ಹೊನ್ನಾವರ: ಬೆಳಗಿನ ಜಾವದಲ್ಲಿ ಐಶಾರಾಮಿ ಕಾರಿನಲ್ಲಿ ಬಂದು ರಸ್ತೆ ಪಕ್ಕ ಮಲಗಿದ್ದ ಗೋವುಗಳನ್ನು ಕದ್ದ ಪ್ರಕರಣ ಕೆಲವು ದಿನಗಳ ಹಿಂದೆ ಗುಣವಂತೆ ಮಂಕಿ ಭಾಗದಲ್ಲಿ ನಡೆದಿದ್ದು ಇದೀಗ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೊನ್ನಾವರ ತಾಲೂಕಿನ ಮಂಕಿ ಮಾವಿನಕಟ್ಟಾ ಮತ್ತು ಗುಣವಂತೆ ಭಾಗದಲ್ಲಿ ಕಾರಿನಲ್ಲಿ ಗೋವುಗಳನ್ನು ತುಂಬಿಕೊoಡು ಹೋಗುತ್ತಿರುವ ದೃಶ್ಯ ಸಿ ಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು.

ಸಿಸಿಟಿವಿಯಲ್ಲಿ ದೊರೆತ ಮಾಹಿತಿ ಆಧರಿಸಿ, ಎರಡನೇ ದಿನದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರ ಬಗ್ಗೆ .ಎಚ್ಚುಗೆ ವ್ಯಕ್ರವಾಗಿದೆ. 10 ಜನ ಆರೋಪಿಗಳಲ್ಲಿ 7 ಜನರನ್ನು ಬಂಧಿಸಿದ್ದು, ಇನ್ನು ಮೂವರಿಗೆ ಹುಡುಕಾಟ ನಡೆದಿದೆ. ಆರೋಪಿಗಳು ಕಳತನಕ್ಕೆ ಬಳಸುತಿದ್ದ ಎರಡು ವಾಹನ ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಲಾಗಿದೆ.

RELATED ARTICLES  ಉತ್ತರಕನ್ನಡದ ಹೆಮ್ಮೆ ವಿಮಲಾನಂದ ನಾಯಕ

ವಾಜೀದ ಜಾಪರ ವಾಟಿ, ಮೂಲಾರ, ಎಸ್.ಎಸ್ ನರ್ಸರಿರಸ್ತೆ, ಕಾನೂ, ಉಡುಪಿ ಜಿಲ್ಲೆ,ಸಯ್ಯದ್ ಮುಸ್ಸಾ ಸಯ್ಯದ್ ಅಹಮ್ಮದ, ಹನಿಫಾಬಾದ, ತಲಹಾ ಕಾಲೋನಿ, ಹೆಬಳೆ, ಭಟ್ಕಳ, ದೃಶ್ಯ ದಿನೇಶ ಮೆಂಡನ್, ಕಟಪಾಡಿ, ಉಡುಪಿ,ವಣವ ತಂದೆ ರಾಜಶೇಖರ ಶೆಟ್ಟಿ, ಕೆರನಕಾರಪಾಡಿ, ಉಡುಪಿ,ಮಹಮ್ಮದ ಫಯಾಜ್ ಮಹಮ್ಮದ್. ಮನ್ಸೂಮ್ ಕಾಲೋನಿ, ಭಟ್ಕಳ, ಮಹಮ್ಮದ ಇಬ್ರಾಹಿಂ ಮಹಮ್ಮದ .ಹುಸೇನ ಹವಾ, ಸಿದ್ದಿಕ್ ಸ್ಟ್ರೀಟ್ ಭಟ್ಕಳ, ನರತಂದೆ ಜಾಯಿರಿ ಹುಸೇನ, ಉಡುಪಿ ಇವರನ್ನು ಬಂಧಿಸಲಾಗಿದೆ.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ನರೇಂದ್ರ ದೇಸಾಯಿಯವರಿಂದ ನೋಟ್‌ಬುಕ್ ವಿತರಣೆ

ಅಜುರುದ್ದಿನ ತಂದೆ ಜಪ್ತಾಲ ಖಾದರ್‌, ಕಾಪು, ಉಡುಪಿ,ಆಶಿಕ ಸಂಶುದ್ದಿನ ಮಲ್ಲರ್, ಕಾಪು, ಉಡುಪಿ.ನೂರಿನ ಗೈಮಾ, ನವಾಯಕೇರಿ, ಮಾವಳ್ಳಿ-1, ಮುರ್ಡೆಶ್ವರ, ಭಟ್ಕಳ ಇಬರುಗಳು ನಾಪತ್ತೆಯಾಗಿದ್ದು ಅವರುಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.