ಶಿವಮೊಗ್ಗ : ಪಾಗಲ್ ಪ್ರೇಮಿಯೊಬ್ಬ ತನ್ನನ್ನು ಪ್ರೀತಿಸಲ್ಲ ಎಂದ ಕಾರಣಕ್ಕೆ ಯುವತಿಯನ್ನು ಕೊಲೆ ಮಾಡಿದ ಪ್ರಕರಣ ವರದಿಯಾಗಿದೆ. ಯುವತಿಯನ್ನು ವೇಲ್ ಬಿಗಿದು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶಿವಮೊಗ್ಗ ದಲ್ಲಿ ನಡೆದಿದೆ ಆದರೆ ಕೊಲೆಯಾದ ಯುವತಿ ಭಟ್ಕಳದವಳು ಎಂದು ವರದಿಯಾಗಿದೆ. ಶಿವಮೂರ್ತಿ ಎಂಬುವವನು ಕೊಲೆ ಮಾಡಿದವನೆಂಬ ಆರೋಪ ಕೇಳಿಬಂದಿದ್ದು, ಭಟ್ಕಳದ ಕವಿತಾ ಕೊಲೆಯಾದ ಯುವತಿಯಾಗಿದ್ದಾಳೆ.

ಲೈಫ್ ಕೇರ್ ನಲ್ಲಿ ನರ್ಸಿಂಗ್ ಓದುತಿದ್ದ ವಿದ್ಯಾರ್ಥಿನಿ ಕವಿತಾ ನಂಜಪ್ಪ ಎಂಬುವವಳನ್ನು ಈಗೆಯ ಸ್ನೇಹಿತ ಶಿವಮೂರ್ತಿ ತನ್ನೊಂದಿಗೆ ನೆರಲಿಗೆ ಕಳಸೆ ಗ್ರಾಮದ ಹೊಸಕೆರೆ ಬಳಿಯ ಕಾಡಿಗೆ ಕರೆದುಕೊಂಡು ಹೋಗಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಈಗೆ ಆತನ ಪ್ರೀತಿಯನ್ನು ಒಪ್ಪದಿದ್ದಕ್ಕೆ ಆಕೆಯ ವೇಲ್ ನನ್ನು ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ನಂತರ ತಾನೂ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಶಂಕಿಸಲಾಗಿದೆ.

RELATED ARTICLES  ಕಾರವಾರ: ಹಿಂದೂ ಯುವಕರನ್ನು ಟಾರ್ಗೆಟ್ ಮಾಡಿದರೆ ಹುಷಾರ್..!

ಈತ ತಾನೊಂದು ಡೆತ್​ನೋಟ್​ ಬರೆದಿದ್ದು, ಅದರಲ್ಲಿ ತಾನು ಭಟ್ಕಳ ಮೂಲದ ಯುವತಿಯನ್ನು ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದೆ, ಆಕೆಯೂ ಸಹ ತನ್ನನ್ನು ಪ್ರೀತಿಸುತ್ತಿದ್ದಳು. ಆದರೆ, ಕೆಲ ದಿನಗಳಿಂದ ಭದ್ರಾವತಿಯ ಆ್ಯಂಬುಲೆನ್ಸ್ ಡ್ರೈವರ್​ನನ್ನು ಪ್ರೀತಿಸಲು ಶುರು ಮಾಡಿದ್ದಳು.

ಇದರಿಂದ ಆಕೆಯನ್ನು ಕರೆದು ಯಾಕೆ ಬೇರೆಯವರನ್ನು ಪ್ರೀತಿಸುತ್ತಿಯಾ? ಎಂದು ಕೇಳಿದೆ. ಮುಂದೆ ನಡೆಯುವ ಘಟನೆಗೆ ಅವಳೇ ಕಾರಣ. ಎಂದಿಗೂ ಪ್ರೀತಿಯನ್ನು ನಂಬಬೇಡಿ ಸ್ನೇಹಿತರೆ ಎಂದು ಡೆತ್​ನೋಟ್​ ಬರೆದಿದ್ದಾನೆ. ತಾನು ತನ್ನ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದಾನೆ.

RELATED ARTICLES  ಒಮ್ಮೆ ಹಳೆಯ ನೆನಪು ಮಾಡಿತ್ತೇ ಇಂದಿನ ಬರ್ಗಿ ಟ್ಯಾಂಕರ್ ಪಲ್ಟಿ?

ಈಕೆಯ ಶವವು ನಿನ್ನೆ ದಿನ ಹೊಸಕೆರೆಯಲ್ಲಿ ಪತ್ತೆಯಾಗಿತ್ತು. ಪೋಷಕರು ತುಂಗಾನಗರ ಠಾಣೆಯಲ್ಲಿ ಕಾಣೆಯಾದ ಕುರಿತು ದೂರು ನೀಡಿದ್ದರು. ಪ್ರೀತಿಯೇ ಈಕೆಯ ಕೊಲೆಗೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆತ ಮೆಗ್ಗಾನ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಪೊಲೀಸ್ ತನಿಖೆಯ ನಂತರದಲ್ಲಿ ಪೂರ್ಣ ಸತ್ಯಾಸತ್ಯತೆ ಹೊರಗೆ ಬರಬೇಕಾಗಿದೆ. ಶಂಕೆಗಳಿಗೆ ಉತ್ತರ ಆಗಷ್ಟೇ ಸಿಗಬೇಕಿದೆ.