ಉತ್ತರ ಕನ್ನಡದ ಪ್ರಮುಖ ತಾಲೂಕುಗಳಲ್ಲಿ ನಾಳೆ ಎಲ್ಲೆಲ್ಲಿ ಲಸಿಕಾಕರಣ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಅಂಕೋಲಾದಲ್ಲಿ ಎಲ್ಲಿ?

ಅಂಕೋಲಾ ಅ 26: ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ ಅಗಸ್ಟ್ 27 ರ ಶುಕ್ರವಾರ ಒಟ್ಟೂ 1500 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಮೊಗಟಾದ ಗ್ರಾಮ ಪಂಚಾಯತ್ ಸಭಾಭವನ (270) ಬೋಳೆ ಹೊಸಗದ್ದೆಯ ಕಿ.ಪ್ರಾ.ಶಾಲೆ (340), ಅವರ್ಸಾದ ಗ್ರಾಪಂ (260), ಸುಂಕಸಾಳ (120), ರಾಮನಗುಳಿಯ ಪ್ರಾ.ಆ.ಕೇಂದ್ರ (150), ಉಪಕೇಂದ್ರ ನದಿಭಾಗ (360), ಲಸಿಕಾಕರಣ ನಡೆಯಲಿದೆ.

ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ,ದ್ವಿತೀಯ ಡೋಸ್ ಗಳ ಹೊರತಾಗಿ ವಿಕಲಚೇತನರರು , ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಕಾಯ್ದಿರಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ .

RELATED ARTICLES  ರೋಟರಾಕ್ಟ್ ಅಂತರ್ ಜಿಲ್ಲಾ ಡೆಕ್ಸ್ಟೆರಿಯಸ್ ಲೀಗ್' ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಾಧನೆ.

ಹೊನ್ನಾವರ ತಾಲೂಕಿನಲ್ಲಿ ನಾಳೆ ಎಲ್ಲೆಲ್ಲಿ?

ಹೊನ್ನಾವರ ತಾಲೂಕಿನಲ್ಲಿ ನಾಳೆ ಒಟ್ಟು 2,250 ಕೋವಿಶೀಲ್ಡ್ ವಿತರಿಸಲಾಗುವುದು. ತಾಲೂಕಿನ ಕಡತೋಕಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನವಿಲಗೋಣ ಭಾಗದಲ್ಲಿ, ಬಳ್ಕೂರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಾಸರಕೋಡ ಭಾಗದಲ್ಲಿ, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಚಿತ್ತಾರ ಮತ್ತು ಹೊಸಹಿತ್ಲ ಭಾಗದಲ್ಲಿ, ಗೇರುಸೋಪ್ಪಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ವ್ಯಾಕ್ಸಿನೇಷನ್ ನಡೆಯಲಿದೆ.

ಶಿರಸಿಯಲ್ಲಿ ಎಲ್ಲಿ?

ಶಿರಸಿ ತಾಲೂಕಿನಲ್ಲಿ ಶುಕ್ರವಾರ 5,700 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು, ಪ್ರಥಮ ಮತ್ತು ದ್ವತೀಯ ಡೋಸ್ ನವರು ಪಡೆದುಕೊಳ್ಳಬಹುದಾಗಿದೆ.

ನವಣಗೇರಿಯಲ್ಲಿ 250, ಬೆಂಗಳೆ 250, ಉಂಚಳ್ಳಿ 250, ಕಾನಗೋಡ 250, ಹೆಗಡೆಕಟ್ಟಾ 500, ಆಡಳ್ಳಿ 250, ಬೆಳೆನಳ್ಳಿ 250, ಹೀಪನಳ್ಳಿ 250, ಸಾಲ್ಕಣಿ 250, ಸೋಂದಾ 500, ವಡ್ಡಳ್ಳಾ 300, ರಾಮಾಪುರ 200, ಚಿಪಗಿ 500, ಟಿಎಸ್‍ಎಸ್ ಸೂಪರ್ ಮಾರ್ಕೇಟ್ ಹೆಲ್ತ್ ಸೆಂಟರ್ 650, ಯಲ್ಲಾಪುರ ರಸ್ತೆ ಬಿ.ಆರ್.ಅಂಬೇಡ್ಕರ ಭವನದಲ್ಲಿ 1050 ಡೋಸ್ ಲಸಿಕೆ ಲಭ್ಯವಿದೆ.

RELATED ARTICLES  ಉಜ್ವಲ ಯೋಜನೆಯಡಿ ಕೊಡ್ಕಣಿಯಲ್ಲಿ ದಿನಕರ ಶೆಟ್ಟಿಯವರಿಂದ ಗ್ಯಾಸ್ ವಿತರಣೆ : ಕೋಡ್ಕಣಿ ಜನತೆಯ ಜೊತೆ ಸದಾ ಇರುವುದಾಗಿ ಭರವಸೆ ನೀಡಿದ ಶಾಸಕರು.

ಇನ್ನುಳಿದಂತೆ ಭಟ್ಕಳ 1,500, ಹಳಿಯಾಳ ,1500, ಜೋಯ್ಡಾದಲ್ಲಿ 1 ಸಾವಿರ ಲಸಿಕೆ ಲಭ್ಯವಿದೆ. ಕಾರವಾರ 1,500, ಕುಮಟಾ 2 ಸಾವಿರ, ಸಿದ್ದಾಪುರ 2,500, ದಾಂಡೇಲಿ 500, ಜಿಲ್ಲಾಸ್ಪತ್ರೆಯಲ್ಲಿ 500 ಕೋವಿಶೀಲ್ಡ್ ವ್ಯಾಕ್ಸಿನ್ ಲಭ್ಯವಿದೆ.

ಸಾರ್ವಜನಿಕರು ಯಾವುದೇ ಗೊಂದಲ ಮಾಡಿಕೊಳ್ಳದೆ ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಪಡೆದುಕೊಳ್ಳಬೇಕೆಂದು ಕೋರಲಾಗಿದೆ. ಅಲ್ಲದೆ, ತಮ್ಮ ತಮ್ಮ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಮತ್ತು ಪ್ರಾಥಮಿಕ ಆರೋಗ್ಯಕೇಂದ್ರವನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ.