ಮಟ್ಕಾ ಆಡಿಸುತ್ತಿದ್ದ ಆರೋಪಿ ಅರೆಸ್ಟ್

ಶಿರಸಿ : ತಾಲೂಕಿನ ಎಕ್ಕಂಬಿ ಬಸ್ ನಿಲ್ದಾಣದ ಎದುರುಗಡೆ ಸಾರ್ವಜನಿಕರಿಗೆ ಹಣದ ಆಮಿಷ ತೋರಿಸಿ ಮಟ್ಕಾ ಆಡಿಸುತ್ತಿದ್ದ ಆರೋಪಿಯನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ಬುಧವಾರ ಸಂಜೆ ನಡೆದಿದೆ. ಶಿರಸಿ ತಾಲೂಕಿನ ಇಸಳೂರು ಸಣ್ಣಕೇರಿಯ ಹರೀಶ ಕೇಶವ ನಾಯ್ಕ(34) ಪೊಲೀಸರಿಂದ ವಶಕ್ಕೊಳಗಾದ ಆರೋಪಿಯಾಗಿದ್ದಾನೆ. ಈತನು ಶಿರಸಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಎಕ್ಕಂಬಿ ಬಸ್ ನಿಲ್ದಾಣದ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ನಿಂತು ಅಲ್ಲಿ ಬಂದು ಹೋಗುವ ಸಾರ್ವಜನಿಕರನ್ನು ಕೂಗಿ ಕರೆದು ಓ.ಸಿ ಮಟಕಾ ಜೂಗಾರಾಟದ ಅಂಕೆಗಳ ಮೇಲೆ ಹಣ ಪಂಥ‌ ಕಟ್ಟಿದರೆ 01 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಬಂದ ಜನರಿಂದ ಹಣ ಪಡೆದುಕೊಂಡು ಓ.ಸಿ ಚೀಟಿ ಬರೆದು ಕೊಡುವಾಗ ದಾಳಿ ನಡೆಸಿದ ಪಿಎಸ್‌ಐ ಶ್ಯಾಮ್ ವಿ.ಪಾವಸ್ಕರ್ ಅವರ ತಂಡ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಓ.ಸಿ ಮಟಕಾ ಜೂಗಾರಾಟದ ಸಲಕರಣೆಗಳು ಹಾಗೂ ನಗದು ಹಣ 1,835 ರೂಪಾಯಿಗಳನ್ನು ವಶಕ್ಕೆ ಪಡೆದಿದ್ದಾರೆ. ಶಿರಸಿ
ಗ್ರಾಮೀಣ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ಯೂರಿಯಾ ಹಾಕಿ ಆಕಳು ಕರು ಸಾಯಿಸಿದರು?

ಉದ್ದೇಶಪೂರ್ವಕವಾಗಿ ಆಹಾರದ ಜೊತೆ ಯೂರಿಯಾ ಗೊಬ್ಬರವನ್ನು ಬೆರೆಸಿಟ್ಟು ಆಕಳು ಹಾಗೂ ಕರುವಿನ ಸಾವಿಗೆ ಕಾರಣರಾಗಿರುವ ಆರೋಪಿಯ ಮೇಲೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿರಸಿ ತಾಲೂಕಿನ ಅರಸಾಪುರ ಬೆಳಲೆಯ ಸುರೇಶ ಮುಪ್ಪನ್ನ ಚಲುವಾದಿ(55) ಎನ್ನುವವರು ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಬುಧವಾರ ಸಂಜೆ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಇದೇ ಗ್ರಾಮದ ಭಾಸ್ಕರ ವೆಂಕಟರಮಣ ಹೆಗಡೆ(61) ಎನ್ನುವವರು ಬೆಟ್ಟದಲ್ಲಿರುವ ಮಾವಿನ ಮತ್ತು ಹೊನ್ನೆ ಗಿಡದ ಸುತ್ತಲು ಬುಡಕ್ಕೆ ಜಾನುವಾರುಗಳು ತಿನ್ನುವ ಹಿಂಡಿಯ ಜೊತೆಗೆ ಯೂರಿಯಾ ಗೊಬ್ಬರವನ್ನು ಮಿಶ್ರಣ ಮಾಡಿ ಹಾಕಿದ್ದಾರೆ. ಅದನ್ನು ಪ್ರಾಣಿಗಳು ತಿಂದು ಸಾಯುತ್ತವೆ ಎಂದು ಗೊತ್ತಿದ್ದೂ ಸಹ, ಗೊಬ್ಬರವನ್ನು ಗಿಡದ ಬುಡಕ್ಕೆ ಹಾಕಿ ಮಣ್ಣುಮುಚ್ಚದೇ ಉದ್ದೇಶಪೂರ್ವಕವಾಗಿ ಗಿಡದ ಬುಡಕ್ಕೆ ಮೇಲ್ಗಡೆ ಹಾಕಿದ್ದರಿಂದ ಆಗಸ್ಟ್ 24 ರಂದು ತಾನು ಮೇಯಲು ಬಿಟ್ಟು ತಮ್ಮ ಆಕಳು ಮತ್ತು ಆಕಳ ಕರು ಹಿಂಡಿಯನ್ನು ತಿನ್ನುವ ಭರದಲ್ಲಿ ಹಿಂಡಿಯ ಜೊತೆಗೆ ಮಿಶ್ರಣವಾಗಿದ್ದ ಯೂರಿಯಾ ಗೊಬ್ಬರವನ್ನು ತಿಂದು ಅಸ್ವಸ್ಥಗೊಂಡು ಮೃತಪಟ್ಟಿವೆ. ಆದ್ದರಿಂದ ಆರೋಪಿತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES  ಪೇಟೆಗೆ ಲಗ್ಗೆ ಇಟ್ಟಿದೆ ತರಹೇವಾರಿ ಹಣತೆ, ದೀಪಗಳ ಹಬ್ಬಕ್ಕೆ ಸಿದ್ಧವಾಗುತ್ತಿದ್ದಾರೆ ಜನರು

