ಕುಮಟಾ: ಉಪನ್ಯಾಸಕಿ ಹಾಗೂ ಖ್ಯಾತ ಲೇಖಕಿಯಾಗಿರುವ ತಾಲೂಕಿನ ಹಿರೇಗುತ್ತಿಯ ದೀಪಾ ರಾಮಚಂದ್ರ ಹಿರೇಗುತ್ತಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಜಂಟಿಯಾಗಿ ನೀಡುವ ಪ್ರತಿಷ್ಠಿತ ಪ್ರಶಸ್ತಿ ಮಯೂರವರ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ 25 ಸಾವಿರ ರೂಪಾಯಿ ನಗದು ಬಹುಮಾನ ಮತ್ತು ಪಾರಿತೋಷಕವನ್ನು ಒಳಗೊಂಡಿದ್ದು, ಆ. 27 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.ಉತ್ತಮ ವಾಗ್ಮಿಯೂ ಆಗಿರುವ ದೀಪಾ ಹಿರೇಗುತ್ತಿ ಅವರು ಶಿಕ್ಷಕ ದಂಪತಿಯಾದ ರಾಮಚಂದ್ರ ನಾಯಕ ಮತ್ತು ಭಾಗೀರಥಿ ಅವರ ಮಗಳಾಗಿದ್ದಾರೆ. ಪ್ರಸ್ತುತ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

RELATED ARTICLES  ಕುಮಟಾದ ಬಾಡದಲ್ಲಿ ಬೈಕ್‌ ಅಪಘಾತ : ಸವಾರ ಸಾವು, ಹಿಂಬದಿ ಸವಾರ ಗಂಭೀರ..!

ಕಥೆ, ಕವನ, ಪತ್ರಿಕೆಗಳಿಗೆ ಅಂಕಣ ಬರಹಗಳನ್ನು ಬರೆಯುತ್ತಾ ಉಪನ್ಯಾಸಕ ವೃತ್ತಿಯ ಜೊತೆ ಪ್ರವೃತ್ತಿಯಾಗಿ ಅಕ್ಷರ ಕೃಷಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. 2015 ರಲ್ಲಿ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ರಾಜ್ಯೋತ್ಸವ ಪ್ರಶಸ್ತಿ, ನಾನು – ನೀವು ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಪ್ರಶಸ್ತಿ, ಬೇಂದ್ರೆ ಪ್ರತಿಷ್ಠಾನದ ಬೇಂದ್ರ ಪುಸ್ತಕ ಬಹುಮಾನವನ್ನು ಪಡೆದಿದ್ದಾರೆ.

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 79 ಮಂದಿಗೆ ಕರೊನಾ ಸೋಂಕು