ಕುಮಟಾ : ತಾಲೂಕಿನ ಸನ್ಮಾನ ಲಾಡ್ಜ್ ಎದುರಿನಲ್ಲಿ ನಿಲ್ಲಿಸಿಟ್ಟಿದ್ದ ಪ್ರವಾಸಿಗರೊಬ್ಬರ ದುಬಾರಿ ಬೈಕ್ ಬೆಳಗಾಗುವುದರೊಳಗೆ ಮಾಯವಾಗಿತ್ತು ಈ ಬಗ್ಗೆ ಪ್ರವಾಸಿಗ ಬೈಕ್ ಗುರುತು ತಿಳಿಸಿದವರಿಗೆ ಬಹುಮಾನ ನೀಡುವುದಾಗಿಯೂ ಹೇಳಿದ್ದರು, ಅದಲ್ಲದೆ ಪ್ರಕರಣ ಕೂಡಾ ದಾಖಲಾಗಿತ್ತು. ಇದೀಗ ಕುಮಟಾ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳತನ ಮಾಡಿದ ಆರೋಪಿಯನ್ನು ಕಾರವಾರ ಶಿರವಾಡದ ಆನಂದ (19 ವರ್ಷ) ಎಂದು ತಿಳಿದುಬಂದಿದೆ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು.

RELATED ARTICLES  ಶಿರಸಿಯಲ್ಲಿ ಅರ್ಥಪೂರ್ಣವಾಗಿ ಆಚರಣೆಗೊಂಡಿತು ಬಂಗಾರಪ್ಪನವರ ಜನ್ಮದಿನ

ಬೆಂಗಳೂರಿನಿಂದ ಪ್ರವಾಸಕ್ಕೆ ಹೊರಟ ಯುವಕರ ತಂಡ ಬೈಕ್ ನಲ್ಲಿ ಕೇರಳವನ್ನೆಲ್ಲಾ ಸುತ್ತಾಡಿ ಗೋಕರ್ಣಕ್ಕೆ ತೆರಳುವ ಉದ್ದೇಶದೊಂದಿಗೆ ಕುಮಟಾಕ್ಕೆ ಆಗಮಿಸಿ, ಇಲ್ಲಿನ ಲಾಡ್ಜ್ ನಲ್ಲಿ ತಂಗಿದ್ದರು. ಆದರೆ ರಾತ್ರಿರೋತ್ರಿ ತಾಲೂಕಿನ ಲಾಡ್ಜ್ ನಿಲ್ಲಿಸಿದ್ದ ಈ ದುಬಾರಿ ಬೈಕ್‌ ಕಳ್ಳತನವಾಗಿತ್ತು. ಕಳ್ಳತನವಾದ ನಂತರ ಸೂಕ್ಷ್ಮವಾಗಿ ಘಟನೆಗಳನ್ನು ಗಮನಿಸಿದ ಪೊಲೀಸರು ಇವರನ್ನು ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ.

RELATED ARTICLES  ಈಜಲು ಹೋದ 16 ರ ಹುಡುಗ ಉಸಿರು ಚೆಲ್ಲಿದ : ಕಾರವಾರದಲ್ಲಿ ದುರ್ಘಟನೆ.

ಈ ಕಳ್ಳತನ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಕುಮಟಾ ಠಾಣೆಯ ಪಿ.ಎಸ್.ಐ ರವರುಗಳಾದ ಆನಂದಮೂರ್ತಿ, ರವಿ ಗುಡ್ಡಿ, ಚಂದ್ರಮತಿ ಪಟಗಾರ ಹಾಗೂ ಸಿಬ್ಬಂದಿಯವರಾದ ಸಿಹೆಚ್‌ಸಿ-
ದಯಾನಂದ ನಾಯ್ಕ, ಸಿಹೆಚ್‌ಸಿ ಗಣೇಶ ನಾಯ್ಕ, ಸಿಪಿಸಿ- ಸಂತೋಷ ಬಾಳೇರ, ಸಿಪಿಸಿ- ಕೃಷ್ಣ ಎನ್, ಜೆ, ಸಿಪಿಸಿ- ಬಸವರಾಜ ಜಾಡರ, ಮಾರುತಿ ಗಾಳಪೂಜಿ, ಇವರುಗಳ ತಂಡ ಪ್ರಮುಖ ಪಾತ್ರ ವಹಿಸಿದೆ.