ರಾಮಾನಂದರಿಗೆ ಶ್ರದ್ಧಾಂಜಲಿ.

ಅವಧೂತ ಪರಂಪರೆಯ ಕೊಂಡಿಯಾಗಿದ್ದ ದಿವಗಿ ಶ್ರೀರಾಮಾನಂದ ಸ್ವಾಮೀಜಿಗಳ ಅಗಲುವಿಕೆಗೆ ಅವರು ದೀಕ್ಷೆ ಪಡೆದ ಸ್ಥಳವಾದ ಶಿರಸಿ ತಾಲೂಕಿನ ಕೊಳಗಿಬೀಸನಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು. ಶ್ರೀ ಸಹಜಾನಂದ ಅವಧೂತರ ಆರಾಧನೆ ದಿನದಂದೇ ರಾಮಾನಂದರಿಗೂ ಅವರ ಭಾವ
ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಲಾಯಿತು. ನಡೆದಾಡುವ ಮಾರುತಿ ಎಂದೇ ಹೆಸರಾಗಿದ್ದ ರಾಮಾನಂದರ ಅಗಲಿಕೆಗೆ ಪಾಲ್ಗೊಂಡ ಆಸ್ತಿಕ ಭಕ್ತರು ಕಂಬನಿ ಮಿಡಿದರು. ಈ ವೇಳೆ ಕರೂರು ಸೀಮಾ ಅಧ್ಯಕ್ಷ ಉಮಾಪತಿ ಭಟ್ಟ ಮತ್ತಿಗಾರ, ದೇವಸ್ಥಾನದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ, ವಿ. ಆರ್‌. ಭಟ್ಟ ಟೊಣ್ಣೆಮನೆ, ಎಂ. ಆರ್. ಹೆಗಡೆಪಟ್ಟಿಗುಂಡಿ, ದೇವಸ್ಥಾನದ ಅರ್ಚಕ ಕುಮಾರ ಭಟ್ಟ ಸೇರಿದಂತೆ ಹಲವರು ಇದ್ದರು.

RELATED ARTICLES  NEET ಪರಿಕ್ಷಾರ್ಥಿಗಳಿಗೆ ಅಂತಿಮಹ ಹಂತದ ಮಹತ್ವದ ಉಚಿತ ತರಬೇತಿ.

ಬೀದಿ ನಾಯಿ ತಪ್ಪಿಸಲು ಹೋಗಿ ಆಟೋ ಪಲ್ಟಿ.

ಕಾರವಾರ: ರಸ್ತೆಯಲ್ಲಿದ್ದ ಬೀದಿ ನಾಯಿ ತಪ್ಪಿಸುವ ವೇಳೆ
ಆಟೋ ಪಲ್ಟಿಯಾಗಿದ್ದು, ಘಟನೆ ಇಲ್ಲಿನ ಹಬ್ಬುವಾಡದಲ್ಲಿರುವ ಭಾರತ ಗ್ಯಾಸ್ ಎದುರು ನಡೆದಿದೆ.ಈ ಅಪಘಾತದಲ್ಲಿ ಆಟೋದ ಅಡಿಗೆ ಸಿಲುಕಿದ ನಾಯಿ ಮೃತಪಟ್ಟಿದೆ. ಇದೇ ವೇಳೆ, ಆಟೋ ಚಾಲಕ ಕೆರವಡಿ ಕಡಿಯಾದ ಕಾಮತ ಎನ್ನುವವರು ತೀವ್ರ ಗಾಯಗೊಂಡಿದ್ದಾರೆ. ಪಲ್ಟಿಯಾದ ರಭಸಕ್ಕೆ ಆಟೋ ಗೂಹಾನಿಯಾಗಿದೆ. ಅಪಘಾತದ ದೃಶ್ಯಭಾರತ ಗ್ಯಾಸ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.