ಸಿದ್ದಾಪುರ: ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಎಲ್ಲೆಡೆ ಕೋಲಾಹಲ ಎಬ್ಬಿಸಿರುವ ಸಂದರ್ಭದಲ್ಲಿಯೇ ಇದೀಗ ಉತ್ತರ ಕನ್ನಡದ ಸಿದ್ದಾಪುರದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣವೊಂದರ ಸುದ್ದಿ ಉತ್ತರ ಕನ್ನಡಿಗರನ್ನು ಬೆಚ್ಚಿಬೀಳುವಂತೆ ಮಾಡಿದೆ.

ಸೋದರ ಮಾವನಿಂದಲೇ 11 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಸಿದ್ದಾಪುರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ.

RELATED ARTICLES  ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿ ನಿಂತರೂ ಗೆಲ್ಲುತ್ತೇನೆ: ಸಿದ್ದರಾಮಯ್ಯ

ಅಪ್ರಾಪ್ತ ಬಾಲಿಕಿಯೋರ್ವಳನ್ನು ಅತ್ಯಾಚಾರ ಮಾಡಿರುವ ಬಗ್ಗೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ. 27 ವರ್ಷದ ಹೆಗ್ಗೆಕೊಪ್ಪದ ಕಮಲಾಕರ ಎಂಬ ಯುವಕನನ್ನು ಈ ಸಂಬಂಧ ಬಂಧಿಸಿರುವುದಾಗಿ ತಿಳಿದುಬಂದಿದೆ. ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ ಎಂದು ಸ್ಥಳೀಯವಾಗಿ ವರದಿ ಲಭ್ಯವಾಗಿದೆ.

RELATED ARTICLES  ಮಂಗಳೂರಿನಲ್ಲಿ ಮೋದಿ ಹವಾ : ಪ್ರಧಾನಿಯವರ ಭಾಷಣದ ಮುಖ್ಯಾಂಶಗಳೇನು ಗೊತ್ತಾ?

ಷೋಷಿತ ಬಾಲಕಿಯನ್ನು ಇದೀಗ ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿದೆ. ನಡೆದಿರುವ ಘಟನೆ ಏನು ಈ ಪ್ರಕರಣ ನಡೆದಿರುವ ಸತ್ಯಾಸತ್ಯತೆ ಹಾಗೂ ಇತರ ಮಾಹಿತಿಗಳು ಪೊಲೀಸ್ ತನಿಖೆಯ ನಂತರ ತಿಳಿದು ಬರಬೇಕಿದೆ.