ಕುಮಟಾ:ಜುಲೈ ತಿಂಗಳಲ್ಲಿ ಜರುಗಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಜನತಾ ವಿದ್ಯಾಲಯ ಮಿರ್ಜಾನ ಕೋಡ್ಕಣಿ ಪ್ರೌಢಶಾಲಾ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿ ಶಾಲೆಗೆ ಪ್ರಥಮ ಬಾರಿ ನೂರರಷ್ಟು ಫಲಿತಾಂಶ ಲಭ್ಯವಾಗಿದ್ದು ಕು . ಜ್ಯೋತಿ ಲಿಂಗಪ್ಪ ಪಟಗಾರ 625 ಕ್ಕೆ 615 ಅಂಕಗಳಿಸಿ ( 98.40 ) ಶಾಲೆಯ ಇತಿಹಾಸದಲ್ಲೇ ಗರಿಷ್ಠ ಅಂಕಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ , ಅಲ್ಲದೇ ಇಂಗ್ಲೀಷ್ , ಹಿಂದಿ ಮತ್ತು ಸಮಾಜ ವಿಜ್ಞಾನದಲ್ಲಿ ಶೇ .100 ಅಂಕ ಗಳಿಸಿದ್ದು ಈಕೆಯ ಗರಿಷ್ಠ ಸಾಧನೆಯಾಗಿದೆ . ಶಾಲೆಗೆ ಕೀರ್ತಿ ತಂದ ಇವಳನ್ನು ಶಾಲಾಭಿವೃದ್ಧಿಯ ಸಮಿತಿ ಅಧ್ಯಕ್ಷರಾದ ಶ್ರೀ ಗಜಾನನ ನಾಯ್ಕ , ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ವಿಷ್ಟೇಶ್ವರ ಗುನಗಾ , ಶಾಲಾ ಮುಖ್ಯಾಧ್ಯಾಪಕರಾದ ಶ್ರೀ ವಿ . ಪಿ . ಶ್ಯಾನಭಾಗ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಸನ್ಮಾನ ಮಾಡಿದರು .
ಶ್ರೀ ಗಜಾನನ ನಾಯ್ಕ ಇವರು ಮಾತನಾಡಿ ಇದೇ ರೀತಿ ಮುಂದೆಯೂ ಅವಳು ರಾಜ್ಯಕ್ಕೆ ಪ್ರಥಮ ರೆಂಕ್ ಪಡೆದು ನಮ್ಮ ಊರಿನ ಕೀರ್ತಿ ತರಬೇಕು ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು . ಶ್ರೀ ವಿಘ್ನಶ್ವರ ಗುನಗಾ ಹಾಗೂ ಶಾಲಾ ಮುಖ್ಯಾಧ್ಯಾಪಕರಾದ ಶ್ರೀ ವಿ . ಪಿ . ಶ್ಯಾನಭಾಗ ಅವರು ವಿದ್ಯಾರ್ಥಿನಿ ಸಾಧನೆಗೆ ಶ್ರಮಿಸಿದ ಕುರಿತು ಪ್ರಶಂಸಿದರು . ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಪಾಲಕರು ಸಂತಸ ವ್ಯಕ್ತಪಡಿಸಿ ಧನ್ಯವಾದ ತಿಳಿಸಿದರು .