರವಳ್ಳಿಯಲ್ಲಿ 300 ಡೋಸ್ ಲಸಿಕೆ ಲಭ್ಯವಿದೆ.

ಅಂಕೋಲಾದಲ್ಲಿ ಎಲ್ಲೆಲ್ಲಿ?

ಅಂಕೋಲಾ ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ ಒಟ್ಟೂ 2500 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.
ರಾಮನಗಳಿ (250), ಬೃಹ್ಮೂರು (450),ಕಸಭಾ ಕೇಣಿ (300) ಹಾರವಾಡ (430) ವಾಡಿಬೊಗ್ರಿ (350), ಶಿರೂರು (220), ಅಗಸೂರು (200), ವ್ಯಾಪ್ತಿಯಲ್ಲಿ ಗುರುವಾರ ಲಸಿಕಾಕರಣ ನಡೆಯಲಿದೆ. ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ,ದ್ವಿತೀಯ ಡೋಸ್ ಗಳ ಹೊರತಾಗಿ ವಿಕಲಚೇತನರರು , ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಇಡಲಾಗಿದೆ.

RELATED ARTICLES  ಎಪ್ರಿಲ್ 12ಕ್ಕೆ ಮತ್ತೆ ಕರ್ನಾಟಕ ಬಂದ್ ಆಗುತ್ತಾ? ಬಂದ್! ಬಂದ್!

ಜಿಲ್ಲೆಯ ಎಲ್ಲೆಲ್ಲಿ ಎಷ್ಟು ಡೋಸ್ ಲಸಿಕೆ?

ಅಂಕೋಲಾದಲ್ಲಿ 2,500, ಭಟ್ಕಳ 4 ಸಾವಿರ, ಹಳಿಯಾಳ 2 ಸಾವಿರ, ಹೊನ್ನಾವರ 5,600, ಜೋಯ್ದಾ 2 ಸಾವಿರ, ಕಾರವಾರ 1,200, ಮುಂಡಗೋಡ 4 ಸಾವಿರ, ಕುಮಟಾ 5,600, ಶಿರಸಿ 7 ಸಾವಿರ, ಸಿದ್ದಾಪುರ 3,500, ಯಲ್ಲಾಪುರ 2,500, ದಾಂಡೇಲಿ 1,400, ನೇವಿ 300 ಮತ್ತು ಜಿಲ್ಲಾಸ್ಪತ್ರೆಯಲ್ಲಿ 600 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ, ಆಶಾ ಕಾರ್ಯಕರ್ತೆಯರು, ತಾಲೂಕಾ ಆರೋಗ್ಯ ಸಿಬ್ಬಂದಿಗಳಿoದ ಮಾಹಿತಿ ಪಡೆದು , ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕಿದೆ. ಲಸಿಕೆ ಪಡೆಯುವಲ್ಲಿ ಸುಖಾಸುಮ್ಮನೆ ಗೊಂದಲ ಸೃಷ್ಟಿಸುವುದು ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡಿದೆ ಕೊರೋನಾ ನಿಯಮಗಳನ್ನು ಮೀರುವಂತಹ ಕಾರ್ಯ ಮಾಡಬಾರದೆಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳು ಜನರಲ್ಲಿ ವಿನಂತಿ ಮಾಡಿದ್ದಾರೆ.