ಅಂಕೋಲಾ: ಮೀನು ತುಂಬಿದ ಕಂಟೇನರ್ ಲಾರಿ ಹಾಗೂ ಸಾರಿಗೆ ಸಂಸ್ಥೆ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ತಾಲೂಕಿನ ಎಪಿಎಂಸಿ ಮೈದಾನದ ಪಕ್ಕದ ಪೆಟ್ರೋಲ್ ಪಂಪ್ ಎದುರು ನಡೆದಿದೆ. ಈ ಘಟನೆಯಲ್ಲಿ ಮೀನು ತುಂಬಿದ ಲಾರಿ ಪಲ್ಟಿಯಾಗಿ ಮೀನು ಚೆಲ್ಲಾಪಿಲ್ಲಿಯಾಗಿದೆ.

ಕೇರಳದಿಂದ ಗೋವಾಕ್ಕೆ ಮೀನು ಸಾಗಿಸುತ್ತಿದ್ದ ಬೃಹತ್ತ ಗಾತ್ರದ ಕಂಟೇನರ್ ಲಾರಿಯನ್ನು ಚಾಲಕ ಅಂಕೋಲಾದಿoದ ಕಾರವಾರ ಮಾರ್ಗವಾಗಿ ಹೋಗುತ್ತಿದ್ದ ವೇಳೆ, ಹುಬ್ಬಳ್ಳಿ ಕಾರವಾರ ಬಸ್ ನಡುವೆ ಡಿಕ್ಕಿ ಸಂಭವಿಸಿದೆ ಎಂದು ವರದಿಯಾಗಿದೆ. ಬಸ್ ಅಂಕೋಲಾ ಬಸ್ ನಿಲ್ದಾಣ ಮಾರ್ಗವಾಗಿ ತೆರಳುವ ವೇಳೆ, ಎಡಬದಿಯ ದ್ವಿಪತ ರಸ್ತೆಯಲ್ಲಿ ಚಲಿಸದೇ,ವಿರುದ್ಧ ದಿಕ್ಕಿನಲ್ಲಿ ಚಲಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ‌ ಎಂದು ಸ್ಥಳೀಯರು ಸತ್ವಾಧಾರ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

RELATED ARTICLES  ಟಿ.ಎಸ್.ಎಸ್ ಸಂಯೋಜನೆಯಲ್ಲಿ ಯಶಸ್ವಿಯಾಯ್ತು ಅಟೋ ಎಕ್ಸ್‍ಪೋ-2018 ಮತ್ತು ಫುಡ್‍ ಎಕ್ಸಪ್ರೆಸ್: ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ

ಅಪಘಾತವನ್ನು ತಪ್ಪಿಸಲು ಲಾರಿ ಚಾಲಕ ಪ್ರಯತ್ನಪಟ್ಟಿದ್ದು ಕೊನೆಗೂ ಗಾಡಿ ನಿಯಂತ್ರಣಕ್ಕೆ ಬರದೇ ಹೆದ್ದಾರಿ ಅಂಚಿನ ಇಳಿಜಾರಿನಲ್ಲಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಲಾರಿ ನಜ್ಜುಗುಜ್ಜಾಗಿದ್ದು, ಲಕ್ಷಾಂತರ ರೂ ಮೌಲ್ಯದ ಮೀನು ಚೆಲ್ಲಾಪಿಲ್ಲಿ ಆಗಿದೆ. ಅಂಕೋಲಾದಲ್ಲಿ ಬುಧವಾರ ನಡೆದ ಈ ರಸ್ತೆ ಅಪಘಾತಕ್ಕೆ ರಾಂಗ್ ರೂಟ್ ನಲ್ಲಿ ಬಂದ ಬಸ್ ಡ್ರೈವರನ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ.

ಇದೇ ವೇಳೆ ಹೆದ್ದಾರಿ ಅಂಚಿಗೆ ನಿಲ್ಲಿಸಿಟ್ವ ಬೈಕೊಂದು ಲಾರಿ ಅಡಿ ಸಿಲುಕಿ ಜಖಂಗೊಂಡಿದೆ.ಕಂಟೈನರ್ ಲಾರಿಯ ಒಂದು ಭಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಲಾರಿಯಲ್ಲಿ ಸಿಲುಕಿಕೊಂಡಿದ್ದ ಚಾಲಕನ ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.

RELATED ARTICLES  ಅಂತರಾಷ್ಟ್ರೀಯ ಸ್ಕೂಬಾ ಉತ್ಸವಕ್ಕೆ ಚಾಲನೆ ;ಸ್ಕೂಬಾ ಡೈವಿಂಗ್ ಮಾಡಿದ ಸಚಿವರು!

ಗಂಭೀರ ಗಾಯಗೊಂಡ ಲಾರಿ ಚಾಲಕನನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿಲಾಗಿದೆ. ಬಸ್ ಚಾಲಕನಿಗೂ ಗಾಯಗಳಾಗಿದೆ. ಕೆಲ ಪ್ರಯಾಣಿಕರಿಗೂ ಚಿಕ್ಕ ಪುಟ್ಟ ಗಾಯಗಳಿಗಿದೆ ಎನ್ನಲಾಗಿದೆ. ಐಆರ್ ಬಿ, 112 ಈ ಆರ್ ಎಸ್ ಎಸ್ ವಾಹನದ ಸಿಬ್ಬಂದಿಗಳು ಹೆದ್ದಾರಿ ವ್ಯವಸ್ಥೆ ಸುಗಮ ಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.