ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ನಾಳೆ 20,200 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂಕೋಲಾ 1,500, ಭಟ್ಕಳ 1,500, ಹಳಿಯಾಳ ,1500, ಹೊನ್ನಾವರ 2,000 , ಜೋಯ್ಡಾದಲ್ಲಿ 1 ಸಾವಿರ ಲಸಿಕೆ ಲಭ್ಯವಿದೆ. ಕಾರವಾರ 1,500, ಕುಮಟಾ 2 ಸಾವಿರ, ಶಿರಸಿ 2,700, ಸಿದ್ದಾಪುರ 2,500, ದಾಂಡೇಲಿ 500, ಜಿಲ್ಲಾಸ್ಪತ್ರೆಯಲ್ಲಿ 500 ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ.

RELATED ARTICLES  ತೊಡೆಯಲ್ಲಿ ವಿಪರೀತ ನೋವು ಇದ್ದರೂ ಲೆಕ್ಕಿಸದೆ ಚಿನ್ನ ಗೆದ್ದು ಸಂಭ್ರಮಿಸಿದ ಭಾರತದ ಸತೀಶ್‌ ಕುಮಾರ್ ಶಿವಲಿಂಗಂ.!

ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕೆಂದು ಕೋರಲಾಗಿದೆ. ಅಲ್ಲದೆ, ತಮ್ಮ ತಮ್ಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯಕೇಂದ್ರವನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ನಾಳೆ ಹೊನ್ನಾವರದಲ್ಲಿ ಎಲ್ಲಿ?

ನಾಳೆ ಹೊನ್ನಾವರ ತಾಲೂಕಿನ ನವಿಲಗೋಣ, ಬಳ್ಕೂರು, ಕಾಸರಕೋಡ, ಚಿತ್ತಾರ, ಹೊಸಹಿತ್ತಲ, ಬೈಲಗದ್ದೆ ಗೇರುಸೊಪ್ಪ ದಲ್ಲಿ ಲಸಿಕೆ‌ ಲಭ್ಯವಿದೆ ಎಂದು ಮಾಹಿತಿ ಲಭ್ಯವಾಗಿದೆ.

RELATED ARTICLES  ಚುನಾವಣೆಗಾಗಿ ಬಿಜೆಪಿ ಶುರು ಮಾಡಿತು ಮಾಸ್ಟ್ರರ್ ಪ್ಲ್ಯಾನ್!

ಇಂದಿನ ಪಾಸಿಟಿವಿಟಿ ರೇಟ್…!

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಶೇ.0.75 ರಷ್ಟು ಕೊರೊನಾ ಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಕಳೆದ ಎರಡು ದಿನದ ವರದಿ ಗಮನಿಸಿದಾಗ ಬುಧವಾರ ಶೇ.0.85 ಹಾಗೂ ಮಂಗಳವಾರ ಶೇ. 0.81ರಷ್ಟು ಪಾಸಿಟಿವಿಟಿ ದಾಖಲಾಗಿತ್ತು.