ಅಂಕೋಲಾ: ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಹೊಸ ಹೊಸ ವಿಧಾನಗಳ ಮುಖಾಂತರ ಮೋಸ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಅಪರಿಚಿತರ ಕರೆಗೆ ಎಂದಿಗೂ ಮೋಸ ಹೋಗಬೇಡೆ ಎಂದು ಎಷ್ಟೇ ಸಂದೇಶ ನೀಡುತ್ತಿದ್ದರೂ ಸಹ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಲಿದ್ದು, ಆಂಥಹದೊದ್ದು ಘಟನೆ ತಾಲೂಕಿನಲ್ಲಿ ನಡೆದಿದೆ.
ಯುವಕನೊಬ್ಬ ಆಪರಿಚಿತ ವ್ಯಕ್ತಿಯ ಕರೆ ನಂಬಿ ಮೋಸ ಹೋಗಿದ್ದಾನೆ. 2500 ರೂಪಾಯಿಗೆ ಗುಣಮಟ್ಟದ ಮೊಬೈಲ್ ನೀಡುತ್ತೇವೆಂದು ವ್ಯಕ್ತಿಯೊಬ್ಬ ಕಾಲ್ ಮಾಡಿದ್ದು ಇದನ್ನು ನಂಬಿದ ಯುವಕ ಕಡಿಮೆ ದರಕ್ಕೆ ಉತ್ತಮ ಮೊಬೈಲ್ ಸಿಗುತ್ತದೆ ಎಂದು ಕಳುಹಿಸಿ ಎಂದಿದ್ದಾನೆ. ಅದರಂತೆ ಯುವಕನ ವಿಳಾಸಕ್ಕೆ ಪಾರ್ಸೆಲ್ ಬಂದಿದ್ದು, ಅದನ್ನು ಯುವಕ 2,500 ರೂಪಾಯಿ ಕೊಟ್ಟು ಬಿಡಿಸಿಕೊಂಡಿದ್ದಾನೆ.
ಆದರೆ, ಬಾಕ್ಸ್ ತಗೆದು ನೋಡಿದಾಗ ಶಾಕ್ ಕಾದಿತ್ತು. ಬಾಕ್ಸ್ ನಲ್ಲಿ ಮೊಬೈಲ್ ಇರಲಿಲ್ಲ. ಅದರ ಬದಲು ಹಾಳಾದ ಬಿಡಿಭಾಗ ಮತ್ತು ಗಣಪತಿ ಮಾಡುವ ಮಣ್ಣನ್ನು ತುಂಬಲಾಗಿತ್ತು. ಆಗಲೇ ಯುವಕನಿಗೆ ತಾನು ಮೋಸ ಹೋಗಿರುವುದು ತಿಳಿದಿದೆ. ಅದೇ ನಂಬರ್ ಗೆ ಕರೆ ಮಾಡಿದರೆ ವ್ಯಕ್ತಿ ಕರೆ ಸ್ವೀಕರಿಸಲಿಲ್ಲ. ಹೀಗಾಗಿ ಯುವಕ ಪೆÇಲೀಸರಿಗೆ ದೂರು ನೀಡಿದ್ದು, ಅಂಚೆಯಲ್ಲಿ ವಿಚಾರಿಸಿದಾಗ ತಮಿಳುನಾಡಿನ ಕಂಪನಿಗೆ ಹೆಸರಿಗೆ ಹಣ ಹೋಗಿದೆ ಎಂದಿದ್ದಾರೆ. ಸಾರ್ವಜನಿಕರು ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರ ವಹಿಸಬೇಕಿದೆ, ಅಲ್ಲದೆ ಇಲ್ಲದಿದ್ದರೆ ಮೋಸ ಹೋಗುವ ಪ್ರಕರಣ ಹೆಚ್ಚುತ್ತಲೇ ಇರುತ್ತದೆ.